May 1, 2026
Karavali Suddi | Bilingual Kannada/English Weekly Newspaper | ಕರಾವಳಿ ಸುದ್ದಿ - ಅರವಿನತ್ತ ನಮ್ಮ ಚಿತ್ತ
Follow Us
News

ಸೂರಿಕುಮೇರು ಇಲ್ಲಿ ಅವೈಜ್ಞಾನಿಕವಾಗಿ ನಿರ್ಮಿಸಿದ ರಸ್ತೆ ವಿಭಜಕ ತಡೆಬೇಲಿ ಹೆಚ್ಚುತ್ತಿರುವ ಅಪಘಾತಗಳು

ಅವೈಜ್ಞಾನಿಕ ರಸ್ತೆಯನ್ನು ವೈಜ್ಞಾನಿಕ ಎಂದು ಬ್ಯಾನರ್ ಹಾಕಿ ಬಿಂಬಿಸುವ ಪಂಚಾಯತ್ ಸದಸ್ಯ ಎಲ್ಲಿ ಎಂದು ಕೇಳುವ ಗ್ರಾಮಸ್ಥರು

ಮಾಣಿ ಇಲ್ಲಿನ ಸೂರಿಕುಮೇರು ಜಂಕ್ಷನ್ ಬಳಿ ರಾಷ್ಟ್ರೀಯ ಹೆದ್ದಾರಿ ಚತುಷ್ಪಥ ಕಾಮಗಾರಿಯ ಭಾಗವಾಗಿ ಹೆದ್ದಾರಿಗೆ ನಿರ್ಮಿಸಿದ ರಸ್ತೆ ವಿಭಜಕ ಕಬ್ಬಿಣದ ತಡೆಬೇಲಿಯು ಅವೈಜ್ಞಾನಿಕವಾಗಿದ್ದು ರಾತ್ರಿ ವೇಳೆ ಇದು ಚಾಲಕರಿಗೆ ಕಣ್ಣಿಗೆ ಕಾಣಿಸದ ರೀತಿಯಲ್ಲಿ ಇರುವುದರಿಂದ ನಿರ್ಮಿಸಿದ ದಿನದಿಂದ ಇದುವರೆಗೆ ಅಪಘಾತಗಳು ಹೆಚ್ಚೆಚ್ಚು ಸಂಭವಿಸಿದೆ. ಇಂದು ಮಾರ್ಚ್ 20ರಂದು ಗುರುವಾರ ಬೆಳಗ್ಗಿನ ಜಾವ ಮಂಗಳೂರು ಕಡೆಯಿಂದ ಬಂದ ಟ್ಯಾಂಕರೊಂದು ರಸ್ತೆ ವಿಭಜಕ ತಡೆಬೇಲಿಯನ್ನು ಸೀಳಿಕೊಂಡು ಹೋಗಿ ಹೆದ್ದಾರಿಯಲ್ಲಿ ಅಡ್ಡ ನಿಂತಿದ್ದು ಸರ್ವಿಸ್ ರಸ್ತೆಯ ಮೂಲಕ ವಾಹನಗಳು ತೆರಳಲು ವ್ಯವಸ್ಥೆ ಇದ್ದುದರಿಂದ ಯಾವುದೇ ರಸ್ತೆ ತಡೆ ಉಂಟಾಗಿರಲಿಲ್ಲ.

ಈ ಪ್ರದೇಶದಲ್ಲಿ ಹಲವಾರು ಅಪಘಾತಗಳು ಈ ತಡೆಬೇಲಿಗೆ ಸಂಭವಿಸಿರುವುದರಿಂದ ಇದೊಂದು ಅವೈಜ್ಞಾನಿಕ ರಸ್ತೆ ವಿಭಜಕ ವಾಗಿರುವುದರಿಂದಲೂ ಪರ್ಯಾಯ ವ್ಯವಸ್ಥೆ ಮಾಡಬೇಕಾದದ್ದು ಹೆದ್ದಾರಿ ಇಲಾಖೆಯ ಕರ್ತವ್ಯವಾಗಿದೆ. ಮುಂದೆ ನಡೆಯುವ ಅಪಘಾತಗಳಲ್ಲಿ ಪ್ರಾಣಹಾನಿ ಸಂಭವಿಸುವ ಮೊದಲೇ ಎಚ್ಚೆತ್ತುಕೊಂಡರೆ ಒಳಿತು ಎಂದು ನಾಗರಿಕರು ಅಭಿಪ್ರಾಯ ಪಡುತ್ತಿದ್ದರು.

ವಿಪರ್ಯಾಸವೆಂದರೆ, ಖಾಸಗಿ ಕಾಂಕ್ರೀಟ್ ರಸ್ತೆಯನ್ನು ಅವೈಜ್ಞಾನಿಕ ಎಂದು ಬಿಂಬಿಸಿ ನಾನು ಚರಂಡಿಯನ್ನು ನಿರ್ಮಿಸಿ ವೈಜ್ಞಾನಿಕ ಕಾಂಕ್ರೀಟ್ ರಸ್ತೆ ಮಾಡಿದ್ದೇನೆ ಎಂದು ತನ್ನ ಭಾವಚಿತ್ರವಿರುವ ಬ್ಯಾನರನ್ನು ಸತ್ತ ಬಾವಲಿ ವಿದ್ಯುತ್ ತಂತಿಯಲ್ಲಿ ನೇತಾಡುವ ಹಾಗೆ ತಾನೇ ನೇತಾಡಿಸಿ ಹೆಸರು ಗಿಟ್ಟಿಸಿಕೊಳ್ಳುವ ಮಾಣಿ ಗ್ರಾಮ ಪಂಚಾಯತ್ ಸದಸ್ಯ ಅಪಘಾತಗಳು ನಡೆಯುವ ಸಂದರ್ಭದಲ್ಲಿ ಎಲ್ಲಿ ಕಾಣೆಯಾಗಿದ್ದಾನೆ? ಸರ್ಕಾರಿ ಜಾಗದಲ್ಲಿ ಬಾಯಮ್ಮನ ಐಶಾರಾಮಿ ಬಂಗಲೆಯನ್ನು ನಿರ್ಮಿಸಲು ಹೋಗಿದ್ದಾನೆಯೇ? ಎಂದು ಗ್ರಾಮಸ್ಥರು ಪ್ರಶ್ನಿಸುತ್ತಿದ್ದಾರೆ.

You may also like

News

A New Vision of Care: Blessing and Commissioning of Advanced Radiography System at FMMCH

Father Muller Medical College Hospital marked a significant milestone in its commitment to patient-centered care with the blessing and commissioning
News

ದ್ವಿತೀಯ ಪಿಯುಸಿ ಫಲಿತಾಂಶ – ಮಂಗಳೂರಿನ ಸೈಂಟ್ ಆಗ್ನೇಸ್ ಕಾಲೇಜಿಗೆ ಶೇ. 98.05 ಯಶಸ್ಸು

ರಾಜ್ಯ ಮಟ್ಟದಲ್ಲಿ ಮಿಂಚಿದ ವಿದ್ಯಾರ್ಥಿನಿಯರನ್ನು ಅಭಿನಂದಿಸಿದ ಪ್ರಾಂಶುಪಾಲರಾದ ಭಗಿನಿ ನೊರಿನ್ ಡಿಸೋಜ 2025-26 ನೇ ಸಾಲಿನ ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಯಲ್ಲಿ ಮಂಗಳೂರು ನಗರದ ಪ್ರತಿಷ್ಠಿತ ಸೈಂಟ್

You cannot copy content of this page