October 10, 2026
Karavali Suddi | Bilingual Kannada/English Weekly Newspaper | ಕರಾವಳಿ ಸುದ್ದಿ - ಅರವಿನತ್ತ ನಮ್ಮ ಚಿತ್ತ
Follow Us
News

ಪ್ರತಿಯೊಬ್ಬ ಹೆಣ್ಣು ಮಗಳಲ್ಲಿ ಮಾತೆ ಮರಿಯಳನ್ನು ಕಾಣೋಣ – ಬಿಷಪ್ ಪೀಟರ್ ಪಾವ್ಲ್


ಪ್ರತಿಯೊಬ್ಬ ಹೆಣ್ಣು ಮಗಳಲ್ಲಿ ಮಾತೆ ಮರಿಯಳನ್ನು ಕಾಣೋಣ ಎಂದು ಮಂಗಳೂರು ಧರ್ಮಕ್ಷೇತ್ರದ ಧರ್ಮಾಧ್ಯಕ್ಷರಾದ ಅತೀ ವಂದನೀಯ ಡಾ. ಪೀಟರ್ ಪಾವ್ಲ್ ಸಲ್ಡಾನ್ಹಾರವರು ಮೇರಿ ಮಾತೆಯ ವಾರ್ಷಿಕ ಹಬ್ಬ ಮೊಂತಿ ಹಬ್ಬದ ಸಂದರ್ಭದಲ್ಲಿ ಕರೆ ನೀಡಿದರು.
ಓರ್ವ ಹೆಣ್ಣು ಮಗಳ ಜನನ ಕುಟುಂಬದಲ್ಲಿ ಹರ್ಷ ಹಾಗೂ ಭರವಸೆ ಮೂಡಿಸುತ್ತದೆ. ದೇವರ ಯೋಜನೆ ಹಾಗೂ ಮನುಕುಲವನ್ನು ಮುನ್ನಡೆಸುವಲ್ಲಿ ಆಕೆಯ ಪಾತ್ರ ಮಹತ್ವದ್ದಾಗಿದೆ. ಸೃಷ್ಟಿಯ ಕಾರ್ಯದಲ್ಲಿ ದೇವರು ಆಕೆಗೆ ವಿಶೇಷ ಸ್ಥಾನ ಕಲ್ಪಿಸಿದ್ದಾರೆ. ಸಂತ ಜೋಕಿಂ ಹಾಗೂ ಸಂತ ಅನ್ನಾ ಅವರ ಏಕೈಕ ಮಗಳಾಗಿ ಜನಿಸಿದ ಮಾತೆ ಮೇರಿ ಮನುಕುಲಕ್ಕೆ ಹೊಸ ನಿರೀಕ್ಷೆ ತಂದಿಟ್ಟರು.
ಇಂದು ನಮ್ಮ ಸಮಾಜದಲ್ಲಿ ಮಹಿಳೆಯ ಮೇಲೆ ನಡೆಯುತ್ತಿರುವ ದೌರ್ಜನ್ಯ, ಅತ್ಯಾಚಾರ, ಬಲಾತ್ಕಾರ, ಕೊಲೆ ಇತ್ಯಾದಿಗಳನ್ನು ಗಮನಿಸಿದಾಗ ಮಹಿಳೆಯ ಮೂಲಭೂತ ಹಕ್ಕುಗಳು ಅಪಾಯದಲ್ಲಿದ್ದಂತೆ ತೋರುತ್ತವೆ. ಇಂತಹ ಘಟನೆ ಗಮನಿಸಿದಾಗ ನಾಗರಿಕ ಸಮಾಜ ಸ್ತ್ರೀಯರಿಗೆ ಗೌರವ ನೀಡುವಲ್ಲಿ ಸೋತಿದೆ ಎಂದು ಭಾಸವಾಗುತ್ತಿದೆ. ಮಹಿಳೆಗೆ ಮಾಡುತ್ತಿರುವ ದೌರ್ಜನ್ಯ ಮಾತೆ ಮರಿಯಳಿಗೆ ಮಾಡುವ ಅವಮಾನ. ಇದು ದೇವರು ಮೆಚ್ಚುವ ಕಾರ್ಯವಲ್ಲ. ಪ್ರತಿಯೊಬ್ಬ ಮಹಿಳೆಯು ದೇವ ಮಾತೆಯ ಪ್ರತೀಕ. ಅವರಲ್ಲಿ ಮಾತೆಯ ಪ್ರತಿರೂಪ ಕಂಡುಕೊಳ್ಳಲು ಮಾತೆ ಮರಿಯ ಕರೆ ನೀಡುತ್ತಾರೆ. ಮರಿಯಳ ಜನನದ ಹಬ್ಬವು ಪ್ರತಿಯೊಬ್ಬ ಮಹಿಳೆಗೆ ಗೌರವದಿಂದ ಕಾಣಲು ಒಂದು ಸುಸಂದರ್ಭವಾಗಲಿ. ಸರ್ವರಿಗೂ ಮಾತೆ ಮರಿಯಳ ಜನುಮ ದಿನದ ಶುಭಾಶಯಗಳನ್ನು ಸಲ್ಲಿಸಿದರು.

You may also like

News

ಬೆಳ್ತಂಗಡಿಯ ಎಸ್.ಡಿ.ಎಂ. ಆಂಗ್ಲ ಮಾಧ್ಯಮ ಶಾಲೆಯಲ್ಲಿ ತಾಲೂಕು ಮಟ್ಟದ ಯುವ ಸಂಸತ್ತು–2026

ಯುವ ಸಮುದಾಯ ಹಾಗೂ ಪ್ರೌಢಶಾಲಾ ವಿದ್ಯಾರ್ಥಿಗಳಲ್ಲಿ ದೇಶದ ಸಂಸದೀಯ ವ್ಯವಸ್ಥೆ ಮತ್ತು ಪ್ರಜಾಪ್ರಭುತ್ವದ ಅರಿವು ಮೂಡಿಸುವ ಉದ್ದೇಶದಿಂದ ತಾಲೂಕು ಮಟ್ಟದ ಯುವ ಸಂಸತ್ತು–2026 ಕಾರ್ಯಕ್ರಮ ಅಕ್ಟೋಬರ್ 8ರಂದು
News

Father Muller Thumbay Campus welcomes Nursing & Allied Health Students

The Course Inauguration Ceremony of the 5th batch of B.Sc. Nursing of Father Muller Nursing College Thumbay (FMNCT) and the

You cannot copy content of this page