August 26, 2026
Karavali Suddi | Bilingual Kannada/English Weekly Newspaper | ಕರಾವಳಿ ಸುದ್ದಿ - ಅರವಿನತ್ತ ನಮ್ಮ ಚಿತ್ತ
Follow Us
News

ಬಿಜೈಯಲ್ಲಿನ ಲೂರ್ಡ್ಸ್ ಸೆಂಟ್ರಲ್ ಸ್ಕೂಲ್‌ನ ಶಿಶುವಿಹಾರದ ವಾರ್ಷಿಕೋತ್ಸವ -“ನನ್ನ ಬಣ್ಣದ ಜಗತ್ತು”

ಮಂಗಳೂರು ನಗರದ ಲೂರ್ಡ್ಸ್ ಶಿಕ್ಷಣ ಸಂಸ್ಥೆಯು ಶಿಶುವಿಹಾರ ವಿಭಾಗದ ವಾರ್ಷಿಕೋತ್ಸವನ್ನು ಆಚರಿಸುತ್ತಿರುವುದು ನಮಗೆಲ್ಲರಿಗೂ ಹೆಮ್ಮೆಯ ವಿಷಯವಾಗಿದೆ. ಶಿಶುವಿಹಾರದಲ್ಲಿ ಮಕ್ಕಳ ಪ್ರಗತಿಗೆ ಬೇಕಾದ ಉತ್ತಮ ಶಿಕ್ಷಣ ಮತ್ತು ಚಟುವಟಿಕೆಗಳನ್ನು ನೀಡುತ್ತಾ, ವಿದ್ಯಾರ್ಥಿಗಳ ಕಲಿಕೆಗೆ ಬೇಕಾದ ಮೌಲ್ಯಯುತ ಶಿಕ್ಷಣ ನೀಡಿ ಪ್ರಗತಿ ಪಥದತ್ತ ಸಾಗುತ್ತಲಿದೆ.

ಮಕ್ಕಳ ಕ್ರಿಯಾಶೀಲತೆಗೆ ಅಧ್ಯಾಪಕರು ಮತ್ತು ಶಿಕ್ಷಕರು ಪ್ರಮುಖ ಪಾತ್ರ ವಹಿಸುತ್ತಾರೆ. ಮಕ್ಕಳು ದೇವರು ಕೊಟ್ಟ ಉಡುಗೊರೆ, ಅವರನ್ನು ಸಾಮಾಜಿಕ, ಬೌದ್ಧಿಕ ಮತ್ತು ಸಾಂಸ್ಕೃತಿಕ ರಂಗಗಳಲ್ಲಿ ತೊಡಗಿಸಿಕೊಳ್ಳಬೇಕು. ಪಾಲಕರು ತಮ್ಮ ಮಕ್ಕಳಿಗೆ ಪ್ರೋತ್ಸಾಹ, ಪ್ರೀತಿ ವಾತ್ಸಲ್ಯ ನೀಡಿ ಅವರನ್ನು ಉತ್ತಮ ಪ್ರಜೆಗಳಾಗಿ ರೂಪಿಸಿಕೊಳ್ಳಬೇಕು ಮತ್ತು ಸ್ವಲ್ಪ ಸಮಯವನ್ನು ತಮ್ಮ ಮಕ್ಕಳಿಗೊಸ್ಕರ ಮೀಸಲಿಡಬೇಕು ಎಂದು ಮಕ್ಕಳ ತಜ್ಞೆ ಡಾ. ಚಂದನಾ ಪೈ ಕರೆ ನೀಡಿದರು. ಅವರು ಲೂರ್ಡ್ಸ್ ಸೆಂಟ್ರಲ್ ಸ್ಕೂಲ್‌ನಲ್ಲಿ ಆಯೋಜಿಸಿದ ಶಿಶುವಿಹಾರ ವಿಭಾಗದ ವಾರ್ಷಿಕೋತ್ಸವದ ಮುಖ್ಯ ಅತಿಥಿಯಾಗಿ ಮಾತನಾಡಿದರು.

 

 

ಮೌಲ್ಯಯುತ ಶಿಕ್ಷಣವನ್ನು ನಮ್ಮ ಯುವ ಮನಸ್ಸುಗಳಿಗೆ ನೀಡಬೇಕು. ಮಕ್ಕಳ ಬೆಳವಣಿಗೆಗೆ ಪೋಷಕರ ಪಾತ್ರ ಅತೀ ಮುಖ್ಯ, ಮಕ್ಕಳನ್ನು ಶಿಸ್ತು ಮತ್ತು ಸಂಯಮದಿಂದ ಬೆಳೆಸಬೇಕು. ಒತ್ತಡಯುಕ್ತ ಜೀವನವನ್ನು ಹೇಗೆ ನಿಭಾಯಿಸಬೇಕೆಂದು ಮಕ್ಕಳಿಗೆ ಸೂಚಿಸಬೇಕು ಎಂದು ಶಾಲೆಯ ಸಂಚಾಲಕ ವಂದನೀಯ ಡಾ.ಜೋನ್ ಬ್ಯಾಪ್ಟಿಸ್ಟ್ ಸಲ್ಡಾನಾ ಸಂದೇಶ ನೀಡಿದರು. ಶಾಲೆಯ ಪ್ರಾಂಶುಪಾಲರಾದ ವಂದನನೀಯ ಫಾದರ್ ಜಾನ್ಸನ್ ಎಲ್. ಸಿಕ್ವೇರಾ ವಾರ್ಷಿಕ ವರದಿಯ ಪಕ್ಷಿನೋಟವನ್ನು ಬೀರಿದರು. ವೇದಿಕೆಯಲ್ಲಿ ಬಿಜೈ ಚರ್ಚ್ ಆಡಳಿತ ಮಂಡಳಿಯ ಉಪಾಧ್ಯಕ್ಷ ಅಶೋಕ್ ಪಿಂಟೋ, ಕಾರ್ಯದರ್ಶಿ ಅವಿತಾ ಸಿಂಥಿಯಾ ಪಿಂಟೋ, ಉಪಪ್ರಾಂಶುಪಾಲೆಯರಾದ ಬೆಲಿಟಾ ಮಸ್ಕರೇನ್ಹಸ್, ಅನಿತಾ ಥೋಮಸ್ ಉಪಸ್ಥಿತರಿದ್ದರು.

ವೇದಿಕೆಯಲ್ಲಿ ಉಪಸ್ಥಿತರಿದ್ದ ಗಣ್ಯರು ಮುಖ್ಯ ಅತಿಥಿಗಳಾದ ಡಾ. ಚಂದನಾ ಪೈ ಅವರನ್ನು ಸ್ಮರಣಿಕೆ ನೀಡಿ, ಶಾಲು ಹೊದಿಸಿ ಸನ್ಮಾನಿಸಿದರು. ಲೀಡಿಯಾ ಡಿಸೋಜ ಇವರು ನೆರೆದಿರುವ ಎಲ್ಲರನ್ನು ಪ್ರೀತಿ ಪೂರ್ವಕವಾಗಿ ಸ್ವಾಗತಿಸಿದರು.

ಶಿವಾಂಶ್ ಮಲಿಕ್ ಮತ್ತು ನಾತ್‌ಲಿನ್ ಮಿರಾಂದ ಕಾರ್ಯಕ್ರಮವನ್ನು ನಿರೂಪಿಸಿದರು. ಶಿಶುವಿಹಾರದ ಕೆಜಿ-2 ವಿಭಾಗದ ಮಕ್ಕಳು ಧನ್ಯವಾದ ಸಮರ್ಪಿಸಿದರು. ಪುಟಾಣಿ ಮಕ್ಕಳು ಬಣ್ಣದ ಜಗತ್ತಿನ ಕುರಿತು ನೃತ್ಯ ನಾಟಕವನ್ನು ಪ್ರಸ್ತುತ ಪಡಿಸಿ ಸರ್ವರನ್ನು ಮನೋರಂಜಿಸಿದರು.

You may also like

News

ಮಡಂತ್ಯಾರಿನ ಶಾನ್ವಿ ಮತ್ತು ಶ್ರೇಯಸ್‌ ಅವರಿಗೆ ‘ರಾಷ್ಟ್ರೀಯ ಪ್ರತಿಭಾ ರತ್ನ’ ಗೌರವ

ಕಾವ್ಯಶ್ರೀ ಚಾರಿಟಬಲ್ ಟ್ರಸ್ಟ್‌ (ರಿ.), ಕರ್ನಾಟಕ ವತಿಯಿಂದ 80ನೇ ಸ್ವಾತಂತ್ರ್ಯೋತ್ಸವದ ಅಂಗವಾಗಿ ಆಯೋಜಿಸಿದ್ದ ‘ಸ್ವಾತಂತ್ರ್ಯೋತ್ಸವ–2026’ ಕಾರ್ಯಕ್ರಮದಲ್ಲಿ ಮಡಂತ್ಯಾರಿನ ಪ್ರತಿಭೆಗಳಾದ ಶಾನ್ವಿ ಪೂಜಾರಿ ಹಾಗೂ ಶ್ರೇಯಸ್ ಪೂಜಾರಿ ಅವರಿಗೆ
News

ಮಡಂತ್ಯಾರಿನಲ್ಲಿ ಸಂಭ್ರಮದ ಕೊಂಕಣಿ ಮಾನ್ಯತಾ ದಿವಸ್

ಕೊಂಕಣಿ ಭಾಷೆ, ಸಂಸ್ಕೃತಿ ಹಾಗೂ ಪರಂಪರೆಯನ್ನು ಸಂರಕ್ಷಿಸಿ, ಮುಂದಿನ ಪೀಳಿಗೆಗೆ ಪರಿಚಯಿಸುವ ಉದ್ದೇಶದಿಂದ ಐಸಿವೈಎಂ ಮಡಂತ್ಯಾರು ಘಟಕ, ಸಾಮಾಜಿಕ ಸಂವಹನ ಆಯೋಗ, ಕಥೊಲಿಕ್ ಸಭಾ ಮಡಂತ್ಯಾರು ಹಾಗೂ

You cannot copy content of this page