July 10, 2026
Karavali Suddi | Bilingual Kannada/English Weekly Newspaper | ಕರಾವಳಿ ಸುದ್ದಿ - ಅರವಿನತ್ತ ನಮ್ಮ ಚಿತ್ತ
Follow Us
News

ಪಾಣೆಮಂಗಳೂರು ಶ್ರೀ ಶಾರದ ಪ್ರೌಢಶಾಲೆಯಲ್ಲಿ 69ನೇ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮ

ಬಂಟ್ವಾಳ :ಪಾಣೆಮಂಗಳೂರು ಶ್ರೀ ಶಾರದ ಪ್ರೌಢಶಾಲೆಯಲ್ಲಿ 69ನೇ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮ  ಆಚರಿಸಲಾಯಿತು.

 ಪಾಣೆಮಂಗಳೂರು ಎಜುಕೇಶನ್ ಸೊಸೈಟಿಯ ಅಧ್ಯಕ್ಷ ಎನ್. ನರೇಂದ್ರನಾಥ ಕುಡ್ವಾ ಧ್ವಜಾರೋಹಣ ನೆರವೇರಿಸಿ, ನಂತರ ನಡೆದ ಸಭಾ ಕಾರ್ಯಕ್ರಮದಲ್ಲಿ ದೀಕ್ಷಾ ಮತ್ತು ಬಳಗದವರು ನಾಡಗೀತೆಯನ್ನು ಹಾಡಿದರು. ವಿದ್ಯಾರ್ಥಿಗಳೇ ರಚಿಸಿದ ಕರ್ನಾಟಕ ಭೂಪಟಕ್ಕೆ ಸಾಂಕೇತಿಕವಾಗಿ 69 ದೀಪಗಳನ್ನು ಹಚ್ಚುವುದರ ಮೂಲಕ ಆಡಳಿತ ಮಂಡಳಿಯ ಅಧ್ಯಕ್ಷರು, ಶಾಲಾ ಸಂಚಾಲಕರು, ಮುಖ್ಯ ಅತಿಥಿಗಳು, ಶಿಕ್ಷಕರು, ಶಿಕ್ಷಕೇತರರು ಮತ್ತು ವಿದ್ಯಾರ್ಥಿಗಳೊಡಗೂಡಿ ಕಾರ್ಯಕ್ರಮದ ಉದ್ಘಾಟನೆ ನೆರವೇರಿಸಲಾಯಿತು.

ಸಾಹಿತಿ ಕವಿ ಜಯಾನಂದ ಪೆರಾಜೆ ಹಾಗೂ ಪಾಣೆಮಂಗಳೂರಿನ ಆಶಾಕಾರ್ಯಕರ್ತೆ ಜ್ಯೋತಿಲಕ್ಷ್ಮಿಯವರ ಸೇವೆಯನ್ನು ಗುರುತಿಸಿ ಸನ್ಮಾನಿಸಿ ಗೌರವಿಸಲಾಯಿತು. ಸನ್ಮಾನ ಸ್ವೀಕರಿಸಿದ ಜಯಾನಂದ ಪೆರಾಜೆ ಕನ್ನಡ ನಾಡು, ನುಡಿ, ಭಾಷೆ, ಸಾಹಿತ್ಯ, ಸಂಸ್ಕೃತಿ, ಕನ್ನಡ ಹಿರಿಮೆ ಗರಿಮೆ, ಕನ್ನಡ ಪರಂಪರೆ ಕನ್ನಡವನ್ನು ಕಟ್ಟಿ ಬೆಳೆಸುವಲ್ಲಿ ಕಾರಣಿಭೂತರಾದ ಕನ್ನಡದ ಮಹಾನ್ ಕವಿಗಳು ಹಾಗೂ ನಮ್ಮ ದಕ್ಷಿಣ ಕನ್ನಡದ ಮತ್ತು ಬಂಟ್ವಾಳ ತಾಲೂಕಿನ ಮೇರು ಸಾಹಿತಿಗಳನ್ನು ಕುರಿತಂತೆ ಅವರೆಲ್ಲರ ಸಾಧನೆಯನ್ನು ಪರಿಚಯಿಸುವುದರ ಮೂಲಕ ಕನ್ನಡ ರಾಜ್ಯೋತ್ಸವದ ಮಹತ್ವವನ್ನು ಅತ್ಯಂತ ಅರ್ಥಪೂರ್ಣವಾಗಿ ಮನವರಿಕೆ ಮಾಡಿಕೊಟ್ಟರು.

ನವ್ಯ ಮತ್ತು ಒಳಗದವರು ಹಚ್ಚೇವು ಕನ್ನಡದ ದೀಪ ಹಾಡನ್ನು ಹಾಡಿದರು. ಈ ಸಂದರ್ಭದಲ್ಲಿ ಶಾಲಾ ಸಂಚಾಲಕರಾದ ಡಾ. ಪಿ. ವಿಶ್ವನಾಥ ನಾಯಕ್, ಮುಖ್ಯ ಶಿಕ್ಷಕ ಶಿವಪ್ಪ ನಾಯ್ಕ, ಶಾಲೆಯ ಹಿರಿಯ ಶಿಕ್ಷಕಿ  ಸುಧಾ,  ಶಾಲಾ ನಾಯಕ ಮನ್ವಿತ್ ಸಿ. ಪೂಜಾರಿ ಉಪಸ್ಥಿತರಿದ್ದರು.

ಶಾಲಾ ಮುಖ್ಯ ಶಿಕ್ಷಕರಾದ ಶ್ರೀ ಶಿವಪ್ಪ ನಾಯಕ್ ಸ್ವಾಗತಿಸಿ, ಕನ್ನಡ ಭಾಷಾ ಆಧ್ಯಾಪಕರಾದ ಧನರಾಜ್ ದೊಡ್ಡನೇರಳೆ ಪ್ರಾಸ್ತಾವಿಕ ಮಾತುಗಳನ್ನಾಡಿ, ವಿದ್ಯಾರ್ಥಿನಿ ಶೈಮಾ ಅತಿಥಿಗಳ ಪ್ರಶಸ್ತಿ ಪತ್ರ ವಾಚಿಸಿ, ಖತೀಜತುಲ್ ಸಹಬೀರ ವಂದಿಸಿ, ಅಬ್ದುಲ್ ರಾಝಿಕ್ ಕಾರ್ಯಕ್ರಮ ನಿರೂಪಿಸಿದರು.

You may also like

News

Father Muller Ushers in a New Era of Precision Orthopaedics with the Region’s First STRYKER–USA MAKO SmartRobotics™ System

Father Muller Medical College Hospital has once again reaffirmed its commitment to pioneering excellence in healthcare with the commissioning of
News

41 ಬಾರಿ ವಾರೆಂಟ್ ಜಾರಿಯಾಗಿದ್ದ ಖತರ್ನಾಕ್ ಆರೋಪಿ ನೆಲ್ಸನ್ ಕೊನೆಗೂ ಪುತ್ತೂರು ಪೊಲೀಸರ ವಶಕ್ಕೆ!

ಕಳೆದ 5 ವರ್ಷಗಳಿಂದ ನ್ಯಾಯಾಲಯಕ್ಕೆ ಹಾಜರಾಗದೆ ತಲೆಮರೆಸಿಕೊಂಡಿದ್ದ, ಬರೋಬ್ಬರಿ 41 ಬಾರಿ ದಸ್ತಗಿರಿ ವಾರೆಂಟ್ ಆದೇಶವಾಗಿದ್ದ ದರೋಡೆ ಪ್ರಕರಣದ ಪ್ರಮುಖ ಆರೋಪಿಯನ್ನು ಪುತ್ತೂರು ನಗರ ಪೊಲೀಸರು ಕೇರಳದಲ್ಲಿ

You cannot copy content of this page