ಒಡಹುಟ್ಟಿದವನಿಗೆ ವಿಶ್ವಾಸದ್ರೋಹಗೈದ ಆರೋಪಿ ಬೆನೆಡಿಕ್ಟ್ ಲಸ್ರಾದೊ ಮತ್ತು ಸಹೋದರನಿಗೆ ಷರತ್ತು ಬದ್ದ ಜಾಮೀನು
FIR ಆದ 27 ದಿವಸಗಳ ಬಳಿಕ ಜಾಮೀನು ಮಂಜೂರು ಮಾಡಿದ ಜಿಲ್ಲಾ ಸತ್ರ ನ್ಯಾಯಾಲಯ

ಬಂಟ್ವಾಳ ತಾಲೂಕು ಬರಿಮಾರು ಗ್ರಾಮದ ಪುರುಷಕೋಡಿ ನಿವಾಸಿ ವಲೇರಿಯನ್ ಲಸ್ರಾದೊ ಇವರ ಆಸ್ತಿ ಕಬಳಿಕೆ ಉದ್ದೇಶವನ್ನಿಟ್ಟುಕೊಂಡು, ವೀಲುನಾಮೆ ಯಾನೆ ಮರಣ ಶಾಸನ ದಾಖಲೆಯನ್ನು ಸೃಷ್ಟಿಸಿ ವಂಚನೆ, ವಿಶ್ವಾಸದ್ರೋಹ, ಪ್ರಾಣ ಬೆದರಿಕೆ ಹಾಗೂ ಸುಲಿಗೆ ಮಾಡಿದ್ದಾರೆ ಎನ್ನಲಾದ ಅವರ ಅಣ್ಣಂದಿರಾದ 61 ವರ್ಷ ಪ್ರಾಯದ ಬೆನೆಡಿಕ್ಟ್ ಲಸ್ರಾದೊ ಮತ್ತು 63 ವರ್ಷ ಪ್ರಾಯದ ಫ್ರೆಡ್ರಿಕ್ ಲಸ್ರಾದೊ ಆರೋಪಿಗಳಿಗೆ ಜಿಲ್ಲಾ ಸತ್ರ ನ್ಯಾಯಾಲಯವು FIR ಆದ 27 ದಿವಸಗಳ ಬಳಿಕ ಷರತ್ತುಗಳಿಗೆ ಒಳಪಟ್ಟು ನಿರೀಕ್ಷಣಾ ಜಾಮೀನು ಮಂಜೂರು ಮಾಡಿದೆ.

ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಜೂನ್ 6ರಂದು ವಲೇರಿಯನ್ ಲಸ್ರಾದೊರವರು ತನ್ನ ಒಡ ಹುಟ್ಟಿದ ಸಹೋದರರ ಮೇಲೆ ಲಿಖಿತ ದೂರು ಸಲ್ಲಿಸಿದ್ದರು. ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣಾಧಿಕಾರಿಯವರು ಅಪರಾಧ ಸಂಖ್ಯೆ BNS 64/2025 ರಂತೆ FIR ದಾಖಲಿಸಿದ್ದರು.




