September 4, 2026
Karavali Suddi | Bilingual Kannada/English Weekly Newspaper | ಕರಾವಳಿ ಸುದ್ದಿ - ಅರವಿನತ್ತ ನಮ್ಮ ಚಿತ್ತ
Follow Us
News

ದಕ್ಷಿಣ ಕನ್ನಡ ಜಿಲ್ಲಾ ಟೂರಿಸ್ಟ್ ಕಾರು ಚಾಲಕ-ಮಾಲಕರ ಸಂಘದ ಗೌರವಾಧ್ಯಕ್ಷ ಬಿ.ಎಂ. ಪ್ರಭಾಕರ ದೈವಗುಡ್ಡೆ ನಿಧನ

ಬಂಟ್ವಾಳ : ದಕ್ಷಿಣ ಕನ್ನಡ ಜಿಲ್ಲಾ ಟೂರಿಸ್ಟ್ ಕಾರು ಚಾಲಕ-ಮಾಲಕರ ಸಂಘದ ಗೌರವಾಧ್ಯಕ್ಷ ಬಿ.ಎಂ. ಪ್ರಭಾಕರ ದೈವಗುಡ್ಡೆ (71) ಅವರು ಅಲ್ಪ ಕಾಲದ ಅನಾರೋಗ್ಯದಿಂದ ಸ್ವಗೃಹದಲ್ಲಿ ನಿಧನರಾಗಿದ್ದಾರೆ.

ಬಂಟ್ವಾಳದಲ್ಲಿ ಸಮಾನ ಮನಸ್ಕ ಸಂಘಟನೆಗಳ ಸಮನ್ವಯ ಸಮಿತಿ ರಚಿಸಿ ಆ ಮೂಲಕ ತಾಲೂಕಿನಲ್ಲಿ ಜನಪರ ಸಮಸ್ಯೆಗಳ ಬಗ್ಗೆ ಹೋರಾಟ ಸಂಘಟಿಸಿ ಜನಾನುರಾಗಿಯಾಗಿದ್ದ ಹಿರಿಯ ಸಂಘಟಕರಾಗಿದ್ದ ಪ್ರಭಾಕರ ದೈವಗುಡ್ಡೆ ಅವರು ರೈತ ಪರ ಚಳುವಳಿ, ಟೋಲ್ ಗೇಟ್ ಅವ್ಯವಸ್ಥೇಯ ವಿರುದ್ದ ಹೋರಾಟ, ಎತ್ತಿನ ಹೊಳೆ ಯೋಜನೆಯ ವಿರೋಧಿ ಹೋರಾಟಗಳಲ್ಲಿ ಸಕ್ರಿಯರಾಗಿದ್ದ ಇವರು ಸಮಾನ ಮನಸ್ಕರನ್ನು ಒಟ್ಟುಗೂಡಿಸಿ ಹಲವು ಹೋರಾಟಗಳನ್ನು ನಡೆಸಿದ್ದರು.  ಮೃತರು ಪತ್ನಿ, ಪುತ್ರಿ ಸಹಿತ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ. ಇವರ ನಿಧನಕ್ಕೆ ತಾಲೂಕಿನ ವಿವಿಧ ಸಂಘಟನೆಗಳ ಪ್ರಮುಖರು ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.

You may also like

News

ಧನಂಜಯ ವರ್ಮ ಧ್ವನಿಯಲ್ಲಿ ಗುರು ರಾಯರ ಭಕ್ತಿಯ ರಸದಾರೆ ‘ಗುರು ರಾಯರುಲ್ಲೆರ್’ ನೂತನ ಭಕ್ತಿಗೀತೆ ಬಿಡುಗಡೆ

ಮಂಗಳೂರು: ಮಂತ್ರಾಲಯದ ಶ್ರೀ ರಾಘವೇಂದ್ರ ಸ್ವಾಮಿಗಳ ಮೇಲಿನ ಭಕ್ತಿ, ಶರಣಾಗತಿ ಹಾಗೂ ಅಚಲ ನಂಬಿಕೆಯನ್ನು ಸಾರುವ ‘ಗುರು ರಾಯರುಲ್ಲೆರ್’ ಎಂಬ ನೂತನ ಭಕ್ತಿಗೀತೆ ಧನಂಜಯ ವರ್ಮ ಅವರ
News

ಕ್ರೈಸ್ತ ಸಮುದಾಯದ ಕಲ್ಯಾಣಕ್ಕೆ ₹250 ಕೋಟಿ ಬಜೆಟ್ ಅನುದಾನ ಸಂಪೂರ್ಣ ಬಿಡುಗಡೆಗೆ ಆಗ್ರಹ

ಮುಖ್ಯಮಂತ್ರಿ ಅವರಿಗೆ MLC ಐವನ್ ಡಿಸೋಜ ಮುಖಾಂತರ ಸ್ಟ್ಯಾನಿ ಪಿಂಟೋ ಬೆಂಗಳೂರು ಮನವಿ ಬೆಂಗಳೂರು: ರಾಜ್ಯ ಸರ್ಕಾರವು ಪ್ರಸಕ್ತ ಸಾಲಿನ ಬಜೆಟ್‌ನಲ್ಲಿ ಕ್ರೈಸ್ತ ಸಮುದಾಯದ ಕಲ್ಯಾಣ ಮತ್ತು

You cannot copy content of this page