July 11, 2026
Karavali Suddi | Bilingual Kannada/English Weekly Newspaper | ಕರಾವಳಿ ಸುದ್ದಿ - ಅರವಿನತ್ತ ನಮ್ಮ ಚಿತ್ತ
Follow Us
News

ನೇರಳಕಟ್ಟೆಯಲ್ಲಿ ಭಾರತ್ ವೆಹಿಕಲ್ ಬಜಾರ್ ಸ್ಥಳಾಂತರಗೊಂಡು ಉದ್ಘಾಟನೆ

ಸೆಕೆಂಡ್ ಹ್ಯಾಂಡ್ ವಾಹನ ಮಾರಾಟದಲ್ಲಿ ಹೆಸರುವಾಸಿಯಾದ ಸಂಸ್ಥೆ

ಬಂಟ್ವಾಳ : ಸೆಕೆಂಡ್ ಹ್ಯಾಂಡ್ ಗೂಡ್ಸ್ ವಾಹನಗಳು, ಕಾರು, ದ್ವಿಚಕ್ರ ವಾಹನಗಳ ಮಾರಾಟದಲ್ಲಿ ಪ್ರಸಿದ್ದಿಯನ್ನು ಪಡೆದಿರುವ ಮಿತ್ತೂರಿನಲ್ಲಿ ಕಾರ್ಯಾಚರಿಸುತ್ತಿದ್ದ ಎಚ್.ಎಂ.ಎಸ್. ಗ್ರೂಪ್‌ನವರ ಭಾರತ್ ವೆಹಿಕಲ್ ಬಜಾರ್ ಸ್ಥಳಾಂತರಗೊಂಡು ನೇರಳಕಟ್ಟೆ ಜನಪ್ರಿಯ ಗಾರ್ಡನ್ ಬಳಿ ದಶಂಬರ್ 8ರಂದು ಭಾನುವಾರ ಬೆಳಿಗ್ಗೆ ಶುಭಾರಂಭಗೊಂಡಿತು.

ಸಯ್ಯಿದ್ ಹಂಝ ತಂಙಳ್ ಅಲ್ ಹಾದಿ ನೂತನ ಮಳಿಗೆಯನ್ನು ಉದ್ಘಾಟಿಸಿ ಸಂಸ್ಥೆಗೆ ಶುಭ ಹಾರೈಸಿದರು. ಕೊಡಾಜೆ ಬದ್ರಿಯಾ ಜುಮಾ ಮಸೀದಿ ಖತೀಬ್ ಅಬ್ದುಲ್ ಅಝೀಝ್ ದಾರಿಮಿ ಪೊನ್ಮಳ ಪ್ರಾರ್ಥನೆ ನೆರವೇರಿಸಿದರು. ಸಾಬುಚ್ಚ ತಿಂಗಳಾಡಿ, ಹಾರಿಸ್ ಮುಸ್ಲಿಯಾರ್, ಕೊಡಾಜೆ ಐಕ್ಯ ವೇದಿಕೆಯ ಅಧ್ಯಕ್ಷ ಫಾರೂಕ್ ಗೋಳಿಕಟ್ಟೆ, ಕೋಶಾಧಿಕಾರಿ ರಿಯಾಝ್ ನೇರಳಕಟ್ಟೆ, ಪ್ರಮುಖರಾದ ಹಮೀದ್ ಪರ್ಲೊಟ್ಟು, ಅಬ್ದುಲ್ ಖಾದರ್ ಕಬಕ, ಶರೀಫ್ ಸೂರ್ಯ, ಆಶಿಫ್ ಬೋಳಂತೂರು, ಇಬ್ರಾಹಿಂ ಎಸ್.ಎಂ.ಎಸ್. ಸಲೀಂ ಪರ್ಲೊಟ್ಟು ಮೊದಲಾದವರು ಉಪಸ್ಥಿತರಿದ್ದರು.

ಇದೇ ವೇಳೆ ಪ್ರಥಮ ಕಾರು ಖರೀದಿದಾರರಾದ ಜಾಫರ್ ಸ್ವಾದಿಕ್ ಅರ್ಶದಿ ಅವರಿಗೆ ಪಾಟ್ರಕೋಡಿ ತಂಙಳ್ ಅವರು ಕಾರಿನ ಕೀ ಹಸ್ತಾಂತರಿಸಿದರು. ಭಾರತ್ ವೆಹಿಕಲ್ ಬಜಾರ್ ಮಾಲೀಕ ಅಶ್ರಫ್ ತಿಂಗಳಾಡಿ ಸ್ವಾಗತಿಸಿ, ಪತ್ರಕರ್ತ ಲತೀಫ್ ನೇರಳಕಟ್ಟೆ ಕಾರ್ಯಕ್ರಮ ನಿರೂಪಿಸಿದರು.

You may also like

News

Father Muller Principal Wins Prestigious Global Young Investigator Award at MASCC/ISOO Congress in Australia

In a moment of immense pride for the nation and the physiotherapy fraternity, Prof. Cherishma Dsilva, Principal of Father Muller
News

ಮಂಗಳೂರಿನ ಸಂದೇಶ ಫೌಂಡೇಶನ್‌ನಲ್ಲಿ ಸ್ಪರ್ಧಾತ್ಮಕ ಪರೀಕ್ಷಾ ತರಬೇತಿಯ ಹೊಸ ಅಧ್ಯಾಯ

‘Mangalore IAS – A School for Civil Services’ಗೆ ಚಾಲನೆ ನೀಡಿದ ಬಳ್ಳಾರಿ ಧರ್ಮಕ್ಷೇತ್ರದ ಬಿಷಪ್ ಹೆನ್ರಿ ಡಿಸೋಜ ನಾಗರಿಕ ಸೇವೆಗಳ ಸ್ಪರ್ಧಾತ್ಮಕ ಪರೀಕ್ಷೆಗಳ ತರಬೇತಿಗೆ

You cannot copy content of this page