ನೇರಳಕಟ್ಟೆ ಪ್ರಾಥಮಿಕ ಕೃಷಿಪತ್ತಿನ ಸಹಕಾರ ಸಂಘದ ಆಡಳಿತ ಮಂಡಳಿಯ ಅಧ್ಯಕ್ಷ, ಉಪಾಧ್ಯಕ್ಷರ ಆಯ್ಕೆ

ಅಭಿನಂದನೆಗಳನ್ನು ಸಲ್ಲಿಸಿದ ಬಿಜೆಪಿ ಶಕ್ತಿ ಕೇಂದ್ರ ಮಾಣಿ
ನೇರಳಕಟ್ಟೆ ಪ್ರಾಥಮಿಕ ಕೃಷಿಪತ್ತಿನ ಸಹಕಾರ ಸಂಘದ ಆಡಳಿತ ಮಂಡಳಿಗೆ ಮುಂದಿನ 5 ವರ್ಷದ ಅವಧಿಗೆ ಅಧ್ಯಕ್ಷರಾಗಿ ಸಂಘದ ನಿಕಟಪೂರ್ವ ಅಧ್ಯಕ್ಷ ಪುಷ್ಪರಾಜ್ ಚೌಟ ಬದಿಗುಡ್ಡೆ ಹಾಗೂ ಉಪಾಧ್ಯಕ್ಷರಾಗಿ ನಿಕಟಪೂರ್ವ ಉಪಾಧ್ಯಕ್ಷ ತನಿಯಪ್ಪ ಗೌಡ ದಾಸಕೋಡಿರವರು ಪುನರಾಯ್ಕೆಯಾಗಿದ್ದಾರೆ. ನಿರ್ದೇಶಕರಾಗಿ ನಾರಾಯಣ ಶೆಟ್ಟಿ ಮಾಣಿ, ರಾಘವ ಗೌಡ ಪೆರಾಜೆ, ಶ್ರೀನಿವಾಸ ಪೂಜಾರಿ ಪೆರಾಜೆ, ಸನತ್ ಕುಮಾರ್ ರೈ ಅನಂತಾಡಿ, ವೆಂಕಟೇಶ ಕೊಟ್ಯಾನ್ ಅನಂತಾಡಿ, ಸುಧಾಕರ ಪಿ. ಪೆರಾಜೆ, ಭಾರತಿ ಮಾಣಿ, ಅಶೋಕ್ ರೈ ನೆಟ್ಲಮುಡ್ನೂರು, ಶಕೀಲಾ ಕೃಷ್ಣ ಪೂಜಾರಿ ನೆಟ್ಲಮುಡ್ನೂರು, ಸಂಕಪ್ಪ ಜೆ. ಅನಂತಾಡಿ, ಕೆ. ಅರುಣ್ ಕುಮಾರ್ ಅನಂತಾಡಿ ಆಯ್ಕೆಯಾದರು.
ಈ ಸಂದರ್ಭದಲ್ಲಿ ನಿರ್ದೇಶಕರಿಗೆ ಪ್ರಮಾಣ ಪತ್ರವನ್ನು ವಿತರಿಸಲಾಯಿತು. ಚುನಾವಣೆ ಜನವರಿ 29ರಂದು ಸಂಘದ ವಠಾರದಲ್ಲಿ ನಡೆದಿದ್ದು ಬಿಜೆಪಿ ಬಂಬಲಿತ ಸಹಕಾರ ಭಾರತಿಯ 13 ಮಂದಿ ಅಭ್ಯರ್ಥಿಗಳು ವಿಜೇತರಾಗಿದ್ದರು. ಸಹಕಾರ ಸಂಘಗಳ ಉಪನಿಂಬಂಧಕರ ಕಚೇರಿಯ ಪ್ರಥಮ ದರ್ಜೆ ಸಹಾಯಕರಾದ ವಿಲಾಸ್ ರಿಟರ್ನಿಂಗ್ ಅಧಿಕಾರಿಯಾಗಿ ಆಗಮಿಸಿ ಆಯ್ಕೆ ಪ್ರಕ್ರೀಯೆ ನಡೆಸಿಕೊಟ್ಟರು. ಈ ಸಂಧರ್ಭದಲ್ಲಿ ಸಂಘದ ಮಾಜಿ ಅಧ್ಯಕ್ಷರು ಹಿರಿಯ ಸಹಕಾರಿಗಳಾದ ಬಿ.ಟಿ. ನಾರಾಯಣ ಭಟ್, ಸಹಕಾರ ಭಾರತೀಯ ಚೆನ್ನಪ್ಪ ಕೊಟ್ಯಾನ್, ಜಯರಾಮ ಶೆಟ್ಟಿ, ನಾರಾಯಣ ಶೆಟ್ಟಿ, ಮಾಧವ ಮಾವೆ, ಬಾಲಕೃಷ್ಣ ರೈ, ಪಾಂಡುರಂಗ ಕಾಮತ್ ಸದಸ್ಯರಾದ ರಾಮಚಂದ್ರ ಮೂಲ್ಯ, ಬೋಜನಾರಾಯಣ, ಗೋಪಾಲ ಕೆ., ರಾಮಣ್ಣ ಗೌಡ ಸೇರಿದಂತೆ ವಿವಿಧ ಗಣ್ಯರು ಉಪಸ್ಥಿತರಿದ್ದು ನೂತನ ಅಧ್ಯಕ್ಷ, ಉಪಾಧ್ಯಕ್ಷ ಹಾಗೂ ಎಲ್ಲಾ ನಿರ್ದೇಶಕರಿಗೆ ಅಭಿನಂದಿಸಿದರು.
ಬಳಿಕ ನಡೆದ ಸಭೆಯಲ್ಲಿ ಮಾಜಿ ಅಧ್ಯಕ್ಷರು ಹಿರಿಯ ಸಹಕಾರಿಗಳಾದ ಬಿ.ಟಿ. ನಾರಾಯಣ ಭಟ್‌ರವರು ಮಾತನಾಡಿ ಶತದಿನೋತ್ಸವವನ್ನು ಆಚರಿಸಿದ ಸಂಘವನ್ನು ಉತ್ತಮವಾಗಿ ಮುನ್ನಡೆಸಿ ಅಭಿವೃಧ್ಧಿ ಪಥದಲ್ಲಿ ಕೊಂಡೊಯ್ಯಬೇಕು. ಮುಂದಕ್ಕೆ ಸಂಘವನ್ನು ಉನ್ನತ ಪದವಿಗೆ ಕೊಂಡೊಯ್ಯಿರಿ ಎಂದು ಶುಭ ಹಾರೈಸಿದರು. ರಾಮಚಂದ್ರ ಮೂಲ್ಯ ಗಣೇಶ ನಗರ ರವರು ಮಾತನಾಡಿ ಹತ್ತಿರದಲ್ಲಿ ಸೇವೆ ಮಾಡುವ ಅವಕಾಶ ಸಹಕಾರ ಸಂಘದಲ್ಲಿ ಇದೆ. ಈ ಅವಕಾಶಗಳನ್ನು ರೈತರಿಗೆ ಮುಟ್ಟಿಸುವಲ್ಲಿ ಪ್ರಾಮಾಣಿಕ ಪ್ರಯತ್ನವನ್ನು ಮಾಡಬೇಕು ಆ ಮುಖಾಂತರ ಎಲ್ಲರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಮುನ್ನಡೆಯಬೇಕು ಆಗ ಮಾತ್ರ ಸಂಘದ ಅಭಿವೃಧ್ಧಿ ಸಾಧ್ಯ ಎಂದರು.
ಬಾರತೀಯ ಜನತಾ ಪಾರ್ಟಿಯ ಮಂಡಲ ಅದ್ಯಕ್ಷ ಚೆನ್ನಪ್ಪ ಕೊಟ್ಯಾನ್‌ರವರು ಮಾತನಾಡಿ ನೂತನ ಆಡಳಿತ ಮಂಡಳಿಯು ಮಾದರಿಯಾಗಿ ಆಡಳಿತ ನಡೆಸಿ ಸಹಕಾರ ಸಂಘವನ್ನು ಬೆಳೆಸಬೇಕು. ಗ್ರಾಮದ ಪ್ರತಿಯೋರ್ವರ ಏಳಿಗೆಗೆ ಶ್ರಮಿಸುವ ಕೆಲಸವಾಗಬೇಕು. ಆ ಮುಖಾಂತರ ರೈತರ ಹಿತ ಕಾಪಾಡಬೇಕು ಈ ವಿಚಾರದಲ್ಲಿ ಉತ್ತಮವಾಗಿ ಕೆಲಸ ನಿರ್ವಹಣೆ ಮಾಡುತ್ತಾರೆ ಎಂಬ ಭರವಸೆ ನನಗೆ ಇದೆ ಎಂದರು.
ಇದೇ ಸಂದರ್ಭದಲ್ಲಿ ಸಹಕಾರ ಸಂಘಗಳ ಉಪನಿಂಬಂಧಕರ ಕಚೇರಿಯ ಪ್ರಥಮ ದರ್ಜೆ ಸಹಾಯಕ ವಿಲಾಸ್ ರವರನ್ನು ಸನ್ಮಾನಿಸಲಾಯಿತು. ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಯಶೋಧ ಬಿ. ರವರು ಸ್ವಾಗತಿಸಿದರು. ಗುಮಾಸ್ತರಾದ ರವಿ ಎನ್. ಕಾರ್ಯಕ್ರಮ ನಿರೂಪಿಸಿದರು. ಸಿಬ್ಬಂದಿಗಳು ಸಹಕರಿಸಿದರು.
ನೂತನ ಅಧ್ಯಕ್ಷ, ಉಪಾಧ್ಯಕ್ಷ ಹಾಗೂ ಎಲ್ಲಾ ನಿರ್ದೇಶಕರಿಗೆ ಬಿಜೆಪಿ ಶಕ್ತಿ ಕೇಂದ್ರ ಮಾಣಿ ಇವರು ಅಭಿನಂದನೆಗಳನ್ನು ಸಲ್ಲಿಸಿದ್ದಾರೆ.