May 16, 2026
Karavali Suddi | Bilingual Kannada/English Weekly Newspaper | ಕರಾವಳಿ ಸುದ್ದಿ - ಅರವಿನತ್ತ ನಮ್ಮ ಚಿತ್ತ
Follow Us
News

ಮಹಾಭಾರತ ಸರಣಿ ತಾಳಮದ್ಧಳೆ – ಯುವ ಕಲಾವಿದ ಪ್ರವೀತ ಆಚಾರ್ಯರಿಗೆ ಶ್ರದ್ದಾಂಜಲಿ

ಉಪ್ಪಿನಂಗಡಿ ಶ್ರೀ ಕಾಳಿಕಾಂಬ ಯಕ್ಷಗಾನ ಕಲಾಸೇವಾ ಸಂಘದ 50ನೇ ವರ್ಷದ ನಿಮಿತ್ತ ನಡೆಸಲಾಗುತ್ತಿರುವ ಮಹಾಭಾರತ ಸರಣಿಯಲ್ಲಿ 59ನೇ ಕಾರ್ಯಕ್ರಮವಾಗಿ ಚಿತ್ರಾಂಗದಾ-ಉಲೂಪಿ ತಾಳಮದ್ದಳೆ ಉಪ್ಪಿನಂಗಡಿ ಶ್ರೀ ಸಹಸ್ರಲಿಂಗೇಶ್ವರ ದೇವಾಲಯದಲ್ಲಿ ಜರಗಿತು.

ಭಾಗವತರಾಗಿ ಪದ್ಮನಾಭ ಕುಲಾಲ್, ಸುರೇಶ್ ರಾವ್ ಬಿ. ಹಿಮ್ಮೇಳದಲ್ಲಿ ದಿವಾಕರ ಆಚಾರ್ಯ ನೇರೆಂಕಿ, ಶ್ರೀಪತಿ ಭಟ್ ಉಪ್ಪಿನಂಗಡಿ, ದೇವಿ ಪ್ರಸಾದ್ ಆಚಾರ್ಯ ಮಡಂತ್ಯಾರು, ಅರ್ಥದಾರಿಗಳಾಗಿ ದಿವಾಕರ ಆಚಾರ್ಯ ಹಳೆನೇರೆಂಕಿ (ಚಿತ್ರವಾಹನ) ಜಯರಾಮ ಬಲ್ಯ (ಚಿತ್ರಾಂಗದೆ ಮತ್ತು ದುರ್ಜಯ) ಶ್ರೀಧರ ಎಸ್.ಪಿ. ಸುರತ್ಕಲ್ (ಅರ್ಜುನ) ಪೂರ್ಣಿಮಾ ರಾವ್ ಬೆಳ್ತಂಗಡಿ (ಉಲೂಪಿ) ಸಂಜೀವ ಪಾರೆಂಕಿ (ಕೌರವ್ಯ) ದಿವಾಕರ ಆಚಾರ್ಯ ಗೇರುಕಟ್ಟೆ (ವಿಕಟ) ಭಾಗವಹಿಸಿದ್ದರು. ಸುರೇಶ್ ಪುತ್ತೂರಾಯ ಊರುವಾಲು ಕಾರ್ಯಕ್ರಮದ ಪ್ರಾಯೋಜಕರಾಗಿದ್ದರು.

ಶ್ರದ್ದಾಂಜಲಿ ಅರ್ಪಣೆ: ಇತ್ತೀಚೆಗೆ ಅರ್ಕುಳದ ಬಳಿ ರಸ್ತೆ ದುರಂತದಲ್ಲಿ ನಿಧನರಾದ ಸಸಿಹಿತ್ಲು ಮೇಳದ ಯುವ ಕಲಾವಿದ ಬೆಳ್ತಂಗಡಿ ಮುಂಡೂರಿನ ಪ್ರವೀತ್ ಆಚಾರ್ಯ ಇವರಿಗೆ ಸಂಘದ ವತಿಯಿಂದ  ಶ್ರದ್ಧಾಂಜಲಿ ಅರ್ಪಿಸಲಾಸಯಿತು. ಎಳೆಯ ಪ್ರಾಯದಲ್ಲಿ ಪ್ರತಿಭಾವಂತ ಕಲಾವಿದನನ್ನು ಕಳೆದುಕೊಂಡಿರುವುದು ಕುಟುಂಬ ಮತ್ತು ಕಲಾಕ್ಷೇತ್ರಕ್ಕೆ ದೊಡ್ಡನಷ್ಟವೆಂದು ನುಡಿನಮನ ಸಲ್ಲಿಸಿದ ಸಂಘದ ಉಪಾಧ್ಯಕ್ಷ ಸಂಜೀವ ಪಾರೆಂಕಿ ತಿಳಿಸಿದರು.

ಸಂಘದ ಅಧ್ಯಕ್ಷ ದಿವಾಕರ ಆಚಾರ್ಯ ಗೇರುಕಟ್ಟೆ ಮಾತನಾಡಿ ಕಲೆ ಮತ್ತು ಕಲಿಕೆಯಲ್ಲಿ ತೀವ್ರ ಆಸಕ್ತಿ ಇದ್ದ ಯುವ ಪ್ರತಿಭೆಯ ಕಣ್ಮರೆಯು ಅಘಾತಕಾರಿಯೆಂದರು. ಮೃತ ಕಲಾವಿದನ ಸದ್ಗತಿಗಾಗಿ ಪ್ರಾರ್ಥಿಸಲಾಯಿತು.

You may also like

News

ಧರ್ಮಾಧ್ಯಕ್ಷರಾಗಿ 30 ವರ್ಷಗಳ ಸೇವೆ – ನಿವೃತ್ತ ಬಿಷಪ್ ಅಲೋಶಿಯಸ್ ಪಾವ್ಲ್ ಡಿಸೋಜ ಅವರಿಗೆ ಜೆಪ್ಪುವಿನಲ್ಲಿ ಭವ್ಯ ಸನ್ಮಾನ

ಮಂಗಳೂರು ಧರ್ಮಕ್ಷೇತ್ರದ ನಿವೃತ್ತ ಬಿಷಪ್, ‘ಜನರ ಬಿಷಪ್’ ಎಂದೇ ಖ್ಯಾತರಾದ ಪರಮ ಪೂಜ್ಯ ಅತೀ ವಂದನೀಯ ಡಾ. ಅಲೋಶಿಯಸ್ ಪಾವ್ಲ್ ಡಿಸೋಜ ಅವರು ಧರ್ಮಾಧ್ಯಕ್ಷರಾಗಿ ದೀಕ್ಷೆ ಸ್ವೀಕರಿಸಿದ
News

ಮಣಿಪುರದಲ್ಲಿ ಪಾಸ್ಟರ್‌ಗಳ ಕ್ರೂರ ಹತ್ಯೆ – ಪ್ರೊಟೆಸ್ಟಂಟ್ ಕ್ರೈಸ್ತರ ಮಹಾಸಭಾ (DAPC) ತೀವ್ರ ಖಂಡನೆ

ಮಣಿಪುರದ ಕಾಂಗ್‌ಪೋಕ್ಪಿ ಜಿಲ್ಲೆಯಲ್ಲಿ ಇತ್ತೀಚೆಗೆ ಪಾಸ್ಟರ್‌ಗಳು ಮತ್ತು ಅವರ ಸಂಗಾತಿಯ ಮೇಲೆ ನಡೆದ ಕ್ರೂರ ಹತ್ಯೆಯನ್ನು ಭಾರತದಲ್ಲಿನ ‘ಡಯೋಸಿಸ್ ಆಫ್ ಆಲ್ ಪ್ರೊಟೆಸ್ಟೆಂಟ್ ಚರ್ಚ್’ (DAPC) ಮತ್ತು

You cannot copy content of this page