July 10, 2026
Karavali Suddi | Bilingual Kannada/English Weekly Newspaper | ಕರಾವಳಿ ಸುದ್ದಿ - ಅರವಿನತ್ತ ನಮ್ಮ ಚಿತ್ತ
Follow Us
News

ದೇಶದ ಎಲ್ಲಾ ವಕೀಲರ ಸಂಘಗಳ ಮೂಲಕ ಭಾರತೀಯ ವಕೀಲರ ಪರಿಷತ್ತು ಮಾರ್ಗಸೂಚಿ ಬಿಡುಗಡೆ – ಕಿರಿಯ ವಕೀಲರಿಗೆ ಕನಿಷ್ಟ ಗೌರವಯುತ ಸಂಭಾವನೆ

ನ್ಯಾಯಾಂಗದ ಸೇವೆಯನ್ನು ಎತ್ತರಕ್ಕೆ ಏರಿಸುವ ಮತ್ತು ವಕೀಲರ ಗುಣಮಟ್ಟವನ್ನು ಹೆಚ್ಚಿಸುವ ನಿಟ್ಟಿನಲ್ಲಿ ಕಿರಿಯ ವಕೀಲರಿಗೆ ಕನಿಷ್ಟ ಗೌರವಯುತ ಸಂಭಾವನೆ ನೀಡುವಂತೆ ಎಲ್ಲ ಹಿರಿಯ ವಕೀಲರು ಮತ್ತು ವಕೀಲ ಸಂಸ್ಥೆಗಳಿಗೆ ಭಾರತೀಯ ವಕೀಲರ ಪರಿಷತ್ತು ಮಾರ್ಗಸೂಚಿ ಬಿಡುಗಡೆ ಮಾಡಿದೆ.

ದೇಶದ ಎಲ್ಲಾ ರಾಜ್ಯಗಳ ವಕೀಲರ ಪರಿಷತ್ತಿನ ಮೂಲಕ ಎಲ್ಲಾ ವಕೀಲರ ಸಂಘಗಳಿಗೆ ಭಾರತೀಯ ವಕೀಲರ ಸಂಘ ಪತ್ರ ಬರೆದಿದೆ. ರಿಟ್ ಅರ್ಜಿ 10159/2024ರ ಪ್ರಕರಣದಲ್ಲಿ ದೆಹಲಿಯ ಹೈಕೋರ್ಟ್ ನೀಡಿದ ತೀರ್ಪಿನ ಆಧಾರದಲ್ಲಿ ಭಾರತೀಯ ವಕೀಲರ ಪರಿಷತ್ತು ಈ ಮಾರ್ಗಸೂಚಿ ಬಿಡುಗಡೆ ಮಾಡಿದೆ. ವಕೀಲ ವೃತ್ತಿ ನಡೆಸುವ ಕಾನೂನು ಸಂಸ್ಥೆಗಳು ಮತ್ತು ಹಿರಿಯ ವಕೀಲರು ಕಾನೂನು ಸೇವೆಯಲ್ಲಿ ತೊಡಗಿಸಿಕೊಂಡಿದ್ದು, ಉತ್ತಮ ಆದಾಯವನ್ನು ಹೊಂದಿದ್ದಾರೆ. ಆರಂಭದ ದಿನಗಳಲ್ಲಿ ವಕೀಲರು ಸಂಕಷ್ಟಮಯ ಪರಿಸ್ಥಿತಿಯನ್ನು ಎದುರಿಸಬೇಕಾಗುತ್ತದೆ. ಈ ಹಂತದಲ್ಲಿ ಅವರಿಗೆ ಆರ್ಥಿಕ ನೆರವು ಬೇಕಾಗುತ್ತದೆ ಎಂದು ಅಭಿಪ್ರಾಯಪಟ್ಟಿರುವ ಭಾರತೀಯ ವಕೀಲರ ಪರಿಷತ್ತು, ನವ ವಕೀಲರಿಗೆ ಮತ್ತು ಕಿರಿಯ ವಕೀಲರಿಗೆ ಕನಿಷ್ಟ ಗೌರವಯುತ ಸಂಭಾವನೆ ನೀಡುವಂತೆ ಮಾರ್ಗಸೂಚಿ ಹೊರಡಿಸಿದೆ.

ನಗರ ಪ್ರದೇಶದಲ್ಲಿ ಹಿರಿಯ ವಕೀಲರು ಹಾಗೂ ಕಾನೂನು ಸಂಸ್ಥೆಗಳಲ್ಲಿ ಸೇವೆ ಸಲ್ಲಿಸುತ್ತಿರುವ ಕಿರಿಯ ಹಾಗೂ ಜ್ಯೂನಿಯರ್ ವಕೀಲರಿಗೆ ಕನಿಷ್ಟ ರೂಪಾಯಿ 20,000/- ಗೌರವ ಸಂಭಾವನೆ ನೀಡಬೇಕು. ಗ್ರಾಮೀಣ ಪ್ರದೇಶದಲ್ಲಿ ಹಿರಿಯ ವಕೀಲರು ಹಾಗೂ ಕಾನೂನು ಸಂಸ್ಥೆಗಳಲ್ಲಿ ಸೇವೆ ಸಲ್ಲಿಸುತ್ತಿರುವ ಕಿರಿಯ ಹಾಗೂ ಜ್ಯೂನಿಯರ್ ವಕೀಲರಿಗೆ ಕನಿಷ್ಟ ರೂಪಾಯಿ 15,000/- ಗೌರವ ಸಂಭಾವನೆ ನೀಡಬೇಕು. ಈ ಕನಿಷ್ಟ ಗೌರವ ಸಂಭಾವನೆಯು ಕಾಲ ಕಾಲಕ್ಕೆ ವಕೀಲ ಸಮುದಾಯದ ಸೂಕ್ತ ಪರಾಮರ್ಶೆ ನಡೆಸಿ ಅವಲೋಕನದ ಬಳಿಕ ಪರಿಷ್ಕರಿಸಬೇಕು ಎಂದು ಭಾರತೀಯ ವಕೀಲರ ಪರಿಷತ್ತು ತನ್ನ ಪತ್ರದಲ್ಲಿ ತಿಳಿಸಿದೆ.

You may also like

News

SJEC’s Nikhil A. Poojary to Represent India at International Yoga Championship

Saint Joseph Engineering College (SJEC) Vamanjoor has added another feather to its cap with the outstanding achievement of Nikhil A.
News

ಶಿಲುಬೆ ಧ್ವಂಸಗೊಳಿಸಿದರೆ ನಂಬಿಕೆ ನಾಶವಾಗದು – ಪಶ್ಚಿಮ ಬಂಗಾಳದ ಚರ್ಚ್ ಮೇಲಿನ ದಾಳಿಗೆ AICU ರಾಜಾಧ್ಯಕ್ಷ ಅಲ್ವಿನ್ ಡಿಸೋಜ ಪಾನೀರ್ ಆಕ್ರೋಶ

ಪಶ್ಚಿಮ ಬಂಗಾಳದ ಬರೂಯಿಪುರದಲ್ಲಿ ಹೊಸದಾಗಿ ನಿರ್ಮಾಣಗೊಂಡಿರುವ ಚರ್ಚ್ ಮೇಲೆ ದಾಳಿ ನಡೆಸಿ, ಪವಿತ್ರ ಶಿಲುಬೆಯನ್ನು ಧ್ವಂಸಗೊಳಿಸಿರುವ ಘಟನೆ ಅತ್ಯಂತ ಖಂಡನೀಯವಾಗಿದ್ದು, ಧಾರ್ಮಿಕ ಸೌಹಾರ್ದತೆಗೆ ಧಕ್ಕೆ ತರುವ ಇಂತಹ

You cannot copy content of this page