July 10, 2026
Karavali Suddi | Bilingual Kannada/English Weekly Newspaper | ಕರಾವಳಿ ಸುದ್ದಿ - ಅರವಿನತ್ತ ನಮ್ಮ ಚಿತ್ತ
Follow Us
News

ಯೇಸು ಸ್ಪರ್ಶ ತಂಡದ ಪ್ರಖ್ಯಾತ ಬೋಧಕ ಸಹೋದರ ಟಿ.ಕೆ. ಜಾರ್ಜ್ ಇನ್ನಿಲ್ಲ

ಬೆಂಗಳೂರು: ಯೇಸು ಸ್ಪರ್ಶ ತಂಡದ ಪ್ರಖ್ಯಾತ ಪ್ರಚಾರಕ ಸಹೋದರ ಟಿ.ಕೆ. ಜಾರ್ಜ್ ಅವರು ಅಕ್ಟೋಬರ್ 14ರಂದು ಸೋಮವಾರ ಬೆಂಗಳೂರಿನ ಸೈಂಟ್ ಜಾನ್ ಆಸ್ಪತ್ರೆಯಲ್ಲಿ ನಿಧನರಾದರು. ಅವರಿಗೆ 69ವರ್ಷ ವಯಸ್ಸಾಗಿತ್ತು. ಉಸಿರಾಟ ಸಮಸ್ಯೆಯಿಂದ ಕಳೆದ 77 ದಿನಗಳಿಂದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಇವರು ಚಿಕಿತ್ಸೆ ಫಲಕಾರಿಯಾಗದೆ ಇಂದು ಕೊನೆಯುಸಿರೆಳೆದಿದ್ದಾರೆ.

ಟಿ.ಕೆ. ವರ್ಗೀಸ್ ಮತ್ತು ಬೇಬಿ ಮೇರಿ ಅವರ ಮಗನಾಗಿ ಟಿ.ಕೆ. ಜಾರ್ಜ್ ಇವರು 1955 ಸಪ್ಟಂಬರ್ 8ರಂದು ಹುಬ್ಬಳ್ಳಿಯಲ್ಲಿ ಜನಿಸಿದರು. ಅವರು 3ನೇ ವಯಸ್ಸಿನಲ್ಲಿ ತನ್ನ ತಾಯಿಯನ್ನು ಕಳೆದುಕೊಂಡರು. ಮಲ ತಾಯಿ ತ್ರೇಸಿಯಮ್ಮ ಇವರನ್ನು ಬೆಳೆಸಿದರು. ತಮ್ಮ ಶಾಲಾ ಶಿಕ್ಷಣದ ನಂತರ ಅವರು ಕನ್ನಡದ ಹಲವಾರು ಚಲನಚಿತ್ರಗಳಲ್ಲಿ ನಟಿಸುವ ಮೂಲಕ ಸ್ಯಾಂಡಲ್ ವುಡ್ ನಲ್ಲಿ ಮಿನುಗುವ ತಾರೆಯಾದರು. ಅವರು ತಮ್ಮ ವೈಯಕ್ತಿಕ ಜೀವನದಲ್ಲಿ ಹಲವಾರು ನಕಾರಾತ್ಮಕ ತಿರುವುಗಳನ್ನು ಎದುರಿಸಬೇಕಾಗಿ ಬಂದ ಕಾರಣ, ಅವರು ಸ್ವಲ್ಪ ಸಮಯದವರೆಗೆ ಖಿನ್ನತೆಗೆ ಒಳಗಾಗಿದ್ದರು.

ಜೀವನದಲ್ಲಿ ಆಸಕ್ತಿ ಕಳೆದುಕೊಂಡ ಸಹೋದರ ಟಿ.ಕೆ. ಜಾರ್ಜ್ 1990 ಮೇ 8ರಂದು ಕೇರಳದ ಪೊಟ್ಟಾದಲ್ಲಿರುವ ಡಿವೈನ್ ರಿಟ್ರೀಟ್ ಸೆಂಟರ್ ಗೆ ಧ್ಯಾನಕೂಟಕ್ಕಾಗಿ ತೆರಳಿದ ವೇಳೆ ಅವರ ಜೀವನದಲ್ಲಿ ಮಹತ್ವದ ತಿರುವು ದೊರಕಿತು. ಅದರ ಬಳಿಕ ದೇವರ ವಾಕ್ಯವನ್ನು ಬೋಧಿಸುವ ಮೂಲಕ ಸಾವಿರಾರು ಧ್ಯಾನಕೂಟಗಳನ್ನು ನಡೆಸಿಕೊಡುತ್ತಿದ್ದರು.  ಟಿ.ಕೆ. ಜಾರ್ಜ್ ಇವರು ಕನ್ನಡ, ಹಿಂದಿ, ತಮಿಳು ಮತ್ತು ಮಲಯಾಳಂ ಸೇರಿದಂತೆ ಬಹು ಭಾಷೆಗಳಲ್ಲಿ ವಿವಿಧ ಆಧ್ಯಾತ್ಮಿಕ ಸಿಡಿಗಳು ಮತ್ತು MP3ಗಳನ್ನು ಬಿಡುಗಡೆ ಮಾಡಿದ್ದರು. ಇವರು ಆಧ್ಯಾತ್ಮಿಕ ಡಿವಿಡಿಗಳನ್ನು ತಯಾರಿಸಿದ್ದಾರೆ ಮತ್ತು ಅನೇಕ ಭಾಷೆಗಳಲ್ಲಿ ಆಧ್ಯಾತ್ಮಿಕ ಪುಸ್ತಕಗಳನ್ನು ಬರೆದಿದ್ದಾರೆ. ಇವರ ಅಗಲಿಕೆಗೆ ಯೇಸು ಸ್ಪರ್ಶ ತಂಡ ಸಂತಾಪ ಸೂಚಿಸಿದೆ.  

You may also like

News

SJEC’s Nikhil A. Poojary to Represent India at International Yoga Championship

Saint Joseph Engineering College (SJEC) Vamanjoor has added another feather to its cap with the outstanding achievement of Nikhil A.
News

ಶಿಲುಬೆ ಧ್ವಂಸಗೊಳಿಸಿದರೆ ನಂಬಿಕೆ ನಾಶವಾಗದು – ಪಶ್ಚಿಮ ಬಂಗಾಳದ ಚರ್ಚ್ ಮೇಲಿನ ದಾಳಿಗೆ AICU ರಾಜಾಧ್ಯಕ್ಷ ಅಲ್ವಿನ್ ಡಿಸೋಜ ಪಾನೀರ್ ಆಕ್ರೋಶ

ಪಶ್ಚಿಮ ಬಂಗಾಳದ ಬರೂಯಿಪುರದಲ್ಲಿ ಹೊಸದಾಗಿ ನಿರ್ಮಾಣಗೊಂಡಿರುವ ಚರ್ಚ್ ಮೇಲೆ ದಾಳಿ ನಡೆಸಿ, ಪವಿತ್ರ ಶಿಲುಬೆಯನ್ನು ಧ್ವಂಸಗೊಳಿಸಿರುವ ಘಟನೆ ಅತ್ಯಂತ ಖಂಡನೀಯವಾಗಿದ್ದು, ಧಾರ್ಮಿಕ ಸೌಹಾರ್ದತೆಗೆ ಧಕ್ಕೆ ತರುವ ಇಂತಹ

You cannot copy content of this page