August 26, 2026
Karavali Suddi | Bilingual Kannada/English Weekly Newspaper | ಕರಾವಳಿ ಸುದ್ದಿ - ಅರವಿನತ್ತ ನಮ್ಮ ಚಿತ್ತ
Follow Us
News

ಲೈಂಗಿಕ ಕ್ರಿಯೆಗೆ ಅಡ್ಡಿಯಾಗುತ್ತಿದ್ದಾರೆಂದು ಪ್ರಿಯಕರನ ಜೊತೆಗೆ ಸೇರಿ ಇಬ್ಬರು ಮಕ್ಕಳನ್ನೇ ಕೊಂದ ಪಾಪಿ ತಾಯಿ.!

ಬೆಂಗಳೂರು : ರಾಮನಗರದ ಕೆಂಪೇಗೌಡ ಸರ್ಕಲ್ ನಲ್ಲಿ ಪೈಶಾಚಿಕ ಘಟನೆಯೊಂದು ನಡೆದಿದ್ದು, ಲೈಂಗಿಕ ಕ್ರಿಯೆಗೆ ಅಡ್ಡಿ ಬರುತ್ತಿದ್ದಾರೆ ಎಂದು ಇಬ್ಬರು ಮಕ್ಕಳನ್ನು ತಾಯಿಯೊಬ್ಬಳು ಪ್ರಿಯಕರನ ಜೊತೆಗೆ ಸೇರಿ 3 ವರ್ಷದ ಕಬಿಲ್ ಹಾಗೂ 11 ತಿಂಗಳ ಕಬಿಲನ್ ಎಂಬ ಮಕ್ಕಳನ್ನು ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ನಡೆದಿದೆ.

ತಾಯಿ ಸ್ವೀಟಿ ಹಾಗೂ ಆಕೆಯ ಪ್ರಿಯಕರ ಗ್ರೆಗೊರಿ ಫ್ರಾನ್ಸಿಸ್ ಎಂಬಾತ ಇಬ್ಬರು ಲೈಂಗಿಕ ಕ್ರಿಯೆ ಮಾಡುವಾಗ ಮಕ್ಕಳು ಅಡ್ಡಿಯಾಗುತ್ತಾರೆಂದು ಇಬ್ಬರು ಮಕ್ಕಳನ್ನು ಹತ್ಯೆ ಮಾಡಿದ್ದಾರೆ. ಸ್ವೀಟಿ ಈ ಮೊದಲೇ ಶಿವು ಎಂಬಾತನ ಜೊತೆಗೆ ಮುದವೆಯಾಗಿದ್ದಳು. ಮದುವೆ ಬಳಿಕ ಪ್ರಿಯಕರ ಫ್ರಾನ್ಸಿಸ್ ಜೊತೆಗೆ ಅಕ್ರಮ ಸಂಬಂಧ ಹೊಂದಿದ್ದಳು. ಕೆಲ ದಿನಗಳ ಹಿಂದೆ ರಾಮನಗರಕ್ಕೆ ಬಂದಿದ್ದ ಸ್ವೀಟಿ ಇದೀಗ ಇಬ್ಬರು ಮಕ್ಕಳನ್ನು ಕೊಲೆ ಮಾಡಿದ್ದಾಳೆ.

ಸ್ಮಶಾನ ಸಿಬ್ಬಂದಿಯಿಂದ ಪ್ರಕರಣ ಬೆಳಕಿಗೆ ಬಂದಿದ್ದು, ಮಕ್ಕಳನ್ನು ಮಣ್ಣು ಮಾಡಲು ಹೋದಾಗ ಸ್ಮಶಾನ ಸಿಬ್ಬಂದಿ ಅನುಮಾನಗೊಂಡು ಮಗು ಏಕೆ ಸತ್ತಿದೆ ಎಂದು ಕೇಳಿದ್ದಾರೆ. ಇದಕ್ಕೆ ಸ್ವೀಟಿ, ಜ್ವರದಿಂದ ಮಗು ಮೃತಪಟ್ಟಿದೆ ಎಂದು ಸುಳ್ಳು ಹೇಳಿದ್ದಾಳೆ. ಅನುಮಾನಗೊಂಡ ಸ್ಮಶಾನ ಸಿಬ್ಬಂದಿ ತನ್ನ ಮೊಬೈಲ್ ನಲ್ಲಿ ಫೋಟೋ ತೆಗೆದು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಪೊಲೀಸರ ವಿಚಾರಣೆ ವೇಳೆ ಈ ಪ್ರಕರಣ ಬೆಳಕಿಗೆ ಬಂದಿದೆ.

You may also like

News

ಮಡಂತ್ಯಾರಿನಲ್ಲಿ ಸಂಭ್ರಮದ ಕೊಂಕಣಿ ಮಾನ್ಯತಾ ದಿವಸ್

ಕೊಂಕಣಿ ಭಾಷೆ, ಸಂಸ್ಕೃತಿ ಹಾಗೂ ಪರಂಪರೆಯನ್ನು ಸಂರಕ್ಷಿಸಿ, ಮುಂದಿನ ಪೀಳಿಗೆಗೆ ಪರಿಚಯಿಸುವ ಉದ್ದೇಶದಿಂದ ಐಸಿವೈಎಂ ಮಡಂತ್ಯಾರು ಘಟಕ, ಸಾಮಾಜಿಕ ಸಂವಹನ ಆಯೋಗ, ಕಥೊಲಿಕ್ ಸಭಾ ಮಡಂತ್ಯಾರು ಹಾಗೂ
News

ಸಂಚಾರ ನಿಯಮ ಉಲ್ಲಂಘನೆ – ಪುತ್ತೂರಿನಲ್ಲಿ ಗ್ಲಾಸ್ ಸ್ಟಿಕ್ಕರ್ ಅಳವಡಿಸಿದ ಹಾಗೂ ನಂಬರ್ ಪ್ಲೇಟ್ ಮರೆಮಾಚಿದ ವಾಹನಗಳಿಗೆ ಪೊಲೀಸರ ದಂಡ!

ಪುತ್ತೂರು: ವಾಹನಗಳ ಗ್ಲಾಸ್‌ಗಳಿಗೆ ದಟ್ಟವಾದ ಸ್ಟಿಕ್ಕರ್ ಅಳವಡಿಸಿ ಚಾಲನೆಗೆ ಅಡ್ಡಿಪಡಿಸುತ್ತಿದ್ದ ಹಾಗೂ ನೋಂದಣಿ ಸಂಖ್ಯೆ (ನಂಬರ್ ಪ್ಲೇಟ್) ಮರೆಮಾಚುವ ರೀತಿಯಲ್ಲಿ ಸ್ಟಿಕ್ಕರ್‌ಗಳನ್ನು ಹಾಕಿ ಸಂಚಾರ ನಿಯಮಗಳನ್ನು ಉಲ್ಲಂಘಿಸಿ

You cannot copy content of this page