September 20, 2026
Karavali Suddi | Bilingual Kannada/English Weekly Newspaper | ಕರಾವಳಿ ಸುದ್ದಿ - ಅರವಿನತ್ತ ನಮ್ಮ ಚಿತ್ತ
Follow Us
News

ಸಾರ್ವಜನಿಕರೇ ಗಮನಿಸಿ – ಸರಕಾರಿ ಸ್ವತ್ತು ಕಬಳಿಸಿದರೆ ಜೈಲು ಗ್ಯಾರಂಟಿ

ರಾಜ್ಯದಲ್ಲಿ ಸರ್ಕಾರಿ ಸ್ವತ್ತು ಅಕ್ರಮವಾಗಿ ಆಕ್ರಮಿಸಿಕೊಳ್ಳೋದು, ಮಾರಾಟ ಮಾಡೋದು, ಕಬಳಿಸೋದು, ಸ್ವಾಧೀನ ಮಾಡೋದು ಅಪರಾಧ. ಆ ಎಲ್ಲಾ ಅಪರಾಧಗಳಿಗೆ ಸಾರ್ವಜನಿಕರಿಗೆ ಏನೆಲ್ಲ ಶಿಕ್ಷೆ ಮತ್ತು ದಂಡ ವಿಧಿಸಲಾಗುತ್ತದೆ. ಈ ಸಂಬಂಧ ಕರ್ನಾಟಕ ಭೂ ಕಂದಾಯ ಅಧಿನಿಯ 1964ರ 192-ಎ ಅಡಿಯಲ್ಲಿ ಸರ್ಕಾರಿ ಸ್ವತ್ತಿನ ಕುರಿತಂತೆ ಮಹತ್ವದ ಮಾಹಿತಿ ನೀಡಲಾಗಿದೆ. ಈ ಕಾಯ್ದೆಯಲ್ಲಿ ಏನೇ ಒಳೊಳಗೊಂಡಿದ್ದರೂ ಅಥವಾ ನಿಯಮಗಳು ಏನೇ ಇದ್ದರೂ ಯಾವನೊಬ್ಬ ವ್ಯಕ್ತಿ, ಈ ಕೆಳಗಿನ ಪಟ್ಟಿ ಕಲಂ (2) ರಲ್ಲಿ ನಿರ್ದಿಷ್ಟ ಪಡಿಸಲಾದ ಅಪರಾಧ ಎಸಗಿದರೇ ನ್ಯಾಹಿಕ ದಂಡಾಧಿಕಾರಿಗಳು ಪ್ರಥಮ ದರ್ಜೆಯವರಿಂದ ವಿಚಾರಣೆ ನಡೆಸಿ ಈ ಕೆಳಗಿನಂತೆ ಶಿಕ್ಷೆ ಮತ್ತು ದಂಡವನ್ನು ವಿಧಿಸಬಹುದಾಗಿದೆ.

ಸರ್ಕಾರಿ ಸ್ವತ್ತನ್ನು ಅಕ್ರಮವಾಗಿ ಆಕ್ರಮಿಸಿ, ಸರ್ಕಾರಿ ಸ್ವತ್ತೆಂದು ಗೊತ್ತಿದ್ದು ಹೊಂದಿದ್ದರೇ, ಪರಂತು ಈ ಮೇಲ್ಕಂಡ ಉಪಬಂಧವು ಜಮ್ಮಾ ಕೊಡಗು ಜಿಲ್ಲೆಯಲ್ಲಿನ ಭಾನೆ ಸ್ವತ್ತುಗಳು ಮತ್ತು ಕಲಮು 94ಎ, 94ಬಿ ಮತ್ತು 94ಸಿ ರಡಿಯಲ್ಲಿ ಸ್ಥಾಪಿಸಲಾದ ಸಮಿತಿಗಳ ಮುಂದೆ ಕ್ರಮಬದ್ಧಗೊಳಿಸಲು ಅರ್ಜಿಗಳು ವಿಲೇ ಇದ್ದರೆ ಅನ್ವಯವಾಗತಕ್ಕದ್ದಲ್ಲ ಎಂದಿದೆ. ಈ ಮೇಲಿನ ಅಪರಾಧಕ್ಕೆ ಒಂದು ವರ್ಷ ಜೈಲು ಶಿಕ್ಷೆ ಮತ್ತು 5 ಸಾವಿರ ರೂಪಾಯಿ ದಂಡವನ್ನು ವಿಧಿಸಬಹುದಾಗಿದೆ.

ಸರ್ಕಾರಿ ಸ್ವತ್ತನ್ನು ಮಾರಾಟ ಮಾಡಲು, ಅಡಮಾನ ಮಾಡಲು, ದಾನದ ಮೂಲಕ ಹಸ್ತಾಂತರಿಸಲು ದಸ್ತಾವೇಜುಗಳನ್ನು ಸೃಷ್ಠಿಸಿ ವಂಚಿಸಿದ್ದರೇ 3 ವರ್ಷ ಜೈಲು ಮತ್ತು 10 ಸಾವಿರ ರೂಪಾಯಿ ದಂಡ ವಿಧಿಸಬಹುದಾಗಿದೆ. ಸರ್ಕಾರಿ ಸ್ವತ್ತನ್ನು ಕಬಳಿಸುವ ಉದ್ದೇಶದಿಂದ ನಕಲಿ ದಾಖಲೆಗಳನ್ನು ಸೃಷ್ಠಿಸಿದ್ದರೇ 3 ವರ್ಷ ಜೈಲು ಮತ್ತು 5 ಸಾವಿರ ರೂಪಾಯಿ ದಂಡ ವಿಧಿಸಬಹುದಾಗಿದೆ.

ಸರ್ಕಾರಿ ಸ್ವತ್ತುಗಳ ಅಕ್ರಮ ಸ್ವಾಧೀನತೆ, ಇವುಗಳ ತೆರವು ಮತ್ತಿತರ ಕಾರ್ಯಗಳನ್ನು ನಿರ್ವಹಿಸಲು ಅಧಿಕೃತನಾದ ಕಂದಾಯ ಅಧಿಕಾರಿ ಕ್ರಮ ಕೈಗೊಳ್ಳಲು ವಿಫಲನಾರೇ 3 ವರ್ಷಗಳ ಕಾರಗೃಹ ವಾಸ ಮತ್ತು 10 ಸಾವಿರ ರೂಪಾಯಿ ದಂಡ ವಿಧಿಸಲಿದೆ. ಕೃಷಿ ಭೂಮಿಯನ್ನು ಕೃಷಿಯೇತರ ಚಟುವಟಿಕೆಗಳಿಗೆ ಭೂ ಪರಿವರ್ತನೆ ಮಾಡದೆ ಮತ್ತು ಸಂಬಂಧಿಸಿದ ಸಕ್ಷಮ ಪ್ರಾಧಿಕಾರದ ಪೂರ್ವಾನುಮತಿ ಇಲ್ಲದೇ ಮಾರಾಟ ಮಾಡಿದರೇ 3 ವರ್ಷಗಳ ಕಾರಾಗೃಹ ವಾಸ ಮತ್ತು 10 ಸಾವಿರ ರೂಪಾಯಿ ದಂಡ ಬೀಳಲಿದೆ.

ಕೃಷಿ ಭೂಮಿಯನ್ನು ಕೃಷಿಯೇತರ ಉದ್ದೇಶಗಳಿಗಾಗಿ ಭೂ ಪರಿವರ್ತನೆ ಮಾಡಲು ನಕಲಿ ದಾಖಲೆ ಸೃಷ್ಟಿಸಿದರೆ, 1 ವರ್ಷ ಜೈಲು ಮತ್ತು 5 ಸಾವಿರ ರೂಪಾಯಿ ದಂಡ ವಿಧಸಬಹುದಾಗಿದೆ. ಅಕ್ರಮ ಭೂ ಪರಿವರ್ತನೆ ಮತ್ತು ಕಡತಗಳ ನಿರ್ವಹಣೆ ಮಾಡುವ ಹೊಣೆ ಹೊತ್ತ ಸಾರ್ವಜನಿಕ ನೌಕರ ಅಂತಹ ಹೊಣೆಯನ್ನು ಸಕ್ಷಮ ಪ್ರಾಧಿಕಾರಕ್ಕೆ ವರದಿ ಮಾಡುವ ಕ್ರಮ ಕೈಗೊಳ್ಳಲು ವಿಫಲವಾದರೇ 3 ವರ್ಷಗಳ ಕಾರಾಗೃಹ ಶಿಕ್ಷೆ ಹಾಗೂ 10 ಸಾವಿರ ರೂಪಾಯಿ ದಂಡ ವಿಧಿಸಬಹುದಾಗಿದೆ. ಈ ಕಾಯ್ದೆಯ ಉಪ ಬಂಧಗಳಿಗೆ ವಿರುದ್ಧವಾಗಿ ಆದೇಶ ಮಾಡಿದ್ದೇ ಆದಲ್ಲಿ ಅಂತಹ ಅಧಿಕಾರಿಯ ವಿರುದ್ಧವೂ 5 ಸಾವಿರ ರೂಪಾಯಿ ದಂಡ ವಿಧಿಸಿ, ನಂತರದ ಅಪರಾಧಗಳಿಗೆ 5 ಪಟ್ಟು ದಂಡವನ್ನು ವಿಧಿಸಬಹುದಾಗಿದೆ.

 

You may also like

News

ಸಾಣೂರು ಜಂಕ್ಷನ್‌ನಲ್ಲಿ ಮಾಜಿ ಸಚಿವ ರಮಾನಾಥ ರೈ ಕಾರಿಗೆ ಬಸ್ ಡಿಕ್ಕಿ – ಹಲವರಿಗೆ ಗಾಯ

ಮಾಜಿ ಸಚಿವ ಹಾಗೂ ಕಾಂಗ್ರೆಸ್‌ ಮುಖಂಡ ರಮಾನಾಥ ರೈ ಅವರು ಪ್ರಯಾಣಿಸುತ್ತಿದ್ದ ಕಾರಿಗೆ ಖಾಸಗಿ ಬಸ್‌ ಡಿಕ್ಕಿ ಹೊಡೆದ ಘಟನೆ ಇಂದು ಸೆಪ್ಟೆಂಬರ್ 20ರಂದು ಭಾನುವಾರ ಕಾರ್ಕಳ–ಮೂಡುಬಿದಿರೆ
News

ಬಂಟ್ವಾಳ ಲೋಕ ಅದಾಲತ್ – 12,400 ಪ್ರಕರಣ ಇತ್ಯರ್ಥ

ಕರ್ನಾಟಕ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರದ ನಿರ್ದೇಶನದಂತೆ ಬಂಟ್ವಾಳದ ಬಿ.ಸಿ. ರೋಡ್ ನ್ಯಾಯಾಲಯದಲ್ಲಿ ಸೆಪ್ಟೆಂಬರ್ 19ರಂದು ಶನಿವಾರ ನಡೆದ ರಾಷ್ಟ್ರೀಯ ಲೋಕ ಅದಾಲತ್‌ನಲ್ಲಿ 13,223 ಪ್ರಕರಣಗಳನ್ನು ಪರಿಗಣಿಸಿ,

You cannot copy content of this page