ದೇರಳಕಟ್ಟೆಯ ಫಾದರ್ ಮುಲ್ಲರ್ ಹೋಮಿಯೋಪಥಿ ಮೆಡಿಕಲ್ ಕಾಲೇಜು NCH ವತಿಯಿಂದ A+ ಶ್ರೇಣಿಗೆ ಆಯ್ಕೆ

ಭಾರತದ 216 ಹೋಮಿಯೋಪಥಿ ಮೆಡಿಕಲ್ ಕಾಲೇಜುಗಳಲ್ಲಿ ಕೇವಲ 43 ಕಾಲೇಜುಗಳಿಗೆ ಈ ಗೌರವ
ಮಂಗಳೂರು ನವಂಬರ್ 20 : ಹೊಮಿಯೋಪಥಿ ರಾಷ್ಟ್ರೀಯ ಆಯೋಗದ ವೈದ್ಯಕೀಯ ಮೌಲ್ಯಮಾಪನ ಮತ್ತು ರೇಟಿಂಗ್ ಮಂಡಳಿಯು 2024ರಲ್ಲಿ ಹೊಮಿಯೋಪಥಿ ವೈದ್ಯಕೀಯ ಮಹಾವಿದ್ಯಾಲಯಗಳಿಗೆ ನಡೆಸಿದ ಮೌಲ್ಯಮಾಪನದಲ್ಲಿ ಮಂಗಳೂರಿನ ದೇರಳಕಟ್ಟೆಯ ಫಾದರ್ ಮುಲ್ಲರ್ ಹೋಮಿಯೋಪಥಿ ಮೆಡಿಕಲ್ ಕಾಲೇಜು NCH ವತಿಯಿಂದ A+ ಶ್ರೇಣಿಗೆ ಪಾತ್ರವಾಗಿದೆ.
ಭಾರತದ 216 ಹೋಮಿಯೋಪಥಿ ಮೆಡಿಕಲ್ ಕಾಲೇಜುಗಳಲ್ಲಿ 43 ಕಾಲೇಜುಗಳಿಗೆ A+ ಗೌರವ ಹಾಗೂ ಕರ್ನಾಟಕದ 18 ಕಾಲೇಜುಗಳಲ್ಲಿ ಕೇವಲ 5 ಕಾಲೇಜುಗಳಿಗೆ ಮಾತ್ರ ಈ ಗೌರವ ಲಭಿಸಿದೆ. ಮಂಗಳೂರಿನ ದೇರಳಕಟ್ಟೆಯ ಫಾದರ್ ಮುಲ್ಲರ್ ಹೋಮಿಯೋಪಥಿ ಮೆಡಿಕಲ್ ಕಾಲೇಜು NCH ವತಿಯಿಂದ A+ ಶ್ರೇಣಿಗೆ ಕರ್ನಾಟಕದಲ್ಲಿ ಆಯ್ಕೆಯಾದ 5 ಕಾಲೇಜುಗಳಲ್ಲಿ ಒಂದು ಎಂದು ಘೋಷಿಸಲಾಗಿದೆ.