ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನಡೆಯುತ್ತಿರುವ ದ್ವೇಷದ ಕೊಲೆಗೆ ಸೂಕ್ತ ಕ್ರಮಕೈಗೊಳ್ಳುವಂತೆ ಮುಖ್ಯಮಂತ್ರಿಗಳಿಗೆ ಒತ್ತಾಯ ಮಾಡಿದ MLC ಐವನ್ ಡಿಸೋಜ
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನಡೆಯುತ್ತಿರುವ ದ್ವೇಷದ ಕೊಲೆಗೆ ಸೂಕ್ತ ಕ್ರಮಕೈಗೊಂಡು ಕೊಲೆಯ ಹಿಂದಿರುವ ಶಕ್ತಿಗಳನ್ನು ಪತ್ತೆ ಹಚ್ಚಿ ಸೂಕ್ತ ಕ್ರಮಕೈಗೊಳ್ಳುವಂತೆ ಒತ್ತಾಯಿಸಲು ಇಂದು ಮೇ 28ರಂದು ಮುಖ್ಯಮಂತ್ರಿಗಳಾದ ಸನ್ಮಾನ್ಯ ಸಿದ್ಧರಾಮಯ್ಯರವರನ್ನು ವಿಧಾನ ಪರಿಷತ್ತಿನ ಶಾಸಕ ಐವನ್ ಡಿಸೋಜರವರು ಭೇಟಿ ಮಾಡಿದರು.

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನಿನ್ನೆ ಮೇ 27ರಂದು ಮಂಗಳವಾರ ಬಂಟ್ವಾಳದಲ್ಲಿ ನಡೆದ ಅಮಾಯಕ ಪಿಕ್‌ಅಪ್ ವಾಹನ ಚಾಲಕ ಅಬ್ದುಲ್ ರಹೀಂ ನ್ನು ಕೊಲೆ ಮಾಡಲು ಹಿಂದೆ ಇರುವ ಶಕ್ತಿಗಳ ಬಗ್ಗೆ ತನಿಖೆ ನಡೆಸಿ, ಅವರ ಮೇಲೆ ಸೂಕ್ತ ಕ್ರಮಕೈಗೊಂಡು ದ್ವೇಷದ ಭಾಷಣ ಮತ್ತು ಪ್ರಚೋದನೆ ನೀಡುತ್ತಿರುವ ಬಗ್ಗೆ ಕ್ರಮ ಕೈಗೊಳ್ಳದೇ ಇದ್ದಲ್ಲಿ ಇಂತಹ ಪ್ರಕರಣಗಳ ಮರುಕಳಿಸುವುದನ್ನು ಮಟ್ಟ ಹಾಕಲು ಸಾಧ್ಯವಾಗುವುದಿಲ್ಲ. ಈ ಬಗ್ಗೆ ಆಳವಾಗಿ ತನಿಖೆ ನಡೆಯುವುದು ಅಗತ್ಯವಿದೆ ಸೂಕ್ತ ಕ್ರಮಕೈಗೊಳ್ಳಬೇಕೆಂದು ಮಾನ್ಯ ಮುಖ್ಯಮಂತ್ರಿರವರನ್ನು ಭೇಟಿ ಮಾಡಿ, ಇತ್ತೀಚಿನ ಬೆಳವಣಿಗೆ ಮತ್ತು ಕೋಮು ದ್ವೇಷದ ಭಾಷಣದ ಬಗ್ಗೆ ಜಿಲ್ಲಾ ಬಂದ್ ಮತ್ತಿತರ ಅಕ್ರಮ ಚಟುವಟಿಕೆಗಳ ಬಗ್ಗೆ ಮಾನ್ಯ ಮುಖ್ಯಮಂತ್ರಿರವರ ಗಮನಕ್ಕೆ ತಂದು, ಈ ಬಗ್ಗೆ ಸೂಕ್ತ ಕ್ರಮಕೈಗೊಳ್ಳುವುದಾಗಿ ಮಾನ್ಯ ಮುಖ್ಯಮಂತ್ರಿಗಳು ಭರವಸೆ ನೀಡಿದರು.

ಪೊಲೀಸ್ ಇಲಾಖೆಯ ವೈಫಲ್ಯ ಇದರಲ್ಲಿ ಸೇರಿಕೊಂಡಿರುವುದಾಗಿ ಜನಾಭಿಪ್ರಾಯವಾಗಿದ್ದು, ಈ ಬಗ್ಗೆಯು ಕ್ರಮಕೈಗೊಳ್ಳುವುದು ಅಗತ್ಯವಿದೆ ಎಂದು ವಿಧಾನ ಪರಿಷತ್ತಿನ ಶಾಸಕ ಐವನ್ ಡಿಸೋಜರವರು ಮಾನ್ಯ ಮುಖ್ಯಮಂತ್ರಿಯವರ ಗಮನಕ್ಕೆ ತಂದಿದ್ದಾರೆ. ಈ ಸಂದರ್ಭದಲ್ಲಿ ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿಗಳಾದ ನಸೀರ್ ಅಹಮದ್ ಮತ್ತು ಗೋವಿಂದರಾಜ್ ಉಪಸ್ಥಿತರಿದ್ದರು. ಮಾನ್ಯ ಮುಖ್ಯಮಂತ್ರಿಗಳು ಮಾನ್ಯ ಗೃಹ ಸಚಿವರ ಮತ್ತು ಪೊಲೀಸ್ ಮಹಾನಿರ್ದೇಶಕರು ಮತ್ತು ಮಹಾನಿರೀಕ್ಷಕರು ಎಂ.ಎ. ಸಲೀಂರವರಿಗೆ ಸೂಕ್ತ ನಿರ್ದೇಶನ ನೀಡಿದರು.




