August 11, 2026
Karavali Suddi | Bilingual Kannada/English Weekly Newspaper | ಕರಾವಳಿ ಸುದ್ದಿ - ಅರವಿನತ್ತ ನಮ್ಮ ಚಿತ್ತ
Follow Us
News

ವಿವಿಧ ಕ್ಷೇತ್ರಗಳಲ್ಲಿ ಸಾಧನೆಗಳನ್ನು ಮಾಡಿರುವ ಗಣ್ಯರನ್ನು ಪರಿಗಣಿಸಿ ರಚನಾ ಪ್ರಶಸ್ತಿ 2023-25 ಕ್ಕೆ ಅರ್ಜಿ/ ನಾಮಪತ್ರ ಆಹ್ವಾನ

ರಚನಾ’ – ಕ್ಯಾಥೊಲಿಕ್ ಚೇಂಬರ್ ಆಫ್ ಕಾಮರ್ಸ್ ಆ್ಯಂಡ್ ಇಂಡಸ್ಟ್ರಿ, ಮಂಗಳೂರು ಮೂಲದ ವಿವಿಧೆಡೆಗಳಲ್ಲಿ ಹಬ್ಬಿಕೊಂಡಿರುವ ಕ್ಯಾಥೊಲಿಕ್ ಕ್ರೈಸ್ತ ಸಮುದಾಯದ, ತಂತಮ್ಮ ಕ್ಷೇತ್ರಗಳಲ್ಲಿ ವಿಶೇಷ ಸಾಧನೆಗಳನ್ನು ಮಾಡಿರುವ ಗಣ್ಯರನ್ನು ಪರಿಗಣಿಸಿ, ಆಯ್ದು ‘ರಚನಾ’ ಪ್ರಶಸ್ತಿಯನ್ನು ನೀಡುವ ಮೂಲಕ ಪುರಸ್ಕರಿಸುತ್ತಿದೆ. 2023-25ನೇ ಸಾಲಿನ ಈ ಕೆಳಗಿನ ಪ್ರಶಸ್ತಿಗಳಿಗಾಗಿ ನಾಮಪತ್ರಗಳನ್ನು ಆಹ್ವಾನಿಸಲಾಗಿದೆ.

  1. ರಚನಾ ಕೃಷಿಕ
  2. ರಚನಾ ವೃತ್ತಿಪರ (ವೈದ್ಯರು, ವಕೀಲರು, ಇಂಜಿನಿಯರ್ಸ್, ಚಾಟರ್ಡ್ ಎಕೌಂಟೆಂಟ್ಸ್)
  3. ರಚನಾ ಉದ್ಯಮಿ
  4. ರಚನಾ ಅನಿವಾಸಿ ಉದ್ಯಮಿ/ ವೃತ್ತಿಪರ
  5. ರಚನಾ ವಿಶೇಷ ಮಹಿಳಾ ಸಾಧಕಿ (ಉದ್ಯಮಿ, ವೃತ್ತಿಪರ, ಕೃಷಿಕ)

ಪ್ರಶಸ್ತಿಯು ಬಿರುದು, ಸನ್ಮಾನ ಪತ್ರ, ಸ್ಮಾರಕ, ಸಾರ್ವಜನಿಕ ಸನ್ಮಾನವನ್ನೊಳಗೊಂಡಿರುವುದು.

ಅರ್ಜಿ / ನಾಮಪತ್ರಗಳನ್ನು ಭಾವಚಿತ್ರದೊಂದಿಗೆ ಅಧ್ಯಕ್ಷರು, ರಚನಾ, ಮೊದಲ ಮಹಡಿ, ಪಿಯೊ ಮಾಲ್, ಜೈಲ್ ರಸ್ತೆ, ಮಂಗಳೂರು 575 004. ಇಮೇಯ್ಲ್: rachanamangalore@gmail.com ಈ ವಿಳಾಸಕ್ಕೆ ಮಾರ್ಚ್ 31 ಕ್ಕೂ ಮುಂಚಿತವಾಗಿ ತಲುಪುವಂತೆ ಕಳುಹಿಸಲು ಕೋರಲಾಗಿದೆ. 25 ಮಂದಿ ಜ್ಯೂರಿ ಸದಸ್ಯರ ತಂಡವು ನಾಮಪತ್ರ ಅರ್ಜಿಗಳನ್ನು ಸೂಕ್ತವಾಗಿ ಪರಿಶೀಲಿಸಿ ಪ್ರಶಸ್ತಿಗಳಿಗಾಗಿ ಯೋಗ್ಯ ವ್ಯಕ್ತಿಗಳನ್ನು ಆಯ್ಕೆ ಮಾಡುವರು.

ಪ್ರಶಸ್ತಿ ಪ್ರದಾನ ಕಾರ‍್ಯಕ್ರಮವು, 2025ರ ಅಕ್ಟೋಬರ್ 05, ಭಾನುವಾರದಂದು ಸಂಜೆ 6.00ಕ್ಕೆ ಮಿಲಾಗ್ರಿಸ್ ಜ್ಯುಬಿಲಿ ಸಭಾಭವನ ಮಂಗಳೂರು, ಇಲ್ಲಿ ಮಂಗಳೂರಿನ ಬಿಷಪ್ ಅತೀ ವಂದನೀಯ ಡಾ| ಪೀಟರ್ ಪಾವ್ಲ್ ಸಲ್ಡಾನ್ಹಾ ಇವರ ಅಧ್ಯಕ್ಷತೆಯಲ್ಲಿ ಹಾಗೂ ಇತರ ಪ್ರಮುಖ ಗಣ್ಯರ ಉಪಸ್ಥಿತಿಯಲ್ಲಿ ಅದ್ದೂರಿಯಾಗಿ ನಡೆಯಲಿರುವುದು.

‘ರಚನಾ ಪ್ರಶಸ್ತಿ’ ಬಗ್ಗೆ ಹೆಚ್ಚಿನ ವಿವರ ಹಾಗೂ ಮಾಹಿತಿಗಾಗಿ ಬೆಳಿಗ್ಗೆ 10 ರಿಂದ ಸಂಜೆ 4 ರವರೆಗೆ ರಚನಾ ಕಛೇರಿಯ ದೂರವಾಣಿ ಸಂಖ್ಯೆ: 83106 42093 / 99720 17484 ಸಂಪರ್ಕಿಸಲು ಕೋರಲಾಗಿದೆ.

ಜೊನ್ ಬಿ. ಮೊಂತೇರೊ ಅಧ್ಯಕ್ಷರು ರಚನಾ ಮಂಗಳೂರು

ವಿಜಯ್ ವಿ. ಲೋಬೊ ಕಾರ್ಯದರ್ಶಿ ರಚನಾ ಮಂಗಳೂರು

 

You may also like

News

ತ್ರಿಷಾ ಸಂಸ್ಥೆಯ 28ನೇ ಸಂಸ್ಥಾಪನಾ ದಿನಾಚರಣೆ ಸಂಭ್ರಮ

ತ್ರಿಷಾ ಗ್ರೂಪ್ ಆಫ್ ಇನ್ಸ್ಟಿಟ್ಯೂಷನ್ಸ್‌ನ 28ನೇ ಸಂಸ್ಥಾಪನಾ ದಿನಾಚರಣೆ ಬಲ್ಮಠದ ಡಾನ್ ಬಾಸ್ಕೊ ಸಭಾಂಗಣದಲ್ಲಿ ಸಂಭ್ರಮ ಹಾಗೂ ವೈಭವದಿಂದ ನಡೆಯಿತು. ಪ್ರಾರ್ಥನೆಯೊಂದಿಗೆ ಆರಂಭಗೊಂಡ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳ ಸ್ವಾಗತ
News

ಫಾದರ್ ಮುಲ್ಲರ್ ಆಸ್ಪತ್ರೆಯಲ್ಲಿ ‘ನರ್ಚರ್ 2026’ – ಮಕ್ಕಳ ರಾಷ್ಟ್ರೀಯ ವೈದ್ಯಕೀಯ ವಿಚಾರ ಸಂಕಿರಣ

ಫಾದರ್ ಮುಲ್ಲರ್ ಹೋಮಿಯೋಪಥಿಕ್ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆಯ ಮಕ್ಕಳ ಚಿಕಿತ್ಸಾ ವಿಭಾಗದ ವತಿಯಿಂದ ನರ್ಚರ್ 2026 – ಮಕ್ಕಳ ರಾಷ್ಟ್ರೀಯ ವಿಚಾರ ಸಂಕಿರಣ ಹಾಗೂ ಕಾರ್ಯಾಗಾರವನ್ನು

You cannot copy content of this page