August 26, 2026
Karavali Suddi | Bilingual Kannada/English Weekly Newspaper | ಕರಾವಳಿ ಸುದ್ದಿ - ಅರವಿನತ್ತ ನಮ್ಮ ಚಿತ್ತ
Follow Us
News

ಮಂಗಳೂರಿನ ಹಿದಾಯ ಫೌಂಡೇಶನ್ ಕೇಂದ್ರ ಸಮಿತಿಯ ನೂತನ ಅಧ್ಯಕ್ಷರಾಗಿ  9 ನೇ ಬಾರಿಗೆ ಹನೀಫ್ ಹಾಜಿ ಗೋಳ್ತಮಜಲು ಆಯ್ಕೆ

ಮಂಗಳೂರು : ಹಿದಾಯ ಫೌಂಡೇಶನ್ ಕೇಂದ್ರ ಸಮಿತಿಯ ವಾರ್ಷಿಕ ಮಹಾಸಭೆಯು ಸಮಿತಿಯ ಅಧ್ಯಕ್ಷ ಮೊಹಮ್ಮದ್ ಹನೀಫ್ ಹಾಜಿ ಗೋಳ್ತಮಜಲು ಇವರ ಅಧ್ಯಕ್ಷತೆಯಲ್ಲಿ ಮಂಗಳೂರಿನ ಅಲ್ ಇಹ್ಸಾನ್ ಸಭಾಂಗಣದಲ್ಲಿ ಸಪ್ಟಂಬರ್ 24ರಂದು ನಡೆಯಿತು.

ವೀಕ್ಷಕರಾಗಿ ಭಾಗವಹಿಸಿದ್ದ ಟ್ರಸ್ಟ್ ನ ನಿಕಟಪೂರ್ವ ಚೇರ್ಮ್ಯಾನ್ ಮಾನ್ಸೂರ್ ಅಹಮದ್ ಮತ್ತು ಕಾರ್ಯದರ್ಶಿ ಅಬ್ಬಾಸ್ ಉಚ್ಚಿಲ್ ಅವರು ಸಂಸ್ಥೆಯ ಬಲವರ್ಧನೆಗೆ ಸದಸ್ಯರು ಯಾವ ರೀತಿ ತಮ್ಮ ಕೊಡುಗೆಗಳನ್ನು ನೀಡಬಹುದು ಎಂಬುದರ ಬಗ್ಗೆ ಮಾಹಿತಿ ನೀಡಿದರು. ಸಂಸ್ಥೆಯ ಗತ ಸಾಲಿನ ಮತ್ತು ಗ್ಲೋಬಲ್ ಮೀಟ್ ನಂತರದ ಚಟುವಟಿಕೆಗಳ ವರದಿಯನ್ನು ಸಭೆಯಲ್ಲಿ ಮಂಡಿಸಲಾಯಿತು. ಸದಸ್ಯರು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು. ಬಳಿಕ ನೂತನ ಕಾರ್ಯಕಾರಿ ಸಮಿತಿಯನ್ನು ರಚಿಸಲಾಯಿತು. ಉಪಾಧ್ಯಕ್ಷ ಆಸೀಫ್ ಇಕ್ಬಾಲ್ ಸ್ವಾಗತಿಸಿ, ಮಕ್ಬೂಲ್ ಅಹಮದ್ ಕಿರಾತ್ ಪಠಿಸಿದರು ಹಾಗೂ ಶೇಖ್ ಇಸಾಕ್ ಕಡಬ ವಂದಿಸಿದರು.

 ನೂತನ ಅಧ್ಯಕ್ಷರಾಗಿ 9 ನೇ ಬಾರಿಗೆ ಹನೀಫ್ ಹಾಜಿ ಪುನರಾಯ್ಕೆ

 ನೂತನ ಅಧ್ಯಕ್ಷರಾಗಿ ಮುಹಮ್ಮದ್ ಹನೀಫ್ ಹಾಜಿ ಗೋಳ್ತಮಜಲು, ಉಪಾಧ್ಯಕ್ಷರುಗಳಾಗಿ ಮಕ್ಬೂಲ್ ಅಹಮದ್ ಕುದ್ರೋಳಿ, ಆಸೀಫ್ ಇಕ್ಬಾಲ್ ಫರಂಗಿಪೇಟೆ, ಇದ್ದಿನ್ ಕುಂಞ, ಕಾರ್ಯದರ್ಶಿಯಾಗಿ ಶೇಕ್ ಇಸಾಕ್ ಕಡಬ, ಜೊತೆ ಕಾರ್ಯದರ್ಶಿಯಾಗಿ ಅಬ್ದುಲ್ ಹಕೀಂ ಕಲಾಯಿ, ಮಾಧ್ಯಮ ಕಾರ್ಯದರ್ಶಿಯಾಗಿ ಆಶಿಕ್ ಕುಕ್ಕಾಜೆ ಆಯ್ಕೆಯಾದರು. ಆಡಳಿತಾಧಿಕಾರಿಯಾಗಿ ಆಬಿದ್ ಅಸ್ಗರ್ ಕಾರ್ಯನಿರ್ವಹಿಸುವರು.

ಅಬ್ದುಲ್ ರಝಾಕ್, ಕೆ.ಎಸ್. ಅಬೂಬಕ್ಕರ್, ಪಿ. ಮೊಹಮ್ಮದ್,  ಅಬ್ದುಲ್ ಹಮೀದ್ ಜಿ., ಇಬ್ರಾಹಿಂ ಪರ್ಲಿಯಾ, ಜುನೈದ್ ಬಂಟ್ವಾಳ, ಶರೀಪ್ ಮುಕ್ರಂಪಾಡಿ, ಖಲೀಲ್ ಅಹಮದ್, ಅಬ್ದುಲ್  ರಹಿಮಾನ್ ಯೂನಿಕ್, ಸಾದಿಕ್ ಹಸನ್, ಇಲ್ಯಾಸ್ ಕಕ್ಕಿಂಜೆ, ಹಕೀಂ ಸುನ್ನತ್ ಕೆರೆ, ಅಬೂಬಕ್ಕರ್, ಸಿದ್ದೀಕ್ ಮಂಗಳೂರು, ಅಬ್ದುಲ್ ರಹಿಮಾನ್  ಬಕ್ಷ್, ಬಿ.ಎಂ. ತುಂಬೆ, ಅಬ್ದುಲ್ ರಝಾಕ್ ಕುಪ್ಪೆಪದವು, ಅಬ್ದುಲ್ಲಾ ಮಂಗಳೂರು, ಆನಿಯಾ ಹಂಝ ಬಸ್ತಿ ಕೋಡಿ, ಬಶೀರ್ ವಗ್ಗ, ರಶೀದ್ ಕಕ್ಕಿಂಜೆ, ಉಮ್ಮರ್ ಕರಾವಳಿ, ಜಬ್ಬಾರ್ ಬೆಂಗರೆ, ಝಿಯಾವುದ್ದೀನ್, ಇಸ್ಮಾಯಿಲ್ ನೆಲ್ಯಾಡಿ ಮೊದಲಾದವರು ಭಾಗವಹಿಸಿದ್ದರು.

You may also like

News

ಮಡಂತ್ಯಾರಿನಲ್ಲಿ ಸಂಭ್ರಮದ ಕೊಂಕಣಿ ಮಾನ್ಯತಾ ದಿವಸ್

ಕೊಂಕಣಿ ಭಾಷೆ, ಸಂಸ್ಕೃತಿ ಹಾಗೂ ಪರಂಪರೆಯನ್ನು ಸಂರಕ್ಷಿಸಿ, ಮುಂದಿನ ಪೀಳಿಗೆಗೆ ಪರಿಚಯಿಸುವ ಉದ್ದೇಶದಿಂದ ಐಸಿವೈಎಂ ಮಡಂತ್ಯಾರು ಘಟಕ, ಸಾಮಾಜಿಕ ಸಂವಹನ ಆಯೋಗ, ಕಥೊಲಿಕ್ ಸಭಾ ಮಡಂತ್ಯಾರು ಹಾಗೂ
News

ಸಂಚಾರ ನಿಯಮ ಉಲ್ಲಂಘನೆ – ಪುತ್ತೂರಿನಲ್ಲಿ ಗ್ಲಾಸ್ ಸ್ಟಿಕ್ಕರ್ ಅಳವಡಿಸಿದ ಹಾಗೂ ನಂಬರ್ ಪ್ಲೇಟ್ ಮರೆಮಾಚಿದ ವಾಹನಗಳಿಗೆ ಪೊಲೀಸರ ದಂಡ!

ಪುತ್ತೂರು: ವಾಹನಗಳ ಗ್ಲಾಸ್‌ಗಳಿಗೆ ದಟ್ಟವಾದ ಸ್ಟಿಕ್ಕರ್ ಅಳವಡಿಸಿ ಚಾಲನೆಗೆ ಅಡ್ಡಿಪಡಿಸುತ್ತಿದ್ದ ಹಾಗೂ ನೋಂದಣಿ ಸಂಖ್ಯೆ (ನಂಬರ್ ಪ್ಲೇಟ್) ಮರೆಮಾಚುವ ರೀತಿಯಲ್ಲಿ ಸ್ಟಿಕ್ಕರ್‌ಗಳನ್ನು ಹಾಕಿ ಸಂಚಾರ ನಿಯಮಗಳನ್ನು ಉಲ್ಲಂಘಿಸಿ

You cannot copy content of this page