ಕುಳೂರು ಚರ್ಚ್ ನ ಕಥೊಲಿಕ್ ಸಭಾ ಮತ್ತು ICYM ಸಂಘಟನೆಯ ವತಿಯಿಂದ ‘ಗದ್ದೆಯಲ್ಲಿ ಒಂದು ದಿನ’ ಸಂಭ್ರಮ
ಕುಳೂರಿನಲ್ಲಿರುವ ಸಂತ ಆಂತೋನಿ ಚರ್ಚ್ ನ ಕಥೊಲಿಕ್ ಸಭಾ ಹಾಗೂ ICYM ಸಂಘಟನೆಯ ವತಿಯಿಂದ ಕುಳೂರಿನ ಮೇಲ್ ಕೊಪ್ಪಲದಲ್ಲಿ ಆಯೋಜಿಸಿದ ‘ಗದ್ದೆಯಲ್ಲಿ ಒಂದು ದಿನ’ ಕಾರ್‍ಯಕ್ರಮವು ಜೂನ್ 22 ರಂದು ಆದಿತ್ಯವಾರ ಬಹಳ ಸಂಭ್ರಮದಿಂದ ಆಚರಿಸಲಾಯಿತು.








ಚರ್ಚ್ ಪ್ರಧಾನ ಧರ್ಮಗುರುಗಳಾದ ವಂದನೀಯ ಫಾದರ್ ವಿಕ್ಟರ್ ವಿಜಯ್ ಲೋಬೊ ಕಾರ್ಯಕ್ರಮದ ಅಧ್ಯಕ್ಷ ಸ್ಥಾನವನ್ನು ವಹಿಸಿಕೊಂಡಿದ್ದರು. ಮುಖ್ಯ ಅತಿಥಿಗಳಾಗಿ ಎಪಿಸ್ಕೋಪಲ್ ಸಿಟಿ ವಲಯದ ಕಥೊಲಿಕ್ ಸಭಾ ಅಧ್ಯಕ್ಷೆ ಐಡಾ ಫುರ್ಟಾಡೊ, ICYM ಕೇಂದ್ರೀಯ ಅಧ್ಯಕ್ಷ ವಿನ್ ಸ್ಟನ್ ಜೋಯೆಲ್ ಸಿಕ್ವೇರಾ ಹಾಗೂ ತೀರ್ಪುಗಾರರಾದ ಪ್ರವೀಣ್ ಲೋಬೊ ಬಿಜೈ ಹಾಜರಿದ್ದು ಸಾಂಕೇತಿಕವಾಗಿ ನಾಟಿ ನೆಡುವುದರ ಮೂಲಕ ಕಾರ್‍ಯಕ್ರಮವನ್ನು ಉದ್ಘಾಟಿಸಿದರು.



















ಚರ್ಚ್ ಭಕ್ತಾಧಿಗಳಿಗೆ ಕೆಸರು ಗದ್ದೆಯಲ್ಲಿ ವಾಳೆಗಳ ನಡುವೆ ವಿವಿಧ ಸ್ಪರ್ಧೆಗಳನ್ನು ಏರ್ಪಡಿಸಲಾಗಿತ್ತು. ಈ ಸ್ಪರ್ಧಾಕೂಟದಲ್ಲಿ ಮೊದಲನೆಯ ಬಹುಮಾನವನ್ನು ಸಂತ ಅನ್ನ ವಾಳೆ, ಎರಡನೇ ಬಹುಮಾನ ಸಂತ ಆಂತೋನಿ ಮೂರನೆ ವಾಳೆ ಹಾಗೂ ಮೂರನೇ ಬಹುಮಾನ ಸಂತ ಜೋಸೆಫ್ ವಾಳೆಯವರು ಪಡೆದುಕೊಂಡರು.




























ಕಥೊಲಿಕ್ ಸಭಾ ಕುಳೂರು ಘಟಕದ ಅಧ್ಯಕ್ಷ ರೋವಿನ್ ಡಿಸೋಜ ಸ್ವಾಗತಿಸಿದರು. ICYM ಅಧ್ಯಕ್ಷ ಅರ್ವಿನ್ ಮೊಂತೇರೊ ಧನ್ಯವಾದಗಳನ್ನು ಅರ್ಪಿಸಿದರು. ರೀಮಾ ಕ್ರಾಸ್ತಾರವರು ಕಾರ್‍ಯಕ್ರಮವನ್ನು ನಿರೂಪಿಸಿದರು. ಎಲ್ಲರಿಗೂ ಭೋಜನದ ವ್ಯವಸ್ಥೆಯನ್ನು ಮಾಡಲಾಗಿತ್ತು. ಸುಮಾರು 600ಕ್ಕಿಂತಲೂ ಹೆಚ್ಚು ಭಕ್ತಾಧಿಗಳು ಸ್ಪರ್ಧೆಗಳಲ್ಲಿ ಭಾಗವಹಿಸಿದ್ದರು.




