ಬಂಟ್ವಾಳದ ನ್ಯಾಯಾಲಯದ ಆವರಣದಲ್ಲಿ ಸಂವಿಧಾನ ದಿನಾಚರಣೆ ಹಾಗೂ ವಕೀಲರ ದಿನಾಚರಣೆಯ ಪ್ರಯುಕ್ತ ಕಾನೂನು ಕಾರ್ಯಗಾರ
ಬಂಟ್ವಾಳ : ವಕೀಲರ ಸಂಘ ಬಂಟ್ವಾಳ, ಅಧಿವಕ್ತಾ ಪರಿಷತ್ ಕರ್ನಾಟಕ – ದಕ್ಷಿಣ ಪ್ರಾಂತ, ದಕ್ಷಿಣ ಕನ್ನಡ ಜಿಲ್ಲೆ ಹಾಗೂ ಬಂಟ್ವಾಳ ಘಟಕ ಇವುಗಳ ಜಂಟಿ ಅಶ್ರಯದಲ್ಲಿ ಸಂವಿಧಾನ ಹಾಗೂ ವಕೀಲರ ದಿನಾಚರಣೆಯ ಪ್ರಯುಕ್ತ ಕಾನೂನು ಕಾರ್ಯಗಾರ ಮಂಗಳವಾರ ಬಂಟ್ವಾಳದ ಜೆ.ಎಂ.ಎಫ್.ಸಿ ನ್ಯಾಯಾಲಯದ ಆವರಣದಲ್ಲಿ ನಡೆಯಿತು.

ಕಾರ್ಯಕ್ರಮವನ್ನು ಹಿರಿಯ ಸಿವಿಲ್ ನ್ಯಾಯಾಧೀಶರಾದ ಭಾಗ್ಯಮ್ಮ ಅವರು ಉದ್ಘಾಟಿಸಿದರು. ಬಂಟ್ವಾಳ ವಕೀಲರ ಸಂಘದ ಅಧ್ಯಕ್ಷ ರಿಚರ್ಡ್ ಡಿಕೊಸ್ತಾ ಎಂ. ಅಧ್ಯಕ್ಷತೆ ವಹಿಸಿದ್ದರು. ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿದ್ದ ಕಾರ್ಕಳದ ಹಿರಿಯ ನ್ಯಾಯವಾದಿ ಎಂ.ಕೆ. ವಿಜಯ್ ಕುಮಾರ್ ಅವರು ಪ್ರೊಫೆಶನಲ್ ಏಥಿಕ್ಸ್ ಇದರ ಬಗ್ಗೆ ಮಾಹಿತಿ ನೀಡಿದರು.

ಮುಖ್ಯ ಅತಿಥಿಗಳಾಗಿ ಹೆಚ್ಚುವರಿ ಸಿವಿಲ್ ನ್ಯಾಯಾಧೀಶರಾದ ಕೃಷ್ಣಮೂರ್ತಿ, ಅಧಿವಕ್ತಾ ಪರಿಷತ್ ಬಂಟ್ವಾಳದ ಅಧ್ಯಕ್ಷೆ ಉಮಾ ಏನ್. ಸೋಮಯಾಜಿ ಉಪಸ್ಥಿತರಿದ್ದರು. ಈ ಸಂದರ್ಭದಲ್ಲಿ ಅಧಿವಕ್ತಾ ಪರಿಷತ್ ನ ಸಮಾಜಿಕ ಕಾರ್ಯದ ಅಂಗವಾಗಿ ವಕೀಲರ ದಿನಾಚರಣೆಯ ಪ್ರಯುಕ್ತ ಪರಂಗಿಪೇಟೆ – ಅರ್ಕುಳದ ಶ್ರೀ ಮಾತಾ ಲಕ್ಷಣಿ ಶಾಂತಿಧಾಮ ಆಶ್ರಮಕ್ಕೆ ರೂಪಾಯಿ 32,000/ ಮೌಲ್ಯದ ಫ್ರಿಜ್ ನ್ನು ಆಶ್ರಮದ ಸ್ಥಾಪಕರಾದ ಹರೀಶ್ ಪೆರ್ಗಡೆಯವರಿಗೆ ಹಸ್ತಾಂತರಿಸಲಾಯಿತು. ಹಿರಿಯ ವಕೀಲರಾದ ಎಂ.ಕೆ. ವಿಜಯ್ ಕುಮಾರ್ ಅವರನ್ನು ಸನ್ಮಾನಿಸಲಾಯಿತು.

ಯುವ ವಕೀಲೆ ಸ್ವರ್ಣ ಗೌರಿ ಸ್ವಾಗತಿಸಿ, ಅಧಿವಕ್ತಾ ಪರಿಷತ್ ದಕ್ಷಿಣ ಕನ್ನಡ ಜಿಲ್ಲಾ ಸದಸ್ಯ ವೀರೇಂದ್ರ ಎಂ. ಸಿದ್ದಕಟ್ಟೆ ವಂದಿಸಿದರು. ನಿತಿನ್ ಕುಮಾರ್ ಕಾರ್ಯಕ್ರಮ ನಿರೂಪಿಸಿದರು.





