ಸ್ವಂತ ಮಗಳ ಮೇಲೆಯೇ ಆತ್ಯಾಚಾರವೆಸಗಿ ಗರ್ಭವತಿ ಮಾಡಿದ ಪಾಪಿ ತಂದೆ

ದಿನದಿಂದ ದಿನಕ್ಕೆ ದೇಶದಲ್ಲಿ ಆತ್ಯಾಚಾರ ಲೈಂಗಿಕ ದೌರ್ಜನ್ಯಗಳ ಸಂಖ್ಯೆ ಹೆಚ್ಚುತ್ತಿದೆ. ಇದೀಗ ಇಂತಹದ್ದೇ ಒಂದು ಘಟನೆ ಗುಜರಾತ್‌ನ ಅಹ್ಮದಾಬಾದ್ ನಲ್ಲಿ ನಡೆದಿದೆ. ತಂದೆಯೇ ತನ್ನ 14 ವರ್ಷದ ಮಗಳ ಮೇಲೆಯೇ ಆತ್ಯಾಚಾರ ಎಸಗಿ ಆಕೆಯನ್ನು ಗರ್ಭವತಿ ಮಾಡಿದ ಘಟನೆ ನಡೆದಿದೆ.
ಮಗಳ ಮೇಲೆ ನಿರಂತರವಾಗಿ ತಂದೆ ಆತ್ಯಾಚಾರವೆಸಗುತ್ತಿದ್ದ. ನಂತರ ಯಾರಲ್ಲೂ ಹೇಳದ ಹಾಗೆ ಬೆದರಿಕೆ ಕೂಡ ಹಾಕುತ್ತಿದ್ದ. ಮಗಳು ವಿಪರೀತ ಹೊಟ್ಟೆನೋವಿನಿಂದ ಬಳಲುತ್ತಿದ್ದಾಗ ಆಸ್ಪತ್ರೆಗೆ ದಾಖಲಿಸಿದ ಸಂದರ್ಭದಲ್ಲಿ ನಿಜಾಂಶ ಬಯಲಾಯಿತು. ಫೆಬ್ರವರಿ 5ರಂದು ಬುಧವಾರ ಮಗಳು ಒಂದು ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾಳೆ.
ಆರೋಪಿ ಪಾಪಿ ತಂದೆಗೆ ಮೊದಲೇ 6 ಮಕ್ಕಳಿದ್ದಾರೆ. ಈ ಆರು ಮಕ್ಕಳಲ್ಲಿ ಒಬ್ಬಾಕೆಯ ಮೇಲೆ ಆತ್ಯಾಚಾರವೆಸಗಿದ್ದಾನೆ. ಪೊಲೀಸರು ಭಾರತೀಯ ನ್ಯಾಯ ಸಂಹಿತಾ ಮತ್ತು ಪೋಕ್ಸೊ ಕಾಯ್ದೆಯ ಹಲವು ಸೆಕ್ಷನ್‌ಗಳ ಅಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ಆರೋಪಿ ತಂದೆ ಈವಾಗ ಪೊಲೀಸರ ಅತಿಥಿಯಾಗಿ ಜೈಲು ಪಾಲಾಗಿದ್ದಾನೆ.