November 12, 2025
Karavali Suddi | Bilingual Kannada/English Weekly Newspaper | ಕರಾವಳಿ ಸುದ್ದಿ - ಅರವಿನತ್ತ ನಮ್ಮ ಚಿತ್ತ
Follow Us
News

ವಕೀಲರು, ನೋಟರಿ ವಿರುದ್ಧ ವಿಚಾರಣೆಗೆ ಸರಕಾರದ ಅನುಮತಿ ಅಗತ್ಯ – ಕರ್ನಾಟಕ ಹೈಕೋರ್ಟ್ ಮಹತ್ವದ ತೀರ್ಪು

ಯಾವುದೇ ಲೋಪದೋಷಕ್ಕಾಗಿ ವಕೀಲರು ಅಥವಾ ನೋಟರಿ ವಿರುದ್ಧ ಪ್ರಕರಣಗಳು ದಾಖಲಾಗಿದ್ದರೆ ಅವರನ್ನು ವಿಚಾರಣೆಗೆ ಒಳಪಡಿಸಲು ರಾಜ್ಯ ಅಥವಾ ಕೇಂದ್ರ ಸರ್ಕಾರದ ಅನುಮತಿ ಅಗತ್ಯ ಎಂದು ಕರ್ನಾಟಕ ಹೈಕೋರ್ಟ್ ಹೇಳಿದೆ. ಮಂಗಳೂರಿನ ಪ್ರವೀಣ್ ಕುಮಾರ್ ಅದ್ಯಪಾಡಿ ಮತ್ತು ಈಶ್ವರ ಪೂಜಾರಿ ಎಂಬ ಇಬ್ಬರು ನೋಟರಿಗಳ ವಿರುದ್ಧದ ಕ್ರಿಮಿನಲ್ ಮೊಕದ್ದಮೆಗಳನ್ನು ರದ್ದುಗೊಳಿಸಿ ಕರ್ನಾಟಕ ಹೈಕೋರ್ಟ್ ಈ ಮಹತ್ವದ ತೀರ್ಪು ನೀಡಿದೆ.

ಪೋಕ್ಸೊ ಪ್ರಕರಣವೊಂದರ ಆರೋಪಿಗೆ ಸಹಾಯ ಮಾಡುವ ಉದ್ದೇಶದಿಂದ ಸಂತ್ರಸ್ತೆಯ ವಯಸ್ಸನ್ನು ಕುಶಲತೆಯಿಂದ ತಿದ್ದಿದ ಮತ್ತು ಅದರ ಆಧಾರದಲ್ಲಿ ಪ್ರಮಾಣ ಪತ್ರದ ಮೂಲಕ ವಯಸ್ಸು ಘೋಷಿಸಿಕೊಂಡ ಮಹತ್ವದ ದಾಖಲೆಯನ್ನು ನೋಟರಿ ವಕೀಲರು ಮಾಡಿದ್ದರು ಎಂದು ಆರೋಪಿಸಲಾಗಿತ್ತು. ಪೋಕ್ಸೋ ಪ್ರಕರಣದ ಪ್ರಮುಖ ಆರೋಪಿಯು ಎರಡರಿಂದ ಏಳನೇ ಆರೋಪಿಗಳ ಜೊತೆ ಸೇರಿ ಸಂತ್ರಸ್ತೆಯ ವಯಸ್ಸನ್ನು 25-9-1999ರ ಬದಲಿಗೆ 25-9-2000 ಎಂದು ಬದಲಿಸಿದ್ದರು. ಈ ದಾಖಲೆಯನ್ನು ಪ್ರಕರಣದ ಎಂಟನೇ ಆರೋಪಿಯಾದ ನೋಟರಿ ವಕೀಲರು ತಯಾರಿಸಿದ್ದರು ಮತ್ತು ಅದರ ಆಧಾರದಲ್ಲಿ ಹತ್ತನೇ ಆರೋಪಿಯು ಘೋಷಣಾ ಅಫಿದಾವಿತ್ ತಯಾರಿಸಿದ್ದರು. ಆ ಬಳಿಕ ಮೊದಲನೇ ಆರೋಪಿಯು ಸಂತ್ರಸ್ತೆಯನ್ನು ಮಂಗಳೂರಿನ ಅರ್ಯ ಸಮಾಜದಲ್ಲಿ ಮದುವೆಯಾಗಿದ್ದರು. ಆರೋಪ ಪಟ್ಟಿ ಸಲ್ಲಿಕೆಯ ಮೊದಲೇ ಆರೋಪಿಗಳಾದ ನೋಟರಿ ವಕೀಲರು ತಮ್ಮ ಅಧಿಕಾರವನ್ನು ಬಳಸಿ ವಯಸ್ಸಿನ ವ್ಯತ್ಯಾಸವನ್ನು ಮಾಡಿದ್ದರು ಎಂದು ಆರೋಪಿಸಲಾಗಿತ್ತು.

ಆದರೆ, ಆರೋಪಿ ಪರ ವಾದ ಮಂಡಿಸಿದ ವಕೀಲರು, ನೋಟರಿ ಕಾಯ್ದೆ- 1952 ಸೆಕ್ಷನ್ 13ರ ಪ್ರಕಾರ ಆರೋಪಿಗಳ ವಿರುದ್ಧ FIR ದಾಖಲಿಸಿದ್ದು ತಪ್ಪು ಎಂದು ಅಭಿಪ್ರಾಯಪಟ್ಟರು. ಅಫಿದಾವಿತ್ ದಾಖಲೆಗೆ ಸಹಿ ಹಾಕಿದ್ದಕ್ಕಾಗಿ ನೋಟರಿಗಳ ವಿರುದ್ಧ ಐಪಿಸಿ, ಪೋಕ್ಸೊ ಕಾಯಿದೆ ಮತ್ತು ಬಾಲ್ಯ ವಿವಾಹ ತಡೆ ಕಾಯ್ದೆಯ ನಿಬಂಧನೆಗಳ ಅಡಿಯಲ್ಲಿ ಮಹಿಳಾ ಪೊಲೀಸ್ ಠಾಣೆಯಿಂದ ಆರೋಪ ಹೊರಿಸಲಾಗಿತ್ತು.

ನೋಟರಿ ಕಾಯ್ದೆಯ ಸೆಕ್ಷನ್ 13 ರ ಪ್ರಕಾರ, ವಕೀಲರು ಮತ್ತು ನೋಟರಿ ಮಾಡಿದ ಅಪರಾಧಗಳಿಗೆ ಕಾಗ್ನಿಸೆನ್ಸ್ ತೆಗೆದುಕೊಳ್ಳುವುದಕ್ಕೆ ನಿರ್ಬಂಧವಿದೆ. ನೋಟರಿ ಕಾಯ್ದೆಯಡಿ ತನಿಖಾಧಿಕಾರಿ ಕೇಂದ್ರ ಯಾ ರಾಜ್ಯ ಸರ್ಕಾರದ ಅನುಮತಿ ಪಡೆದ ನಂತರವೇ ವಕೀಲರ ವಿರುದ್ಧ ಕ್ರಮ ಜರುಗಿಸಬೇಕು. ಈ ಪ್ರಕರಣದಲ್ಲಿ ಪೊಲೀಸರು ಈ ಕ್ರಮವನ್ನು ಅನುಸರಿಸಿಲ್ಲ. ಹಾಗಾಗಿ, ನೋಟರಿ ವಕೀಲರ ವಿರುದ್ಧದ FIR ರದ್ದುಪಡಿಸವುಂತೆ ಕರ್ನಾಟಕ ಹೈಕೋರ್ಟ್ ಆದೇಶ ನೀಡಿತು.

You may also like

News

ನೂಜಿಬಾಳ್ತಿಲ ಗ್ರಾಮದ ಯುವಕ ಜುಬಿನ್ ಬೆಂಗಳೂರಿನಲ್ಲಿ ಆತ್ಮಹತ್ಯೆ

ಕಡಬ ನೂಜಿಬಾಳ್ತಿಲ ಗ್ರಾಮದ ಯುವಕ ಕಲ್ಲುಗುಡ್ಡೆ ನಿವಾಸಿ ಪ್ರಸ್ತುತ ಬೆಂಗಳೂರಿನಲ್ಲಿ ಉದ್ಯೋಗ ಮಾಡುತ್ತಿದ್ದ 25 ವರ್ಷ ಪ್ರಾಯದ ಜುಬಿನ್ ಎಂಬವರು ಬೆಂಗಳೂರಿನಲ್ಲಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ.  
News

ದಿಲ್ಲಿ ಸ್ಪೋಟ ಘಟನೆ ಹಿನ್ನೆಲೆಯಲ್ಲಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮುಂಜಾಗ್ರತಾ ಕ್ರಮ

ದಿಲ್ಲಿಯಲ್ಲಿ ನಡೆದ ಸ್ಪೋಟ ಘಟನೆಯ ಹಿನ್ನೆಲೆಯಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್ ವ್ಯಾಪ್ತಿಯಲ್ಲಿ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲಾಗಿದೆ. ಜಿಲ್ಲಾದ್ಯಂತ ರಾತ್ರಿ ವೇಳೆ ಪೊಲೀಸ್ ಅಧಿಕಾರಿಗಳು ಕಟ್ಟುನಿಟ್ಟಾದ ಗಸ್ತು

You cannot copy content of this page