12 ದಿನಗಳ ಸಂಗೀತ ಸಂಭ್ರಮಕ್ಕೆ ವಿಶ್ವದಾಖಲೆಯ ಕಿರೀಟ – ಮಾಂಡ್ ಸೊಭಾಣ್‌ನಿಂದ ಕೊಂಕಣಿ ಇತಿಹಾಸ ಸೃಷ್ಟಿ
7,235 ಗಾಯಕರ ಸಂಗೀತ ಸಂಭ್ರಮಕ್ಕೆ ಡಾ. ರೊನಾಲ್ಡ್ ಕೊಲಾಸೊ ಮೆಚ್ಚುಗೆ – “ಇದು ಕೊಂಕಣಿ ಸಂಸ್ಕೃತಿಯ ವಿಜಯ” ಎಂದು ಬಣ್ಣನೆ ಮಂಗಳೂರು: ಕೊಂಕಣಿ ಭಾಷೆ, ಸಂಗೀತ ಮತ್ತು ಸಂಸ್ಕೃತಿಯ ಇತಿಹಾಸದಲ್ಲಿ ಹೊಸ ಮೈಲಿಗಲ್ಲು ಸ್ಥಾಪಿಸುವ ಮೂಲಕ ಸಾಂಸ್ಕೃತಿಕ ಸಂಘಟನೆ ಮಾಂಡ್ ಸೊಭಾಣ್ ವಿಶ್ವದ ಗಮನ ಸೆಳೆದಿದೆ. ಪ್ರಥಮ ವಿಶ್ವ ಕೊಂಕಣಿ ಸಂಗೀತ ಮಹಾ ಸಮ್ಮೇಳನದ ಅಂಗವಾಗಿ ‘ಬಹು ಗಾಯಕರ ವಿಭಾಗ’ದಲ್ಲಿ ಸತತ 12 ದಿನ, 12 ಗಂಟೆ ಹಾಗೂ 12 ನಿಮಿಷಗಳ ಕಾಲ ನಿರಂತರ ಗಾಯನ ಪ್ರಸ್ತುತಪಡಿಸಿ […]













