September 6, 2026
Karavali Suddi | Bilingual Kannada/English Weekly Newspaper | ಕರಾವಳಿ ಸುದ್ದಿ - ಅರವಿನತ್ತ ನಮ್ಮ ಚಿತ್ತ
Follow Us
News

ಕಾಸರಗೋಡು ನದಿಯಲ್ಲಿ ಸ್ನಾನಕ್ಕೆ ತೆರಳಿದ್ದ ರಿಯಾಜ್, ಯಾಸೀನ್ ಮತ್ತು ಸಮದ್ ಮೂವರು ವಿದ್ಯಾರ್ಥಿಗಳು ನೀರಲ್ಲಿ ಮುಳುಗಿ ಸಾವು

ಕಾಸರಗೋಡು: ನಗರದ ಸಮೀಪ ನದಿಯಲ್ಲಿ ಸ್ನಾನಕ್ಕೆ ತೆರಳಿದ್ದ ಮೂವರು ವಿದ್ಯಾರ್ಥಿಗಳು ನೀರಿನಲ್ಲಿ ಮುಳುಗಿ ಮೃತಪಟ್ಟ ಘಟನೆ ಕಾಸರಗೋಡು ಜಿಲ್ಲೆಯ ಎರಿಂಜಿಪುಳ ಪಯಸ್ವಿನಿ ನದಿಯಲ್ಲಿ ಸಂಭವಿಸಿದೆ. ಸಿದ್ದೀಕ್ ಅವರ ಪುತ್ರ 17 ವರ್ಷ ಪ್ರಾಯದ ರಿಯಾಜ್ ಅಶ್ರಫ್ ಅವರ ಪುತ್ರ 13 ವರ್ಷ ಪ್ರಾಯದ ಯಾಸೀನ್ ಮತ್ತು ಮಜೀದ್ ಅವರ ಪುತ್ರ 13 ವರ್ಷ ಪ್ರಾಯದ ಸಮದ್ ಮೃತ ವಿದ್ಯಾರ್ಥಿಗಳು ಎಂದು ತಿಳಿಯಲಾಗಿದೆ.

ಮಂಜೇಶ್ವರದಲ್ಲಿ ಪಿಯುಸಿ ಓದುತ್ತಿರುವ ರಿಯಾಝ್ ಶುಕ್ರವಾರ ಎರಿಂಜಿಪುಳ ಬಳಿಯ ತನ್ನ ಪೂರ್ವಜರ ಮನೆಗೆ ಬಂದಿದ್ದು, ಮೂವರು ಮಕ್ಕಳು ಮಧ್ಯಾಹ್ನ ತಮ್ಮ ಮನೆಯ ಸಮೀಪ ಇರುವ ಪಯಸ್ವಿನಿ ನದಿಯಲ್ಲಿ ಸ್ನಾನ ಮಾಡಲು ಹೋಗಿದ್ದ ಸಂದರ್ಭ ಈ ದುರಂತ ಸಂಭವಿಸಿದೆ. ಕಾಸರಗೋಡು ಮತ್ತು ಕುಟ್ಟಿಕೋಲ್ ನ ಅಗ್ನಿಶಾಮಕ ಮತ್ತು ಸ್ಕೂಬಾ ತಂಡಗಳ ಶೋಧಕಾರ್ಯದಿಂದ ಮೂವರ ಬಾಲಕರ ಮೃತ ದೇಹ ಪತ್ತೆಯಾಗಿದೆ. ಮೃತದೇಹವನ್ನು ಚೆರ್ಕಳ ಕೆ.ಕೆ. ಪುರಂ ಹೊರವಲಯದ ಖಾಸಗಿ ಆಸ್ಪತ್ರೆಗೆ ಸಾಗಿಸಲಾಗಿದೆ.

You may also like

News

Teachers, Ethnic Day celebrations at FMCI Kankanady Campus

The programme brought together the constituent educational institutions of Father Muller Charitable Institutions (FMCI) for a combined celebration of National
News

ಶ್ರೀ ಕೃಷ್ಣನ ಆದರ್ಶ ಪಾಲಿಸಿದಾಗ ಧಾರ್ಮಿಕ ಆಚರಣೆಗೆ ಸಾರ್ಥಕತೆ – ಮಾಜಿ ಸಚಿವ ಬಿ. ರಮಾನಾಥ ರೈ

ಸೌಹಾರ್ದತೆಗೆ ಮಾದರಿಯಾದ ಮಾಣಿ ಯುವಕ ಮಂಡಲದ ಶ್ರೀಕೃಷ್ಣ ಜನ್ಮಾಷ್ಟಮಿ ಆಚರಣೆ ಭಾವೈಕ್ಯತೆ ಸಾರಿದ ವಿಶಿಷ್ಟ ಕಾರ್ಯಕ್ರಮ ಮಾಣಿ: ಶ್ರೀಕೃಷ್ಣನ ಆದರ್ಶಗಳನ್ನು ಜೀವನದಲ್ಲಿ ಅಳವಡಿಸಿಕೊಂಡು ಪಾಲಿಸಿದಾಗ ಮಾತ್ರ ನಾವು

You cannot copy content of this page