ಸೂರಿಕುಮೇರುವಿನಲ್ಲಿರುವ ಸೈಂಟ್ ಜೋಸೆಫ್ ಚರ್ಚ್ ಗೆ ನೂತನ ಧರ್ಮಗುರುಗಳಾಗಿ ಫಾದರ್ ಪ್ಯಾಟ್ರಿಕ್ ಸಿಕ್ವೇರಾ ಅಧಿಕಾರ ಸ್ವೀಕಾರ
ಬಿಷಪ್ ಪ್ರತಿನಿಧಿಯಾಗಿ ಅತೀ ವಂದನೀಯ ಫಾದರ್ ಐವನ್ ಮೈಕಲ್ ರೊಡ್ರಿಗಸ್ ಉಪಸ್ಥಿತಿ









ಬಂಟ್ವಾಳ ತಾಲೂಕಿನ ಮಾಣಿ ಗ್ರಾಮದ ಸೂರಿಕುಮೇರುವಿನಲ್ಲಿರುವ ಸೈಂಟ್ ಜೋಸೆಫ್ ಧರ್ಮಕೇಂದ್ರಕ್ಕೆ 27ನೇ ನೂತನ ಪ್ರಧಾನ ಧರ್ಮಗುರುಗಳಾಗಿ ವಂದನೀಯ ಫಾದರ್ ಪ್ಯಾಟ್ರಿಕ್ ಸಿಕ್ವೇರಾರವರು ಇಂದು ಮೇ 25ರಂದು ಸಂಜೆ 4:00 ಗಂಟೆಗೆ ಬಿಷಪ್ ಪ್ರತಿನಿಧಿಯಾಗಿ ಆಗಮಿಸಿದ ವಿಟ್ಲ ವಲಯದ ಶ್ರೇಷ್ಠಗುರು ಅತೀ ವಂದನೀಯ ಫಾದರ್ ಐವನ್ ಮೈಕಲ್ ರೊಡ್ರಿಗಸ್ ರವರ ಉಪಸ್ಥಿತಿಯಲ್ಲಿ ಫಾದರ್ ನವೀನ್ ಪ್ರಕಾಶ್ ಡಿಸೋಜರವರಿಂದ ಅಧಿಕಾರ ಸ್ವೀಕರಿಸಿದರು. ಬಂಟ್ವಾಳದ ಮೊಡಂಕಾಪ್ ಧರ್ಮಕೇಂದ್ರದಲ್ಲಿ ಹುಟ್ಟಿ ಬೆಳೆದ ಇವರು 2012ನೇ ವರ್ಷದಲ್ಲಿ ಮಂಗಳೂರು ಧರ್ಮಕ್ಷೇತ್ರದ ಬಿಷಪ್ ಅತೀ ವಂದನೀಯ ಡಾ. ಎಲೋಶಿಯಸ್ ಪಾವ್ಲ್ ಡಿಸೋಜ ಇವರಿಂದ ಗುರುದೀಕ್ಷೆಯನ್ನು ಪಡೆದು ಬೋಂದೆಲ್, ಪಕ್ಷಿಕೆರೆ ಮತ್ತು ಕುಲಶೇಕರ ಧರ್ಮಕೇಂದ್ರಗಳಲ್ಲಿ ಸಹಾಯಕ ಧರ್ಮಗುರುಗಳಾಗಿ ಮತ್ತು ಬೆಳ್ಳೂರು ಧರ್ಮಕೇಂದ್ರದಲ್ಲಿ ಪ್ರಧಾನ ಧರ್ಮಗುರುಗಳಾಗಿ ಇದೀಗ ಸೂರಿಕುಮೇರು ಬೊರಿಮಾರ್ ಧರ್ಮಕೇಂದ್ರದ ಪ್ರಧಾನ ಧರ್ಮಗುರುಗಳಾಗಿ ಅಧಿಕಾರ ಸ್ವೀಕರಿಸಿದರು. ಚರ್ಚ್ ಪಾಲನಾ ಸಮಿತಿಯ ಉಪಾಧ್ಯಕ್ಷ ಸ್ಟೀವನ್ ಪ್ರಕಾಶ್ ಮಾರ್ಟಿಸ್ ಚರ್ಚ್ ದಸ್ತಾವೇಜುಗಳನ್ನು ನೂತನ ಧರ್ಮಗುರುಗಳಿಗೆ ಹಸ್ತಾಂತರಿಸಿದರು.










ಫಾದರ್ ನವೀನ್ ಪ್ರಕಾಶ್ ಡಿಸೋಜ, ಫಾದರ್ ವಿಕ್ಟರ್ ಡಾಯಾಸ್, ಸೂರಿಕುಮೇರು ಬೊರಿಮಾರ್ ಧರ್ಮಕೇಂದ್ರದ ಪಾಲನಾ ಸಮಿತಿಯ ಉಪಾಧ್ಯಕ್ಷ ಸ್ಟೀವನ್ ಪ್ರಕಾಶ್ ಮಾರ್ಟಿಸ್, ಕಾರ್ಯದರ್ಶಿ ಸ್ಟೀವನ್ ಆಲ್ವಿನ್ ಪಾಯ್ಸ್, ಆಯೋಗಗಳ ಸಂಯೋಜಕ ಎಲಿಯಾಸ್ ಪಿರೇರಾ ಹಾಗೂ ಕಥೊಲಿಕ್ ಸಭಾ ಸೂರಿಕುಮೇರು ಬೊರಿಮಾರ್ ಘಟಕದ ಅಧ್ಯಕ್ಷ ತೊಮಸ್ ಲಸ್ರಾದೊ ಹೂವಿನ ಹಾರ ಹಾಕಿ ನೂತನ ಧರ್ಮಗುರುಗಳನ್ನು ಚರ್ಚ್ ಪ್ರವೇಶ ದ್ವಾರದಲ್ಲಿ ಸ್ವಾಗತಿಸಿದರು.











ಈ ಶುಭ ಸಂದರ್ಭದಲ್ಲಿ ವಿವಿಧ ವಲಯಗಳ ಧರ್ಮಗುರುಗಳು, ಧರ್ಮಭಗಿನಿಯರು, ಬೆಳ್ಳೂರು ಹಾಗೂ ಸೂರಿಕುಮೇರು ಬೊರಿಮಾರ್ ಧರ್ಮಕೇಂದ್ರಗಳ ಭಕ್ತಾಧಿಗಳು ಹಾಜರಿದ್ದರು.




