August 25, 2026
Karavali Suddi | Bilingual Kannada/English Weekly Newspaper | ಕರಾವಳಿ ಸುದ್ದಿ - ಅರವಿನತ್ತ ನಮ್ಮ ಚಿತ್ತ
Follow Us
News

ಉಪ್ಪಿನಂಗಡಿ ಪೆರಿಯಡ್ಕದಲ್ಲಿ ಸಂಸ್ಮರಣೆ, ಸ್ಮೃತಿ ಗೌರವ ಮತ್ತು ತಾಳಮದ್ದಳೆ

ಉಪ್ಪಿನಂಗಡಿ ಶ್ರೀ ಕಾಳಿಕಾಂಬ ಯಕ್ಷಗಾನ ಕಲಾಸೇವಾ ಸಂಘದ 50ನೇ ವರ್ಷದ ಶ್ರೀ ಮಹಾಭಾರತ ಸರಣಿಯ ಕಾರ್ಯಕ್ರಮವು ಸಂಸ್ಮರಣೆ, ಸ್ಮೃತಿ ಗೌರವದೊಂದಿಗೆ ಪೆರಿಯಡ್ಕದ ಮದುವನದಲ್ಲಿ ಜರಗಿತು. ನಿವೃತ್ತ ಉಪನ್ಯಾಸಕ ಕಲಾವಿದ ಕೆ. ಮಹಾಲಿಂಗೇಶ್ವರ ಭಟ್ಟರ ತೀರ್ಥರೂಪ ದಿ. ಶ್ರೀ ತಿರುಮಲೇಶ್ವರ ಭಟ್ ಕಟ್ಟದಮೂಲೆ ಇವರ ಸಂಸ್ಮರಣೆಯನ್ನು ಶ್ರೀ ನೀರ್ಚಾಲು ಸುಬ್ರಹ್ಮಣ್ಯ ಮಧ್ಯಸ್ಥರು ಮಾಡಿದರು.

ಸ್ಮೃತಿ ಗೌರವ ಪ್ರೊ. ವಿ. ಬಿ. ಅರ್ತಿಕಜೆ ಪುತ್ತೂರು, ನೀ.ಸು. ಮಧ್ಯಸ್ಥ, ಭಾಗವತ ಗೋವಿಂದ ನಾಯಕ್ ಪಾಲೆಚ್ಚಾರು, ಶ್ರೀ ಕಾಳಿಕಾಂಬಾ ಯಕ್ಷಗಾನ ಸೇವಾ ಸಂಘದ ಅಧ್ಯಕ್ಷ ದಿವಾಕರ ಆಚಾರ್ಯ ಗೇರುಕಟ್ಟೆ, ಭಾಗವತ ಡಿ.ಕೆ. ಆಚಾರ್ಯ ಅಲಂಕಾರು ಇವರಿಗೆ ಸ್ಮೃತಿ ಗೌರವ ಪ್ರದಾನ ಮಾಡಲಾಯಿತು. ಸಂಘಟಕ ಕೆ. ಮಹಾಲಿಂಗೇಶ್ವರ ಭಟ್ ಇವರನ್ನು ಶ್ರೀ ಕಾಳಿಕಾಂಬ ಯಕ್ಷಗಾನ ಸೇವಾ ಸಂಘದ ವತಿಯಿಂದ ಸನ್ಮಾನಿಸಲಾಯಿತು. ಹರೀಶ್ ಆಚಾರ್ಯ ಬಾರ್ಯ ಸನ್ಮಾನ ಪತ್ರ ವಾಚಿಸಿದರು.  ಮುಂಬೈ ವಿ. ವಿ. ಕನ್ನಡ ವಿಭಾಗದ ನಿವೃತ್ತ ಮುಖ್ಯಸ್ಥರಾದ ಡಾಕ್ಟರ್ ವಸಂತಕುಮಾರ ತಾಳ್ತಜೆ, ತಾಲೂಕು ಪಂಚಾಯತ್ ಮಾಜಿ ಸದಸ್ಯರಾದ ಉಮೇಶ ಶೆಣೈ ರಾಮನಗರ, ಶ್ರೀಧರ ಭಟ್ ಕೆ., ಸಾವಿತ್ರಿಬಾಯಿ, ಶೋಭಾ ಬಿ. ಆನಂದ್, ಹರಿಕಿರಣ್ ಕೊಯ್ಲ, ಬಿ. ಸುಬ್ರಹ್ಮಣ್ಯ ರಾವ್ ಉಪಸ್ಥಿತರಿದ್ದರು. ವೈಶಾಲಿ ಕಾರ್ಯಕ್ರಮ ನಿರೂಪಿಸಿ ದುರ್ಗಾಮಣಿ ವಂದಿಸಿದರು.

ತಾಳಮದ್ದಳೆ ಶ್ರೀ ಮಹಾಭಾರತ ಸರಣಿಯ 47ನೇ ಕಾರ್ಯಕ್ರಮವಾಗಿ ಪಾರ್ಥಸಾರಥ್ಯ ಮತ್ತು ಭಕ್ತ ಸುಧನ್ವ ತಾಳಮದ್ದಳೆ ಜರಗಿತು. ದಿವಾಕರ ಆಚಾರ್ಯ ಗೇರುಕಟ್ಟೆ (ಶ್ರೀಕೃಷ್ಣ 1), ಶ್ರೀಧರ ಎಸ್. ಪಿ. ಸುರತ್ಕಲ್ (ಶ್ರೀಕೃಷ್ಣ2),  ಸಂಜೀವ  ಪಾರೆಂಕಿ (ಅರ್ಜುನ), ಗುಡ್ಡಪ್ಪ ಬಲ್ಯ (ಕೌರವ1), ಮಹಾಲಿಂಗೇಶ್ವರ ಭಟ್ (ಕೌರವ2), ಗೀತಾ ಕುದ್ದಣ್ಣಾಯ (ಬಲರಾಮ), ಗಣರಾಜ ಕುಂಬ್ಳೆ (ಸುಧನ್ವ1), ದಿವಾಕರ ಆಚಾರ್ಯ ಹಳೆನೇರೆಂಕಿ (ಸುಧನ್ವ2), ಅಂಬಾ ಪ್ರಸಾದ ಪಾತಾಳ (ಪ್ರಭಾವತಿ), ಜಯರಾಮ ನಾಲ್ಗುತ್ತು (ಶ್ರೀಕೃಷ್ಣ), ಹರೀಶ್ ಬಾರ್ಯ (ಅರ್ಜುನ), ನಾರಾಯಣಭಟ್ ಅಲಂಕಾರು (ಹಂಸಧ್ವಜ), ಬಾಲಕೃಷ್ಣಕೇಪುಳು (ಶಂಖ-ಲಿಖಿತ), ಶ್ರುತಿ ವಿಸ್ಮಿತ್ (ವೃಷಕೇತು)  ಭಾಗವಹಿಸಿದ್ದರು.

ಭಾಗವತರಾಗಿ ಗೋವಿಂದ ನಾಯಕ್ ಪಾಲೆಚ್ಚಾರು, ಪದ್ಮನಾಭ ಕುಲಾಲ್ ಇಳಂತಿಲ, ನಿತೀಶ್ ಕುಮಾರ್ ವೈ., ಸುರೇಶ್ ರಾವ್ ಬನ್ನೆಂಗಳ ಹಿಮ್ಮೇಳದಲ್ಲಿ ಮುರಳೀಧರ ಕಲ್ಲೂರಾಯ, ಗಣೇಶ್ ಭಟ್ ಬೆಳಾಲು, ಮೋಹನ ಕುಮಾರ್ ಶರವೂರು, ಶ್ರೀಪತಿ ಭಟ್ ಉಪ್ಪಿನಂಗಡಿ, ಪ್ರಚೇತ್ ಆಳ್ವ ಬಾರ್ಯ, ಶ್ರೀಹರಿ ನಗ್ರಿ ಭಾಗವಹಿಸಿದ್ದು ಕಲಾವಿದರೆಲ್ಲರನ್ನು ಸಂಘಟಕ ಕೆ. ಮಹಾಲಿಂಗೇಶ್ವರ ಭಟ್ ಗೌರವಿಸಿದರು.

You may also like

News

ದಕ್ಷಿಣ ಕನ್ನಡ ಕಾರ್ಯನಿರತ ಪತ್ರಕರ್ತರ ಸಂಘದ ವೆಬ್‌ಸೈಟ್ ಅನಾವರಣ

“ಕಷ್ಟದಲ್ಲಿರುವವರಿಗೆ ನೆರವಾದ ತೃಪ್ತಿ ನನ್ನದು” – ಹರಿಕೃಷ್ಣ ಪುನರೂರು ಸಮಾಜದಲ್ಲಿ ಕಷ್ಟದಲ್ಲಿರುವವರಿಗೆ ತಮ್ಮಿಂದಾದ ನೆರವು ನೀಡಿದ ಸಂತೃಪ್ತಿ ಇದೆ. “ಕೊಟ್ಟದ್ದು ತನಗೆ, ಬಚ್ಚಿಟ್ಟದ್ದು ಪರರಿಗೆ” ಎಂಬ ಮಾತಿನಂತೆ
News

ಕಸ ಗುಡಿಸುವ ಕಾಯಕದಿಂದ ಫಾರ್ಚುನರ್‌ವರೆಗೆ – ಸೇಸಪ್ಪ ಅವರ ಯಶೋಗಾಥೆ!

ಬಡತನ ಕನಸು ಕಾಣುವುದಕ್ಕೆ ಅಡ್ಡಿಯಾಗದು ಎಂಬುದಕ್ಕೆ ಬಂಟ್ವಾಳ ತಾಲೂಕಿನ ನಾವೂರು ನಿವಾಸಿ ಹಾಗೂ ಬಂಟ್ವಾಳ ಪುರಸಭೆಯ ಪೌರಕಾರ್ಮಿಕ ಸೇಸಪ್ಪ ಅವರ ಬದುಕು ಉತ್ತಮ ಉದಾಹರಣೆ. ಲಕ್ಷಾಂತರ ರೂಪಾಯಿ

You cannot copy content of this page