ವೇಣೂರು ಚರ್ಚ್ ನಲ್ಲಿ ಪ್ರತಿಭಾನ್ವಿತ ಬಾಲಕಿ ನಿಶೆಲ್ ರವರಿಗೆ ಸನ್ಮಾನ
ಮುಂದಿನ ವಿದ್ಯಾಭ್ಯಾಸಕ್ಕೆ ಶುಭ ಹಾರೈಸಿದ ಫಾದರ್ ಎಡ್ವಿನ್ ಮೊನಿಸ್



ವೇಣೂರು ಕ್ರೈಸ್ಟ್ ದಿ ಕಿಂಗ್ ಚರ್ಚ್ ಸದಸ್ಯೆ ನಿಶೆಲ್ ಫೆರ್ನಾಂಡಿಸ್ ಅವರನ್ನು ಪಿ.ಯು.ಸಿ. ಪರೀಕ್ಷೆಯಲ್ಲಿ ಅತ್ಯಧಿಕ ಅಂಕ ಗಳಿಸಿದ ಪ್ರಯುಕ್ತ ಕಥೊಲಿಕ್ ಸಭಾ ವತಿಯಿಂದ ಸನ್ಮಾನಿಸಲಾಯಿತು. ಚರ್ಚ್ ನ ಪ್ರಧಾನ ಧರ್ಮಗುರು ವಂದನೀಯ ಫಾದರ್ ಎಡ್ವಿನ್ ಸಂತೋಷ್ ಮೊನಿಸ್ ಅವರು ಮಾತನಾಡಿ ನಿಶೆಲ್ ಅವರು ಬಹುಮುಖ ಪ್ರತಿಭೆ ಹೊಂದಿದ್ದು, ಪಿಯುಸಿಯಲ್ಲಿ ಅತ್ಯಧಿಕ ಅಂಕಗಳಿಸುವ ಮೂಲಕ ನಮ್ಮ ಧರ್ಮಕೇಂದ್ರಕ್ಕೆ ಗೌರವ ತಂದು ಕೊಟ್ಟಿದ್ದಾರೆ ಎಂದು ಶ್ಲಾಘಿಸಿ ಆಕೆಯನ್ನು ಮತ್ತು ಅಕೆಯ ಹೆತ್ತವರನ್ನು ಆಭಿನಂದಿಸಿ ನಿಶೆಲ್ ರವರ ಮುಂದಿನ ವಿದ್ಯಾಭ್ಯಾಸಕ್ಕೆ ಶುಭ ಹಾರೈಸಿದರು.



ಸಮಾರಂಭದಲ್ಲಿ ವಂದನೀಯ ಫಾದರ್ ಲಾಯ್‌ಸ್ಟನ್ ಕೊರ್ಡೇರೊ, ಚರ್ಚ್ ಪಾಲನಾ ಸಮಿತಿಯ ಉಪಾಧ್ಯಕ್ಷ ಡೆನ್ನಿಸ್ ಸಿಕ್ವೇರಾ, ಕಾರ್ಯದರ್ಶಿ ಜೆತ್ರುದ್ ಡಿಸೋಜ, ಕಥೊಲಿಕ್ ಸಭಾ ವೇಣೂರು ಘಟಕದ ಅಧ್ಯಕ್ಷ ಅರುಣ್ ಡಿಸೋಜ, ಕಾರ್ಯದರ್ಶಿ ಗ್ರೇಸಿ ನೊರೊನ್ಹಾ ಅವರು ಜೊತೆಗೂಡಿ ಫಲ-ಪುಷ್ಪ ನೀಡಿ ಶಾಲು ಹೊದಿಸಿ ನಿಶೆಲ್ ರವರನ್ನು ಸನ್ಮಾನಿಸಿದರು. ಕಥೊಲಿಕ್ ಸಭಾ ಮಾಜಿ ಕೇಂದ್ರೀಯ ಅಧ್ಯಕ್ಷ ಎಲ್.ಜೆ. ಫೆರ್ನಾಂಡಿಸ್ ಮತ್ತಿತರರು ಉಪಸ್ಥಿತರಿದ್ದರು. ನಿಶೆಲ್ ರವರು ಚರ್ಚ್ ಗಾಯನ ಮಂಡಳಿಯಲ್ಲಿ ಕೀ ಬೋರ್ಡ್ ನುಡಿಸಿ ಸಹಕರಿಸುತ್ತಿದ್ದಾರೆ. ಅವರು ಚರ್ಚ್ ಗಾಯನ ಮಂಡಳಿಯ ಮುಖ್ಯಸ್ಥ ಆಲ್ವಿನ್ ಫೆರ್ನಾಂಡಿಸ್ ಮತ್ತು ಅನಿತಾ ಡಾಯಸ್ ಅವರ ಪುತ್ರಿ.




