September 5, 2026
Karavali Suddi | Bilingual Kannada/English Weekly Newspaper | ಕರಾವಳಿ ಸುದ್ದಿ - ಅರವಿನತ್ತ ನಮ್ಮ ಚಿತ್ತ
Follow Us
News

ಚಲನಚಿತ್ರ ನಟ ಉಪೇಂದ್ರ  ಬಂಟ್ವಾಳದ ಮೊಡಂಕಾಪು ವನದುರ್ಗ ದೇವಸ್ಥಾನಕ್ಕೆ ಭೇಟಿ

ಬಂಟ್ವಾಳ :  ಬಹುಭಾಷಾ ಚಲನಚಿತ್ರ ನಟ ಉಪೇಂದ್ರ ಅವರು  ಬಂಟ್ವಾಳ ತಾಲೂಕಿನ ಮೊಡಂಕಾಪು ಬಳಿಯ ವನದುರ್ಗ ದೇವಸ್ಥಾನಕ್ಕೆ ದಶಂಬರ್ 3ರಂದು ಮಂಗಳವಾರ ಭೇಟಿ ನೀಡಿ ಪ್ರಾರ್ಥನೆ ಸಲ್ಲಿಸಿದರು.

ಈ ಸಂದರ್ಭ ಅವರು ಸ್ವತಃ ನಿರ್ದೇಶಿಸಿ ನಟಿಸಿರುವ ಹೊಸ ಚಲನಚಿತ್ರ ‘ಯುಐ’ ಯಶಸ್ವಿಯಾಗಲೆಂದು ವನದುರ್ಗಾ ಕ್ಷೇತ್ರದಲ್ಲಿ ಸರ್ವಾಂಲಂಕಾರ ಸೇವೆ ಸಲ್ಲಿಸಿದರು. ಮಧ್ಯಾಹ್ನ ಪೂಜೆ ಬಳಿಕ ಕ್ಷೇತ್ರದಲ್ಲಿ ಅನ್ನದಾನ ಪ್ರಸಾದ ಪಡೆದು ಮಂಗಳೂರಿಗೆ ಪ್ರಯಾಣ ಬೆಳೆಸಿದರು. ಚಲನಚಿತ್ರ ನಿರ್ಮಾಪಕ ಶ್ರೀಕಾಂತ್, ಸಂಗೀತ ನಿರ್ದೇಶಕ ವೇಲುಹರಿ, ನವೀನ್ ಮನೋಹರ್ ಅವರ ಜೊತೆಗಿದ್ದರು. ಮೊಡಂಕಾಪು ವನದುರ್ಗ ಕ್ಷೇತ್ರದ ಗುರುದತ್ ಶೆಣೈ, ಪಾಂಡುರಂಗ ಶೆಣೈ ಉಪಸ್ಥಿತರಿದ್ದರು. ಮೊಡಂಕಾಪು ಕ್ಷೇತ್ರದಲ್ಲಿರುವ ವಿಶೇಷ ಕರೆಯ ಬಗ್ಗೆ ರಾಜೇಶ್ ಭಟ್ ಮಾಹಿತಿ ನೀಡಿದರು.

You may also like

News

ಸಮಾಜಸೇವೆಯ ಹಾದಿಗೆ ರಾಷ್ಟ್ರೀಯ ಕಿರೀಟ – ಕೋತ್ವಾಲ್ ಪದ್ಮನಾಭ ಶೇರುಗಾರ್‌ ಅವರಿಗೆ ‘ಆರ್ಯಭಟ ರಾಷ್ಟ್ರೀಯ ಪ್ರಶಸ್ತಿ’

ವಿವಿಧ ಕ್ಷೇತ್ರಗಳಲ್ಲಿ ಗಮನಾರ್ಹ ಸಾಧನೆ ಮಾಡುವುದರ ಜೊತೆಗೆ ಸಮಾಜಮುಖಿ ಸೇವೆಯಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿರುವ ಕೋತ್ವಾಲ್ ಪದ್ಮನಾಭ ಶೇರುಗಾರ್ ಅವರು ಪ್ರತಿಷ್ಠಿತ ‘ಆರ್ಯಭಟ ರಾಷ್ಟ್ರೀಯ ಪ್ರಶಸ್ತಿ–2026’ ಗೆ ಆಯ್ಕೆಯಾಗಿದ್ದಾರೆ.
News

WIM ಮಂಗಳೂರು ಗ್ರಾಮಾಂತರ ಜಿಲ್ಲಾ ಸಮಿತಿಗೆ ಜಿಲ್ಲಾಧ್ಯಕ್ಷೆಯಾಗಿ ಶಿನೀರ ಬಾನು ಪುನರಾಯ್ಕೆ – ಪ್ರಧಾನ ಕಾರ್ಯದರ್ಶಿಯಾಗಿ ಝರೀನಾ ಉಪ್ಪಿನಂಗಡಿ

ವಿಮೆನ್ ಇಂಡಿಯಾ ಮೂವ್ಮೆಂಟ್ (WIM) ಮಂಗಳೂರು ಗ್ರಾಮಾಂತರ ಜಿಲ್ಲಾ ಸಮಿತಿಯ ಪ್ರತಿನಿಧಿ ಸಭೆಯು ಪಾಣೆಮಂಗಳೂರಿನ ಹೆಚ್.ಹೆಚ್. ಕನ್ವೆನ್ಷನ್ ಸೆಂಟರ್‌ನಲ್ಲಿ ನಡೆಯಿತು. ಸಭೆಯಲ್ಲಿ ನೂತನ ಜಿಲ್ಲಾ ಪದಾಧಿಕಾರಿಗಳನ್ನು ಆಯ್ಕೆ

You cannot copy content of this page