ಪತ್ನಿಯನ್ನು ತುಂಡರಿಸಿ ಸೂಟ್ ಕೇಸ್ ಗೆ ತುಂಬಿದ ಪತಿ ರಾಕೇಶ್ – ಬೆಂಗಳೂರಿನಲ್ಲಿ ನಡೆದ ಹೃದಯ ವಿದ್ರಾವಕ ಘಟನೆ

ಪತಿಯೋರ್ವನು ತನ್ನ ಪತ್ನಿಯನ್ನು ತುಂಡರಿಸಿ ಸೂಟ್ ಕೇಸ್ ಗೆ ತುಂಬಿಸಿದ ಹೃದಯ ವಿದ್ರಾವಕ ಘಟನೆ ಹುಳಿಮಾವು ಸಮೀಪದ ದೊಡ್ಡಕಮ್ಮನ ಹಳ್ಳಿಯಲ್ಲಿ ನಡೆದಿದೆ. ಗೌರಿ ಹತ್ಯೆಗೀಡಾದ ಮಹಿಳೆ.
ಕೃತ್ಯ ಎಸಗಿದ ಬಳಿಕ ಪತಿ ರಾಕೇಶ್, ಮಹಾರಾಷ್ಟ್ರದಲ್ಲಿರುವ ಪತ್ನಿ ಗೌರಿ ಪೋಷಕರಿಗೆ ಫೋನ್ ಮಾಡಿ ವಿಷಯ ತಿಳಿಸಿದ್ದಾನೆ. ಗೌರಿ ಮನೆಯವರು ಮಹಾರಾಷ್ಟ್ರ ಪೊಲೀಸರಿಗೆ ಮಾಹಿತಿ ನೀಡಿ ಬೆಂಗಳೂರು ಪೊಲೀಸರಿಗೆ ವಿಷಯ ಹೇಳಿದ್ದಾರೆ.
ರಾಕೇಶ್ ಹಾಗೂ ಗೌರಿ ಅನಿಲ್ ಸಾಂಬೆಕರ್ ಮಧ್ಯೆ ಜಗಳವಾಗಿ ಪತ್ನಿಯನ್ನು ರಾಕೇಶ್ ತುಂಡು ತುಂಡಾಗಿ ಕತ್ತರಿಸಿದ್ದಾನೆ. ಹುಳುಮಾವು ಪೊಲೀಸರು ದೊಡ್ಡ ಕಮ್ಮನ ಹಳ್ಳಿಯ ಮನೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.