May 16, 2026
Karavali Suddi | Bilingual Kannada/English Weekly Newspaper | ಕರಾವಳಿ ಸುದ್ದಿ - ಅರವಿನತ್ತ ನಮ್ಮ ಚಿತ್ತ
Follow Us
News

ದಕ್ಷಿಣ ಕನ್ನಡ ಜಿಲ್ಲಾ ಜಂಇಯ್ಯತುಲ್ ಮುಅಲ್ಲಿಮೀನ್ ವತಿಯಿಂದ ಮನೆ ಹಸ್ತಾಂತರ

ಬೆಳ್ತಂಗಡಿ: ದಕ್ಷಿಣ ಕನ್ನಡ ಜಿಲ್ಲಾ ಜಂಇಯ್ಯತುಲ್ ಮುಅಲ್ಲಿಮೀನ್ ವತಿಯಿಂದ ಮರ್ಹೂಂ ರಮಳಾನ್ ಅಝ್ಹರಿಯವರ ಕುಟುಂಬಕ್ಕೆ ಕಾಜೂರು ಪೆರ್ದಾಡಿನಲ್ಲಿ ಪುನರ್ ನಿರ್ಮಾಣಗೊಂಡ ಮನೆ ಕೀ ಹಸ್ತಾಂತರ ನೇತೃತ್ವ ಶೈಖುನಾ ತ್ವಾಖಾ ಅಹ್ಮದ್ ಮುಸ್ಲಿಯಾರ್ ದಕ್ಷಿಣ ಕನ್ನಡ ಜಿಲ್ಲಾ ಖಾಝಿ ನೆರವೇರಿಸಿದರು.

ಜಿಲ್ಲಾ ಜಂಇಯ್ಯತುಲ್ ಮುಅಲ್ಲಿಮೀನ್ ಅಧ್ಯಕ್ಷ ಶಂಸುದ್ದೀನ್ ದಾರಿಮಿ ಪಮ್ಮಲೆ ಮಾಡನ್ನೂರು ಅಧ್ಯಕ್ಷತೆ ವಹಿಸಿದರು. ಕಾರ್ಯಕ್ರಮಕ್ಕೆ ಜಿಲ್ಲಾ ಜಂಇಯ್ಯತುಲ್ ಮುಅಲ್ಲಿಮೀನ್ ಕಾರ್ಯದರ್ಶಿ ಮುಹಮ್ಮದ್ ನವವಿ ಮುಂಡೋಲೆ ಸುಳ್ಯ ಸ್ವಾಗತಿಸಿದರು. ಈ ಸಂದರ್ಭದಲ್ಲಿ ಅಚ್ಚುಕಟ್ಟಾಗಿ ನಿರ್ಮಿಸಿ ಕೊಟ್ಟ ಇಂಜಿನಿಯರ್ ಮುಹಮ್ಮದ್ ತ್ವಾಹಿರ್ ಬಂಗೇರಕಟ್ಟೆ ಇವರಿಗೆ ಸನ್ಮಾನಿಸಲಾಯಿತು.

 

ಜಿಲ್ಲಾ ಜಂಇಯ್ಯತುಲ್ ಮುಅಲ್ಲಿಮೀನ್ ಉಪಾಧ್ಯಕ್ಷ ಅಶ್ರಫ್ ಫೈಝಿ ಬೆಳ್ತಂಗಡಿ, SKSBV ಜಿಲ್ಲಾ ಕನ್ವೀನರ್ ಅಶ್ರಫ್ ಹನೀಫಿ ಕರಾಯ, ಮುಹಮ್ಮದಲೀ ದಾರಿಮಿ ಕುಕ್ಕಾಜೆ, SKSSF ಈಸ್ಟ್ ಜಿಲ್ಲಾ ಕಾರ್ಯದರ್ಶಿ ಹಾರಿಸ್ ಕೌಸರಿ, ಜಿಲ್ಲಾ ಜಂಇಯ್ಯತುಲ್ ಮುಅಲ್ಲಿಮೀನ್ ಕೌನ್ಸಿಲ್ ಅಬ್ದುಲ್ ರಝಾಕ್ ಮದನಿ ಸುರತ್ಕಲ್ ರೇಂಜ್, ರಫೀಕ್ ದಾರಿಮಿ ಮೂಡುಬಿದ್ರೆ ರೇಂಜ್, ಫಳುಲುದ್ದೀನ್ ಮುಸ್ಲಿಯಾರ್ ಮಂಗಳೂರು ರೇಂಜ್, ನಿಸಾರ್ ಮುಸ್ಲಿಯಾರ್ ಬಂಟ್ವಾಳ ರೇಂಜ್, ಕೆ.ಎಂ. ಸಿದ್ದೀಕ್ ಫೈಝಿ ಕರಾಯ, ಬೆಳ್ತಂಗಡಿ ರೇಂಜ್ ಕಾರ್ಯದರ್ಶಿ ಅಬ್ದುಲ್ ಅಝೀಝ್ ಅಶ್ಶಾಫಿ, ಹಮೀದ್ ಫೈಝಿ ಗುರುಪುರ, ಹಾಗೂ ಬೆಳ್ತಂಗಡಿ ರೇಂಜ್ ಅಧ್ಯಾಪಕರು, ಕಾಜೂರು ಪೆರ್ದಾಡಿ ಅಜ್ಮೀರ್ ಖಾಜ ಜುಮಾ ಮಸೀದಿಯ ಆಡಳಿತ ಮಂಡಳಿಯ ಸದಸ್ಯರು ಊರಿನ ನೇತಾರರು ಬಾಗವಹಿಸಿದರು.

You may also like

News

ಧರ್ಮಾಧ್ಯಕ್ಷರಾಗಿ 30 ವರ್ಷಗಳ ಸೇವೆ – ನಿವೃತ್ತ ಬಿಷಪ್ ಅಲೋಶಿಯಸ್ ಪಾವ್ಲ್ ಡಿಸೋಜ ಅವರಿಗೆ ಜೆಪ್ಪುವಿನಲ್ಲಿ ಭವ್ಯ ಸನ್ಮಾನ

ಮಂಗಳೂರು ಧರ್ಮಕ್ಷೇತ್ರದ ನಿವೃತ್ತ ಬಿಷಪ್, ‘ಜನರ ಬಿಷಪ್’ ಎಂದೇ ಖ್ಯಾತರಾದ ಪರಮ ಪೂಜ್ಯ ಅತೀ ವಂದನೀಯ ಡಾ. ಅಲೋಶಿಯಸ್ ಪಾವ್ಲ್ ಡಿಸೋಜ ಅವರು ಧರ್ಮಾಧ್ಯಕ್ಷರಾಗಿ ದೀಕ್ಷೆ ಸ್ವೀಕರಿಸಿದ
News

ಮಣಿಪುರದಲ್ಲಿ ಪಾಸ್ಟರ್‌ಗಳ ಕ್ರೂರ ಹತ್ಯೆ – ಪ್ರೊಟೆಸ್ಟಂಟ್ ಕ್ರೈಸ್ತರ ಮಹಾಸಭಾ (DAPC) ತೀವ್ರ ಖಂಡನೆ

ಮಣಿಪುರದ ಕಾಂಗ್‌ಪೋಕ್ಪಿ ಜಿಲ್ಲೆಯಲ್ಲಿ ಇತ್ತೀಚೆಗೆ ಪಾಸ್ಟರ್‌ಗಳು ಮತ್ತು ಅವರ ಸಂಗಾತಿಯ ಮೇಲೆ ನಡೆದ ಕ್ರೂರ ಹತ್ಯೆಯನ್ನು ಭಾರತದಲ್ಲಿನ ‘ಡಯೋಸಿಸ್ ಆಫ್ ಆಲ್ ಪ್ರೊಟೆಸ್ಟೆಂಟ್ ಚರ್ಚ್’ (DAPC) ಮತ್ತು

You cannot copy content of this page