July 10, 2026
Karavali Suddi | Bilingual Kannada/English Weekly Newspaper | ಕರಾವಳಿ ಸುದ್ದಿ - ಅರವಿನತ್ತ ನಮ್ಮ ಚಿತ್ತ
Follow Us
News

ಬ್ಯಾರಿ ಭಾಷೆಯ ಬೆಳವಣಿಗೆಯಲ್ಲಿ ಶಿಕ್ಷಕರ ಪಾತ್ರ ಮಹತ್ವದ್ದಾಗಿದೆ – ಉಮರ್ ಯು. ಎಚ್.

ಮಂಗಳೂರು : ಬ್ಯಾರಿ ಭಾಷೆಯ ಬೆಳವಣಿಗೆಯಲ್ಲಿ ಶಿಕ್ಷಕರ ಪಾತ್ರ ಮಹತ್ವದ್ದಾಗಿದೆ ಎಂದು  ಬ್ಯಾರಿ ಸಾಹಿತ್ಯ ಅಕಾಡೆಮಿಯ  ಅಧ್ಯಕ್ಷ ಉಮರ್ ಯು.ಎಚ್. ಹೇಳಿದರು. ಅವರು ಇತ್ತೀಚೆಗೆ ಸಮನ್ವಯ ಶಿಕ್ಷಕರ ಸಂಘ ದಕ್ಷಿಣ ಕನ್ನಡ ಜಿಲ್ಲೆಯ ಪದಾಧಿಕಾರಿಗಳೊಂದಿಗೆ ನಡೆಸಿದ ಸಂವಾದ ಕಾರ್ಯಕ್ರಮದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿ, ಅಕಾಡೆಮಿ ಮತ್ತು ಸಮನ್ವಯ ಜೊತೆಯಾಗಿ ಬ್ಯಾರಿ ಭಾಷೆ-ಸಾಹಿತ್ಯ-ಸಂಸ್ಕೃತಿಯನ್ನು ಉಳಿಸಿ ಬೆಳೆಸುವಲ್ಲಿ ಸಹಾಯವಾಗುವ ರೂಪು ರೇಷೆಗಳನ್ನು ತಯಾರಿಸುವ ಬಗ್ಗೆ ಚರ್ಚಿಸಿದರು. ನಮ್ಮ ಮುಂದಿನ ತಲೆಮಾರುಗಳ ಭವಿಷ್ಯ ಮತ್ತು ಪ್ರತಿಭೆಗಳನ್ನು ಗರುತಿಸಿ ಬೆಳೆಸಿದಲ್ಲಿ ಸಮಾಜಕ್ಕೆ ದೊರಕುವ ಉಪಯುಕ್ತ ಮಾನವ ಸಂಪನ್ಮೂಲವನ್ನು ನಿರ್ಮಿಸುವ ಬಗ್ಗೆ ಜೊತೆಯಾಗಿ ಕೆಲಸ ಮಾಡುವ ಎಂದು ಕರೆಕೊಟ್ಟರು.

   ಈ ಬಗ್ಗೆ ಪ್ರಾಥಮಿಕ-ಪ್ರೌಢ-ಪದವಿ ಹಂತದ ವಿದ್ಯಾರ್ಥಿಗಳಿಗೆ ವಿವಿಧ ಸ್ಪರ್ಧೆಗಳನ್ನು ಆಯೋಜಿಸುವ ಮೂಲಕ ಪ್ರತಿಭಾನ್ವೇಷಣೆ ನಡೆಸುವಲ್ಲಿ ಅಕಾಡೆಮಿಯೊಂದಿಗೆ ಕೈಜೋಡಿಸಿ ಎಂದರು. ಸಂವಾದ ಕಾರ್ಯಕ್ರಮದಲ್ಲಿ ಸಮನ್ವಯ ಶಿಕ್ಷಕರ ಸಂಘದ ಜಿಲ್ಲಾಧ್ಯಕ್ಷ ಅಬ್ದುಲ್ ಮಜೀದ್ ಎಸ್. ಪ್ರಾಸ್ತಾವಿಕವಾಗಿ ಮಾತನಾಡಿದರು. ಪ್ರಸ್ತಾವನೆಯಲ್ಲಿ ನಮ್ಮಲ್ಲಿರುವ ಯುವ ಶಿಕ್ಷಕರ ಕಾರ್ಯವೈಖರಿಯ ದಕ್ಷತೆ, ಶೈಕ್ಷಣಿಕ ಸಮಸ್ಯೆಗಳಿಗೆ ಪರಿಹಾರವನ್ನು ಹುಡುಕುವಲ್ಲಿ ಮತ್ತು ಸಮುದಾಯದ ಗರಿಷ್ಠಮಟ್ಟದ ಸಬಲೀಕರಣಕ್ಕೆ ಸಮನ್ವಯ ಶಿಕ್ಷಕರ ಸಂಘದ ಕಾರ್ಯಚಟುವಟಿಕೆಗಳು ಎಷ್ಟರ ಮಟ್ಟಿಗೆ ಪೂರಕವಾಗಿದೆ ಎಂಬುವುದನ್ನು ವಿವರಿಸಿದರು.

      ಕಾರ್ಯಕ್ರಮದಲ್ಲಿ ಯೂಸುಫ್ ವಿಟ್ಲ, ಬಿ. ಮೊಹಮ್ಮದ್ ತುಂಬೆ, ಸಮಿವುಲ್ಲಾ, ಆದಂ ಸಾಹೇಬ್, ಹಮೀದ್ ಕೆ. ಮಾಣಿ, ನೂರುದ್ದೀನ್, ನಾಸಿರ್ ಎ., ಮನಾಝಿರ್ ಮುಡಿಪು, ಶಾಹಿದ್ ವಲವೂರ್, ಲಿಯಾವುದ್ದಿನ್, ಹಸೀನಾ ಮಲ್ನಾಡು, ಫಾಝಿಲಾ ಕಾವಳಕಟ್ಟೆ ಉಪಸ್ಥಿತರಿದ್ದರು.

    ಪ್ರಧಾನ ಕಾರ್ಯದರ್ಶಿ ಹಾರೀಸ್ ಬಾಂಬಿಲ ಸ್ವಾಗತಿಸಿ, ತೌಸೀಫ್ ಪಾಂಡವರಕಲ್ಲು ವಂದಿಸಿದರು. ಶಾಹಿದ್ ವಳವೂರು ಕಾರ್ಯಕ್ರಮ ನಿರೂಪಿಸಿದರು.

You may also like

News

ಶಿಲುಬೆ ಧ್ವಂಸಗೊಳಿಸಿದರೆ ನಂಬಿಕೆ ನಾಶವಾಗದು – ಪಶ್ಚಿಮ ಬಂಗಾಳದ ಚರ್ಚ್ ಮೇಲಿನ ದಾಳಿಗೆ AICU ರಾಜಾಧ್ಯಕ್ಷ ಅಲ್ವಿನ್ ಡಿಸೋಜ ಪಾನೀರ್ ಆಕ್ರೋಶ

ಪಶ್ಚಿಮ ಬಂಗಾಳದ ಬರೂಯಿಪುರದಲ್ಲಿ ಹೊಸದಾಗಿ ನಿರ್ಮಾಣಗೊಂಡಿರುವ ಚರ್ಚ್ ಮೇಲೆ ದಾಳಿ ನಡೆಸಿ, ಪವಿತ್ರ ಶಿಲುಬೆಯನ್ನು ಧ್ವಂಸಗೊಳಿಸಿರುವ ಘಟನೆ ಅತ್ಯಂತ ಖಂಡನೀಯವಾಗಿದ್ದು, ಧಾರ್ಮಿಕ ಸೌಹಾರ್ದತೆಗೆ ಧಕ್ಕೆ ತರುವ ಇಂತಹ
News

Former CSST General Councillor Sr Josephette Passes Away

The Congregation of the Carmelite Sisters of Saint Teresa (CSST) is mourning the passing of Sr Josephette, former General Councillor

You cannot copy content of this page