August 25, 2026
Karavali Suddi | Bilingual Kannada/English Weekly Newspaper | ಕರಾವಳಿ ಸುದ್ದಿ - ಅರವಿನತ್ತ ನಮ್ಮ ಚಿತ್ತ
Follow Us
News

ಬಂಟ್ವಾಳದಲ್ಲಿ ಅಧಿವಕ್ತಾ ಪರಿಷತ್ ದಿನಾಚರಣೆ – ಹಿರಿಯ ವಕೀಲ ಜೇಸಿ ಶಂಕರ ಭಟ್ ಇವರಿಗೆ ಸನ್ಮಾನ.

ಬಂಟ್ವಾಳ ಸಪ್ಟಂಬರ್ 18: ನ್ಯಾಯವಾದಿಗಳು ರಾಷ್ಟ್ರೀಯ ವಿಚಾರಧಾರೆಯ ಚಿಂತನೆಯಿಂದ ದೇಶಮೊದಲು ಎಂಬುದನ್ನು ಅರಿತು ಸಮಾಜವನ್ನು ತಿದ್ದುವ ಕೆಲಸ ಮಾಡಬೇಕು. ರಾಷ್ಟ್ರೀಯ ಅಭಿವೃದ್ಧಿಗೆ ತಮ್ಮ ಕೊಡುಗೆಯನ್ನು ನೀಡಬೇಕು ಎಂದು ಅಧಿವಕ್ತಾ ಪರಿಷತ್ತಿನ ಕರ್ನಾಟಕ ದಕ್ಷಿಣ ಪ್ರಾಂತ ಅಧ್ಯಕ್ಷ ಗುರುಪ್ರಸಾದ್ ಹೇಳಿದರು.

ಅವರು ಬಿ.ಸಿ. ರೋಡ್ ರಕ್ತೇಶ್ವರಿ ದೇವಸ್ಥಾನದ ಸಭಾಂಗಣದಲ್ಲಿ ಅಧಿವಕ್ತಾ ಪರಿಷತ್ ಬಂಟ್ವಾಳ ಘಟಕದ ಆಶ್ರಯದಲ್ಲಿ ಏರ್ಪಡಿಸಲಾದ ಪರಿಷತ್ತಿನ ಸ್ಥಾಪನಾ ದಿನಚರಣೆಯ ಸಂದರ್ಭದಲ್ಲಿ ಪರಿಷತ್ತಿನ ಕಾರ್ಯವಿಧಾನಗಳ ಬಗ್ಗೆ ಮಾತನಾಡಿ ದತ್ತೋಪಂತ ಠೇಂಗಡಿಯವರು ಸ್ಥಾಪನೆ ಮಾಡಿದ ವಕೀಲರ ಸಂಘಟನೆಗೆ ದೇಶಾದ್ಯಂತ ರಾಷ್ಟ್ರೀಯ ಕಾರ್ಯದಲ್ಲಿ ತೊಡಗಿಸಿಕೊಂಡಿದೆ ಎಂದರು .

 ಬಂಟ್ವಾಳ ವಕೀಲರ ಸಂಘದ ಅಧ್ಯಕ್ಷ ರಿಚರ್ಡ್ ಡಿಕೋಸ್ತ ದೀಪ ಬೆಳಗಿಸಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡುತ್ತಾ, ‘ವಕೀಲರು ಸಕಾರಾತ್ಮಕವಾದ ಭಾವನೆಯಿಂದ ತಮ್ಮ ವುಕ್ತಿತ್ವವನ್ನು ಬೆಳೆಸಿಕೊಂಡು ಸಾಮಾಜಿಕ ಕಾರ್ಯದಲ್ಲಿ ತೊಡಗಿಸಿಕೊಳ್ಳಬೇಕು’ ಎಂದು ಹೇಳಿದರು. ಪರಿಷತ್ತಿನ ಬಂಟ್ವಾಳ ಘಟಕದ ಅಧ್ಯಕ್ಷೆ ಉಮಾ ಎನ್. ಸೋಮಯಾಜಿ ಅಧ್ಯಕ್ಷತೆ ವಹಿಸಿದ್ದರು.  ಹಿರಿಯ ವಕೀಲ ಬಂಟ್ವಾಳ ವಕೀಲರ ಸಂಘದ ಮಾಜಿ ಅಧ್ಯಕ್ಷ ಜತ್ತನಕೋಡಿ ಶಂಕರ ಭಟ್ ಇವರನ್ನು ಸಾಮಾಜಿಕ ಮತ್ತು ಧಾರ್ಮಿಕ ಸೇವೆಯನ್ನು ಪರಿಗಣಿಸಿ ಸನ್ಮಾನಿಸಲಾಯಿತು. ನ್ಯಾಯವಾದಿ ಉಮೇಶ್ ಕುಮಾರ್ ಏನಾಜೆ ಅಭಿನಂದಿಸಿದರು. ವಕೀಲರಾದ ಪ್ರಸಾದ್ ಕುಮಾರ್ ರೈ ವಂದಿಸಿದರು. ವೀರೇಂದ್ರ ಸಿದ್ದಕಟ್ಟೆ ನಿರೂಪಿಸಿದರು.

You may also like

News

ದಕ್ಷಿಣ ಕನ್ನಡ ಕಾರ್ಯನಿರತ ಪತ್ರಕರ್ತರ ಸಂಘದ ವೆಬ್‌ಸೈಟ್ ಅನಾವರಣ

“ಕಷ್ಟದಲ್ಲಿರುವವರಿಗೆ ನೆರವಾದ ತೃಪ್ತಿ ನನ್ನದು” – ಹರಿಕೃಷ್ಣ ಪುನರೂರು ಸಮಾಜದಲ್ಲಿ ಕಷ್ಟದಲ್ಲಿರುವವರಿಗೆ ತಮ್ಮಿಂದಾದ ನೆರವು ನೀಡಿದ ಸಂತೃಪ್ತಿ ಇದೆ. “ಕೊಟ್ಟದ್ದು ತನಗೆ, ಬಚ್ಚಿಟ್ಟದ್ದು ಪರರಿಗೆ” ಎಂಬ ಮಾತಿನಂತೆ
News

ಕಸ ಗುಡಿಸುವ ಕಾಯಕದಿಂದ ಫಾರ್ಚುನರ್‌ವರೆಗೆ – ಸೇಸಪ್ಪ ಅವರ ಯಶೋಗಾಥೆ!

ಬಡತನ ಕನಸು ಕಾಣುವುದಕ್ಕೆ ಅಡ್ಡಿಯಾಗದು ಎಂಬುದಕ್ಕೆ ಬಂಟ್ವಾಳ ತಾಲೂಕಿನ ನಾವೂರು ನಿವಾಸಿ ಹಾಗೂ ಬಂಟ್ವಾಳ ಪುರಸಭೆಯ ಪೌರಕಾರ್ಮಿಕ ಸೇಸಪ್ಪ ಅವರ ಬದುಕು ಉತ್ತಮ ಉದಾಹರಣೆ. ಲಕ್ಷಾಂತರ ರೂಪಾಯಿ

You cannot copy content of this page