September 5, 2026
Karavali Suddi | Bilingual Kannada/English Weekly Newspaper | ಕರಾವಳಿ ಸುದ್ದಿ - ಅರವಿನತ್ತ ನಮ್ಮ ಚಿತ್ತ
Follow Us
News

ದೇಶದ ಅತ್ಯಂತ ಕಿರಿಯ ಪೈಲಟ್ ಆದ ಕೀರ್ತಿ ವಿಜಯಪುರದ ಸಮೈರಾ ಮಡಲಿಗೆ

ಗುಮ್ಮಟಿ ನಗರಿ ವಿಜಯಪುರ ಜಿಲ್ಲೆಯ ಸಮೈರಾ ಎಂಬ ಯುವತಿಯೊಬ್ಬರು ದೇಶದ ಅತ್ಯಂತ ಕಿರಿಯ ಪೈಲಟ್ ಆದ ಕೀರ್ತಿ ತನ್ನ ಮಡಿಲಿಗೆ ಗಿಟ್ಟಿಸಿಕೊಂಡು ವಿಜಯಪುರ ಹಾಗೂ ರಾಜ್ಯದ ಹಿರಿಮೆ ಹೆಚ್ಚಿಸಿದ್ದಾರೆ.

ಐತಿಹಾಸಿಕ ಜಿಲ್ಲೆಯಾಗಿ ವಿಜಯಪುರ ಹೆಚ್ಚು ಪ್ರಖ್ಯಾತಿ ಪಡೆದಿದೆ. ಜೊತೆಗೆ ಜಿಲ್ಲೆಯ ಅನೇಕರು ರಾಜ್ಯ ಸೇರಿದಂತೆ ದೇಶಕ್ಕೆ ಕೀರ್ತಿ ತಂದಿದ್ದಾರೆ. ಕ್ರೀಡೆ, ವಿಜ್ಞಾನ, ಸಾಹಿತ್ಯ ಸೇರಿದಂತೆ ಅನೇಕ ಕ್ಷೇತ್ರದಲ್ಲಿ ಸಾಧನೆಗೈದವರಿದ್ದಾರೆ. ಇದೀಗ ಮತ್ತೊಂದು ಸಾಧನೆಯಿಂದ ಜಿಲ್ಲೆಯ ಹಾಗೂ ರಾಜ್ಯದ ಹಿರಿಮೆ ಹೆಚ್ಚಿದೆ. 18 ವರ್ಷದ ಸಮೈರಾ ಹುಲ್ಲೂರು ಕಮರ್ಶಿಯಲ್ ಪೈಲಟ್ ಲೈಸನ್ಸ್ ಪಡೆಯುವ ಮೂಲಕ ಅಭೂತಪೂರ್ವ ಸಾಧನೆ ಮಾಡಿದ್ದಾರೆ. ಈ ಸಾಧನೆಯಿಂದ ಕುಟುಂಬದಲ್ಲಿ ಸಂತೋಷ ಮನೆ ಮಾಡಿದೆ. ಇತಿಹಾಸ ಸೃಷ್ಟಿಸಿರುವ ಸಮೈರಾ ವಿಜಯಪುರ ಜಿಲ್ಲೆ ಮಾತ್ರವಲ್ಲದೇ ರಾಜ್ಯದ ಕೀರ್ತಿಯ ಪತಾಕೆಯನ್ನು ಹಾರಿಸಿದ್ದಾರೆ.

ತಮ್ಮ ಶಿಕ್ಷಣವನ್ನು ವಿಜಯಪುರದಲ್ಲಿ ಮುಗಿಸಿ, ಆರು ತಿಂಗಳ ಕಾಲ ದೆಹಲಿಯಲ್ಲಿ ಪೈಲಟ್ ಟ್ರೇನಿಂಗ್ ಮುಗಿಸಿ 18ನೇ ವಯಸ್ಸಿಗೆ ಪೈಲಟ್ ಆಗಿ ಹೊರಹೊಮ್ಮಿದ್ದಾರೆ. 25ನೇ ವಯಸ್ಸಿಗೆ ಪೈಲಟ್ ಆಗಿರುವ ಕ್ಯಾಪ್ಟನ್ ತಪೇಶ್ ಕುಮಾರ್ ಇವರ ಈ ಸಾಧನೆಗೆ ಪ್ರೇರಣೆಯಾಗಿದ್ದಾರೆ. ಸಮೈರಾಳ ಸಾಧನೆಗೆ ಜಿಲ್ಲೆ, ರಾಜ್ಯ ಹಾಗೂ ದೇಶದ ಹಲವೆಡೆಯಿಂದ ಶುಭಾಶಯಗಳ ಮಹಾಪೂರ ಹರಿದು ಬರುತ್ತಿದೆ. ಹೆಣ್ಣು ಮಕ್ಕಳನ್ನು ಕಡೆಗಣಿಸುವ ಜನರಿಗೆ ಸಮೈರಾ ಕುಟುಂಬ ಮಾದರಿ ಆಗಿದೆ. ಜೊತೆಗೆ ಇಂದಿನ ಕಾಲದ ಯುವ ಪೀಳಿಗೆಗೆ ಸಮೈರಾ ಇವರ ಸಾಧನೆ ಪ್ರೇರಣೆ ಆಗಿದೆ.

You may also like

News

ಸಮಾಜಸೇವೆಯ ಹಾದಿಗೆ ರಾಷ್ಟ್ರೀಯ ಕಿರೀಟ – ಕೋತ್ವಾಲ್ ಪದ್ಮನಾಭ ಶೇರುಗಾರ್‌ ಅವರಿಗೆ ‘ಆರ್ಯಭಟ ರಾಷ್ಟ್ರೀಯ ಪ್ರಶಸ್ತಿ’

ವಿವಿಧ ಕ್ಷೇತ್ರಗಳಲ್ಲಿ ಗಮನಾರ್ಹ ಸಾಧನೆ ಮಾಡುವುದರ ಜೊತೆಗೆ ಸಮಾಜಮುಖಿ ಸೇವೆಯಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿರುವ ಕೋತ್ವಾಲ್ ಪದ್ಮನಾಭ ಶೇರುಗಾರ್ ಅವರು ಪ್ರತಿಷ್ಠಿತ ‘ಆರ್ಯಭಟ ರಾಷ್ಟ್ರೀಯ ಪ್ರಶಸ್ತಿ–2026’ ಗೆ ಆಯ್ಕೆಯಾಗಿದ್ದಾರೆ.
News

WIM ಮಂಗಳೂರು ಗ್ರಾಮಾಂತರ ಜಿಲ್ಲಾ ಸಮಿತಿಗೆ ಜಿಲ್ಲಾಧ್ಯಕ್ಷೆಯಾಗಿ ಶಿನೀರ ಬಾನು ಪುನರಾಯ್ಕೆ – ಪ್ರಧಾನ ಕಾರ್ಯದರ್ಶಿಯಾಗಿ ಝರೀನಾ ಉಪ್ಪಿನಂಗಡಿ

ವಿಮೆನ್ ಇಂಡಿಯಾ ಮೂವ್ಮೆಂಟ್ (WIM) ಮಂಗಳೂರು ಗ್ರಾಮಾಂತರ ಜಿಲ್ಲಾ ಸಮಿತಿಯ ಪ್ರತಿನಿಧಿ ಸಭೆಯು ಪಾಣೆಮಂಗಳೂರಿನ ಹೆಚ್.ಹೆಚ್. ಕನ್ವೆನ್ಷನ್ ಸೆಂಟರ್‌ನಲ್ಲಿ ನಡೆಯಿತು. ಸಭೆಯಲ್ಲಿ ನೂತನ ಜಿಲ್ಲಾ ಪದಾಧಿಕಾರಿಗಳನ್ನು ಆಯ್ಕೆ

You cannot copy content of this page