May 7, 2026
Karavali Suddi | Bilingual Kannada/English Weekly Newspaper | ಕರಾವಳಿ ಸುದ್ದಿ - ಅರವಿನತ್ತ ನಮ್ಮ ಚಿತ್ತ
Follow Us
News

ಹಿಂದುಳಿದ ವರ್ಗದ ಧಾರ್ಮಿಕ ಸಮಾನತೆಯ ಹರಿಕಾರರು ನಾರಾಯಣ ಗುರುಗಳು – ಗಣೇಶ್ ಪೂಂಜರೆಕೋಡಿ

ಬಂಟ್ವಾಳ : ನಾರಾಯಣ  ಗುರುಗಳು ಎಲ್ಲಾ ಹಿಂದುಳಿದ ವರ್ಗದವರಿಗೆ ಧೈರ್ಯ ತುಂಬಿ ಈ ಭೂಮಿಯಲ್ಲಿ ಸಮಾನತೆಯ ಬದುಕನ್ನು ಕಟ್ಟಿಕೊಳ್ಳಲು ಮಾಡಿದ ಕ್ರಾಂತಿಯಿಂದಾಗಿ ಇಂದು ಎಲ್ಲಾ ಹಿಂದುಳಿದ ಮಧ್ಯಮ‌ ವರ್ಗದ ಜನರು ಮುನ್ನಡೆಯುವಂತಾಗಿದೆ‌ ಎಂದು ಯುವವಾಹಿನಿ ಬಂಟ್ಟಾಳ ಘಟಕದ ಮಾಜಿ ಅಧ್ಯಕ್ಷ ಗಣೇಶ್ ಪೂಂಜರೆಕೋಡಿ ತಿಳಿಸಿದರು. ಅವರು ನವಂಬರ್ 7 ರಂದು ಸುಲತ ಬಿ.ಸಿ. ರೋಡ್ ಇವರ ಮನೆಯಲ್ಲಿ ನಡೆದ ಗುರುತತ್ವವಾಹಿನಿ ಮಾಲಿಕೆ 19ರಲ್ಲಿ ಗುರುಸಂದೇಶ ನೀಡಿ ಮಾತನಾಡಿದರು.

ಈ ಸಂದರ್ಭದಲ್ಲಿ ಯುವವಾಹಿನಿ ಬಂಟ್ವಾಳ ಘಟಕದ ಅಧ್ಯಕ್ಷ ದಿನೇಶ್ ಸುವರ್ಣ ರಾಯಿ, ನಾರಾಯಣ ಗುರು ತತ್ವ ಪ್ರಚಾರ ಮತ್ತು ಅನುಷ್ಠಾನ ನಿರ್ದೇಶಕ ಪ್ರಜಿತ್ ಅಮೀನ್ ಏರಮಲೆ, ನಿರ್ದೇಶಕರಾದ ಮಹೇಶ್ ಬೊಳ್ಳಾಯಿ, ಧನುಷ್ ಮಧ್ವ, ಉದಯ್ ಮೆನಾಡ್, ಗೀತಾ ಜಗದೀಶ್, ನಿಕಟಪೂರ್ವ ಅಧ್ಯಕ್ಷ ಹರೀಶ್ ಕುದನೆ, ಮಾಜಿ ಅಧ್ಯಕ್ಷರಾದ ನಾಗೇಶ್ ಪೊನ್ನೋಡಿ, ಪ್ರೇಮನಾಥ್ ಕರ್ಕೇರ, ಶಿವಾನಂದ ಎಂ., ರಾಜೇಶ್ ಸುವರ್ಣ, ಅರುಣ್ ಬಿ.ಸಿ. ರೋಡ್, ಸದಸ್ಯರಾದ ನಾಗೇಶ್ ಏಲಬೆ, ಸೂರಜ್ ತುಂಬೆ, ಹರೀಶ್ ಅಜೆಕಲಾ, ವಿಘ್ನೇಶ್ ಬೊಳ್ಳಾಯಿ, ಯಶೋಧರ ಕಡಂಬಲ್ಕೆ, ನಯನಾ ಪಚ್ಚಿನಡ್ಕ, ತೃಪ್ತಿ ಪಚ್ಚಿನಡ್ಕ, ಸುದೀಪ್ ರಾಯಿ, ಸಂದೀಪ್ ಬೊಳ್ಳಾಯಿ, ಅರ್ಜುನ್ ಅರಳ, ಯತೀಶ್ ಬೊಳ್ಳಾಯಿ, ಮತ್ತಿತರರು ಉಪಸ್ಥಿತರಿದ್ದರು.

You may also like

News

12 ವರ್ಷಗಳಿಂದ ವಿದೇಶದಲ್ಲಿ ತಲೆಮರೆಸಿಕೊಂಡಿದ್ದ ಆರೋಪಿ ಮುಂಬೈ ವಿಮಾನ ನಿಲ್ದಾಣದಲ್ಲಿ ದಸ್ತಗಿರಿ

ಆತ್ಮಹತ್ಯೆಗೆ ಪ್ರಚೋದನೆ ನೀಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಕಳೆದ 12 ವರ್ಷಗಳಿಂದ ನ್ಯಾಯಾಲಯಕ್ಕೆ ಹಾಜರಾಗದೆ ವಿದೇಶದಲ್ಲಿ ತಲೆಮರೆಸಿಕೊಂಡಿದ್ದ ಆರೋಪಿಯನ್ನು ಬಂಟ್ವಾಳ ಗ್ರಾಮಾಂತರ ಪೊಲೀಸರು ಯಶಸ್ವಿಯಾಗಿ ಬಂಧಿಸಿದ್ದಾರೆ. ಘಟನೆಯ ವಿವರ:
News

ಸಾಹಿತ್ಯ ಸಂಭ್ರಮ – ಮೇ 10ರಂದು ವಲ್ಲಿ ವಗ್ಗ ಅವರ ‘ವಿಂಚ್ಣಾರ್ ಕಾಣಿಯೊ’ ಕೃತಿ ಲೋಕಾರ್ಪಣೆ

ಕೊಂಕಣಿ ಸಾಹಿತ್ಯ ಲೋಕದ ಹಿರಿಯ ಸಾಹಿತಿ ವಲ್ಲಿ ವಗ್ಗ (ವಲೇರಿಯನ್ ಡಿಸೋಜ) ಅವರ ಬಹುನಿರೀಕ್ಷಿತ ನೂತನ ಕೃತಿ ‘ವಿಂಚ್ಣಾರ್ ಕಾಣಿಯೊ’ ಬಿಡುಗಡೆಗೆ ಸಜ್ಜಾಗಿದೆ. ಈ ಪುಸ್ತಕ ಲೋಕಾರ್ಪಣೆ

You cannot copy content of this page