July 10, 2026
Karavali Suddi | Bilingual Kannada/English Weekly Newspaper | ಕರಾವಳಿ ಸುದ್ದಿ - ಅರವಿನತ್ತ ನಮ್ಮ ಚಿತ್ತ
Follow Us
News

ಸರಕಾರದ ನಿಯಮಗಳನ್ನು ಪಾಲಿಸದೇ ಅಕ್ರಮ ಆಸ್ತಿ ನೋಂದಾವಣೆ – ಇಬ್ಬರು ಉಪ ನೊಂದಣಾಧಿಕಾರಿಗಳ ಅಮಾನತು

ಡಿಸೆಂಬರ್ 30:  ರಾಜ್ಯ ಸರಕಾರ ರೂಪಿಸಿದ ನಿಯಮಗಳನ್ನು ಕಟ್ಟು ನಿಟ್ಟಾಗಿ ಪಾಲಿಸದೆ ಆಸ್ತಿ ನೋಂದಣಿ ಮಾಡಿದ ಹಿನ್ನೆಲೆಯಲ್ಲಿ ಇಬ್ಬರು ಉಪ ನೊಂದಣಾಧಿಕಾರಿಗಳ ಅಮಾನತು ಮಾಡಿ ನೋಂದಣಿ ಮತ್ತು ಮುದ್ರಾಂಕ ಇಲಾಖೆ ಆದೇಶ ಹೊರಡಿಸಿದೆ.

ಉತ್ತರ ಬೆಂಗಳೂರಿನ ಹೇಸರಘಟ್ಟದ ಹಿರಿಯ ಉಪನೋಂದಣಾಧಿಕಾರಿ ಎನ್. ಮಂಜುನಾಥ್ ಮತ್ತು ಕಾಚರಕನಹಳ್ಳಿ ನಾಗವಾರ ಇಲ್ಲಿ ಉಪ ನೊಂದಣಾಧಿಕಾರಿಯಾಗಿದ್ದ ಕುಮಾರಿ ರೂಪ ಅವರು ಅಮಾನತುಗೊಂಡ ಅಧಿಕಾರಿಗಳು. ಡಿಸೆಂಬರ್ 24ರಂದು ಈ ಅಮಾನತು ಆದೇಶ ಹೊರಡಿಸಲಾಗಿದ್ದು ಅಕ್ರಮ ಆಸ್ತಿ ನೋಂದಣಿಯಲ್ಲಿ ಇವರು ಸಹಕಾರ ನೀಡಿದ್ದರು ಎಂಬ ಆರೋಪ ಇವರ ಮೇಲಿದೆ.

ಕರ್ನಾಟಕ ಸರಕಾರದ ಮುಖ್ಯ ಕಾರ್ಯದರ್ಶಿ ಅವರು 2024 ಅಕ್ಟೋಬರ್ 7ರಂದು ಆದೇಶ ಹೊರಡಿಸಿದ್ದು ಇದರ ಪ್ರಕಾರ ಇ-ಖಾತ ಸರ್ಟಿಫಿಕೇಟ್ ಹೊಂದಿದ್ದರೆ ಮಾತ್ರ ನೋಂದಣಿಗೆ ಅವಕಾಶ ಇದೆ ಎಂದು ಆದೇಶದಲ್ಲಿ ಹೇಳಲಾಗಿತ್ತು. ಆಸ್ತಿ ನೋಂದಣಿಯಲ್ಲಿ ಅಕ್ರಮಗಳನ್ನು ತಡೆಗಟ್ಟುವುದು ಮತ್ತು ಪಾರದರ್ಶಕತೆಯನ್ನು ಕಾಯ್ದುಕೊಳ್ಳಲು ಈ ನಿಯಮವನ್ನು ಜಾರಿಗೊಳಿಸಲಾಗಿತ್ತು. ಈ ಆದೇಶ 2024 ಅಕ್ಟೋಬರ್ 28ರಂದು ಜಾರಿಗೆ ಬಂದಿತ್ತು.

ನೋಂದಣಿ ಮತ್ತು ಮುದ್ರಾಂಕ ಇಲಾಖೆಯ ಕಾರ್ಯದರ್ಶಿ  ಕೆ. ದಯಾನಂದ ಅವರು ಕಂದಾಯ ಇಲಾಖೆ ಮತ್ತು ಎಲ್ಲಾ ಜಿಲ್ಲಾ ರಿಜಿಸ್ಟರ್ ಗಳಿಗೆ ಈ ಬಗ್ಗೆ ಸುತ್ತೋಲೆಯನ್ನು ನೀಡಿದ್ದು ಇದರಲ್ಲಿ ಕುಮಾರಿ ರೂಪ ಮತ್ತು ಮಂಜುನಾಥ್ ಅವರ ಅಮಾನತು ಕುರಿತ ವಿವರಣೆಯನ್ನು ನೀಡಲಾಗಿದೆ ಎನ್ನಲಾಗಿದೆ. ಕುಮಾರಿ ರೂಪ ಅವರು 2024 ಅಕ್ಟೋಬರ್ 7 ರಿಂದ ನವಂಬರ್ 26ರ ಅವಧಿಯಲ್ಲಿ ಸುಮಾರು 157 ಅಕ್ರಮ ನೋಂದಣಿಗಳನ್ನು ಸ್ವೀಕರಿಸಿದ್ದರು. ಮ್ಯಾನುವಲ್ ಖಾತಾ ಸರ್ಟಿಫಿಕೇಟ್ ಸ್ವೀಕಾರದ ಮೂಲಕ ಈ ಅಕ್ರಮ ನೋಂದಣಿಯನ್ನು ಮಾಡಲಾಗಿತ್ತು.

ಈ ನೋಂದಣಿಗಳನ್ನು ಹೇಗೆ ಮಾಡಲಾಗಿದೆ ಮತ್ತು ಯಾರೆಲ್ಲಾ ಈ ಕೃತ್ಯದ ಹಿಂದೆ ಇದ್ದಾರೆ ಎಂಬ ಬಗ್ಗೆ ಆಳವಾದ ತನಿಖೆಯನ್ನು ಕೈಗೊಳ್ಳಲಾಗುತ್ತಿದೆ ಎಂದು ದಯಾನಂದ ಅವರು ಮಾಹಿತಿ ನೀಡಿದ್ದಾರೆ. ಕಾವೇರಿ ತಂತ್ರಾಂಶದಲ್ಲಿ ಇರುವ ನ್ಯೂನ್ಯತೆಗಳು ಮತ್ತು ಇಂತಹ ಅಕ್ರಮ ಆಸ್ತಿ ನೋಂದಣಿಯನ್ನು ತಡೆಗಟ್ಟಲು ಇಲಾಖೆ ಗಂಭೀರ ಚಿಂತನೆಯನ್ನು ಮಾಡಲಾಗಿದೆ.

ಹಿರಿಯ ಉಪ ನೋಂದಣಾಧಿಕಾರಿ ಮಂಜುನಾಥ್ ಅವರನ್ನು ಇಂಥದ್ದೇ ಕಾರಣಕ್ಕಾಗಿ ಅಮಾನತು ಮಾಡಲಾಗಿದೆ. ಅವರೂ ಭೌತಿಕ ಖಾತಾ (ಫಿಸಿಕಲ್ ಖಾತಾ) ಬಳಸಿ ಇವರು ಆಸ್ತಿ ನೋಂದಣಿಗೆ ಸಹಕಾರ ನೀಡಿದ್ದರು. ಆದರೆ ಅವರು ಎಷ್ಟು ಅಕ್ರಮ ನೋಂದಣಿಯಲ್ಲಿ ಸಹಕಾರ ನೀಡಿದ್ದರು ಎಂಬ ಮಾಹಿತಿ ಲಭ್ಯವಾಗಿಲ್ಲ.

You may also like

News

Mangalore Diocese Clergy Retreat Concludes at Shanthi Kiran

The first batch of the Annual Clergy Retreat 2026 of the Diocese of Mangalore concluded on Friday, July 10, at
News

Father Muller Ushers in a New Era of Precision Orthopaedics with the Region’s First STRYKER–USA MAKO SmartRobotics™ System

Father Muller Medical College Hospital has once again reaffirmed its commitment to pioneering excellence in healthcare with the commissioning of

You cannot copy content of this page