ವಿಶ್ವ ಆರೋಗ್ಯ ದಿನಾಚರಣೆ 2025 ಮತ್ತು ಹೋಮಿಯೋಪಥಿಕ್ ಸಪ್ತಾಹ ಉದ್ಘಾಟನೆ

ವಿಶ್ವ ಆರೋಗ್ಯ ದಿನಾಚರಣೆ 2025 ಹಾಗೂ ಹೋಮಿಯೋಪಥಿಕ್ ಸಪ್ತಾಹದ ಉದ್ಘಾಟನೆ ಫಾದರ್ ಮುಲ್ಲರ್ ಹೋಮಿಯೋಪಥಿಕ್ ಮೆಡಿಕಲ್ ಕಾಲೇಜಿನಲ್ಲಿ ಎಪ್ರಿಲ್ 07ರಂದು ಮದ್ಯಾಹ್ನ 3:30ಕ್ಕೆ ಕಾಲೇಜು ಸಭಾಂಗಣದಲ್ಲಿ ನೆರವೇರಿತು. ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಡಾ. ಮೊಹಮ್ಮದ್ ಇಕ್ಬಾಲ್, ಜಿಲ್ಲಾ ಆಯುಷ್ ಅಧಿಕಾರಿ ಉಪಸ್ಥಿತರಿದ್ದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ನಿಯೋಜಿತ ನಿರ್ದೇಶಕರು ಫಾದರ್ ಮುಲ್ಲರ್ ಚಾರಿಟೇಬಲ್ ಸಂಸ್ಥೆ ಹಾಗೂ ಫಾದರ್ ಮುಲ್ಲರ್ ಹೋಮಿಯೋಪಥಿ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆಯ ಆಡಳಿತಾಧಿಕಾರಿ ವಂದನೀಯ ಫಾದರ್ ಫೌಸ್ಟಿನ್ ಲೂಕಸ್ ಲೋಬೊ, ಡಾ. ಗಿರೀಶ್ ನಾವಡ ಯು.ಕೆ., ವೈದ್ಯಕೀಯ ಅಧೀಕ್ಷಕರು ಹಾಗೂ ಡಾ. ಜೆನಿಟಾ ಫೆರ್ನಾಂಡಿಸ್ 2025ರ ವಿಶ್ವ ಹೋಮಿಯೋಪಥಿ ದಿನದ ಸಂಚಾಲಕರೂ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಕಾರ್ಯಕ್ರಮವನ್ನು ಫಾದರ್ ಮುಲ್ಲರ್ ಹೋಮಿಯೋಪಥಿಕ್ ಮೆಡಿಕಲ್ ಕಾಲೇಜು ವಿದ್ಯಾರ್ಥಿಗಳ ಪ್ರಾರ್ಥನಾ ಗೀತೆಯೊಂದಿಗೆ ಪ್ರಾರಂಭಿಸಲಾಯಿತು. ಮುಖ್ಯ ಅತಿಥಿಯ ಪರಿಚಯದೊಂದಿಗೆ ಡಾ. ಗಿರೀಶ್ ನಾವಡ ಯು.ಕೆ.ರವರು ಸ್ವಾಗತ ಭಾಷಣವನ್ನು ಮಾಡಿದರು.
ವೇದಿಕೆಯ ಮೇಲೆ ಗಣ್ಯರು ದೀಪ ಬೆಳಗಿಸಿದ ನಂತರ, ಹೋಮಿಯೋಪಥಿ ಸಪ್ತಾಹದ ಉದ್ಘಾಟನೆ (07.04.2025 ರಿಂದ 12.04.2025) ಸಾಂಕೇತಿಕವಾಗಿ ಫಾದರ್ ಮುಲ್ಲರ್ ಹೋಮಿಯೋಪಥಿ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆಯ ಫಲಾನುಭವಿಗಳಿಗೆ ಈ ಕೆಳಗಿನ ರಿಯಾಯಿತಿಗಳನ್ನು ನೀಡುವ ಕರಪತ್ರಗಳನ್ನು ಬಿಡುಗಡೆ ಮಾಡುವ ಮೂಲಕ ನಡೆಸಲಾಯಿತು;
- ಹೊಸ ನೋಂದಣಿ ಮತ್ತು ಪುನಃ ಭೇಟಿ – 100% ರಿಯಾಯಿತಿ
- ಹೋಮಿಯೋಪಥಿಕ್ ಔಷಧಗಳು – 50% ರಿಯಾಯಿತಿ
- ರಕ್ತ ಪರೀಕ್ಷೆಗಳು (CBC, RBC, ESR) – 50% ರಿಯಾಯಿತಿ
- ಮೂತ್ರ ಪರೀಕ್ಷೆ – 50% ರಿಯಾಯಿತಿ
2025ರ WHO ನ “ಆರೋಗ್ಯಕರ ಆರಂಭ, ಆಶಾದಾಯಕ ಭವಿಷ್ಯ” ಎಂಬ ಧ್ಯೇಯವಾಕ್ಯವನ್ನು ಅನುಸರಿಸಿ, ಡಾ. ಮೊಹಮ್ಮದ್ ಇಕ್ಬಾಲ್ ತಮ್ಮ ಸಂದೇಶದಲ್ಲಿ ತಾಯಿ ಮತ್ತು ಮಕ್ಕಳ ಆರೈಕೆಯಲ್ಲಿ ಹೋಮಿಯೋಪಥಿಯ ವ್ಯಾಪ್ತಿಯನ್ನು ವಿವರಿಸಿದರು. ಹೋಮಿಯೋಪಥಿ ಔಷಧಿಗಳ ಪಾತ್ರವು ವಿಶೇಷವಾಗಿ ಕೋವಿಡ್ ಸಾಂಕ್ರಾಮಿಕ ಸಮಯದಲ್ಲಿ ಸಾವುನೋವುಗಳ ಸಂಖ್ಯೆಯನ್ನು ಕಡಿಮೆ ಮಾಡುವಲ್ಲಿ ಗಮನಾರ್ಹವಾಗಿದೆ ಎಂದು ಅವರು ಹೇಳಿದರು.
ಡಾ. ಇಕ್ಬಾಲ್ ಅವರಿಗೆ ವಂದನೀಯ ಫಾದರ್ ಫಾಸ್ಟಿನ್ ಲೂಕಸ್ ಲೋಬೊರವರು ಸ್ಮರಣಿಕೆ ನೀಡಿ ಸನ್ಮಾನಿಸಿದರು. ವಂದನೀಯ ಫಾದರ್ ಫಾಸ್ಟಿನ್ ಲೂಕಸ್ ಲೋಬೊ ಅವರು ವಿಶ್ವ ಆರೋಗ್ಯ ದಿನಾಚರಣೆಯ ಇತಿಹಾಸವನ್ನು ಸ್ಮರಿಸಿ, ವಿಶ್ವ ಆರೋಗ್ಯ ಸಂಸ್ಥೆಯು ಈ ಆಚರಣೆಯನ್ನು ಹೇಗೆ ಪ್ರಾರಂಭಿಸಿತು ಎಂಬುದನ್ನು ವಿವರಿಸಿದರು. ಅವರು ಅಪೌಷ್ಟಿಕತೆಯಿಂದ ಬಳಲುವವರ ಆರೈಕೆಯ ಅಗತ್ಯತೆ ಮತ್ತು ಉತ್ತಮ ಆರೋಗ್ಯದ ಮಹತ್ವದ ಬಗ್ಗೆ ತಮ್ಮ ಅಧ್ಯಕ್ಷೀಯ ಭಾಷಣದಲ್ಲಿ ವಿವರಿಸಿದರು.
ವಿಶ್ವ ಹೋಮಿಯೋಪಥಿ ದಿನ 2025ರ ಸಂಚಾಲಕಿ ಡಾ. ಜೆನಿಟಾ ಫೆರ್ನಾಂಡಿಸ್ ರವರು ಧನ್ಯವಾದಗಳನ್ನು ಮಂಡಿಸಿದರು. ಡಾ. ಶೆರ್ಲಿನ್ ಪಾಲ್ ಕಾರ್ಯಕ್ರಮವನ್ನು ನಿರೂಪಿಸಿದರು ಮತ್ತು ಸಾಂಸ್ಥಿಕ ಗೀತೆಯೊಂದಿಗೆ ಕಾರ್ಯಕ್ರಮವು ಮುಕ್ತಾಯವಾಯಿತು.