ಉದ್ಯಮಿ ಉದಯ ಶೆಟ್ಟಿ ಮುನಿಯಾಲು ಗುರುವಾಯನಕೆರೆ ಅರಮಲೆ ಬೆಟ್ಟಕ್ಕೆ ಭೇಟಿ

ಬೆಳ್ತಂಗಡಿ : ಬಂಟರ ಸಂಘದ ಅಧ್ಯಕ್ಷರು ಹಾಗೂ ಖ್ಯಾತ ಉದ್ಯಮಿಗಳಾದ ಮುನಿಯಾಲು ಉದಯ ಕುಮಾರ್ ಶೆಟ್ಟಿ ಇವರು ಗುರುವಾಯನಕೆರೆಯ ಕಾರಣಿಕ ಕ್ಷೇತ್ರ ಅರಮಲೆ ಬೆಟ್ಟ ಕೊಡಮಣಿತ್ತಾಯ ದೈವಸ್ಥಾನಕ್ಕೆ ಭೇಟಿ ನೀಡಿ ಕೊಡಮಣಿತ್ತಾಯ ದೈವದ ಅನುಗ್ರಹ ಪಡೆದರು. ಅವರು ಅರಮಲೆ ಬೆಟ್ಟದ ಶ್ರೀ ಕೊಡಮಣಿತ್ತಾಯ ದೈವದ ಪುನರ್ ಪ್ರತಿಷ್ಠಾ ಬ್ರಹ್ಮಕುಂಭಾಭಿಷೇಕ ಜಾತ್ರಾ ಮಹೋತ್ಸವದ ವಿಸ್ತ್ರತ ಕಟ್ಟಡದ ಕಾಮಗಾರಿಯನ್ನು ವೀಕ್ಷಿಸಿ ಸಮಿತಿಯವರ ಯೋಜನೆ ಮತ್ತು ಅಭಿವೃದ್ಧಿಯ ಕಾರ್ಯಗಳನ್ನು ಮೆಚ್ಚಿ ಬ್ರಹ್ಮಕುಂಭಾಭಿಷೇಕಕ್ಕೆ ಸಂಪೂರ್ಣ ಸಹಕಾರ ನೀಡುವುದಾಗಿ ತಿಳಿಸಿದರು.
ಈ ಸಂದರ್ಭದಲ್ಲಿ ಕ್ಷೇತ್ರದ ಅನುವಂಶಿಕ ಆಡಳಿತ ಮೊಕ್ತೇಸರರು ಸುಕೇಶ್ ಕುಮಾರ್ ಕಡಂಬು, ಬ್ರಹ್ಮಕುಂಭಾಭಿಷೇಕದ ಅಧ್ಯಕ್ಷರು ಶಶಿಧರ್ ಶೆಟ್ಟಿ ಬರೋಡ, ಪ್ರವೀಣ್ ಕುಮಾರ್ ಜೈನ್ ಪಾಡ್ಯಾರು ಬೂಡು, ಸಮಿತಿ ಕಾರ್ಯಾಧ್ಯಕ್ಷ ಸುಮಂತ್ ಕುಮಾರ್ ಜೈನ್, ಕೋಶಾಧಿಕಾರಿ ಪ್ರದೀಪ್ ಕುಮಾರ್ ಶೆಟ್ಟಿ, ಸುನೀಶ್ ಕುಮಾರ್ ಮೊದಲಾದವರು ಉಪಸ್ಥಿತರಿದ್ದರು.