ಕೆ.ಪಿ. ಸುಲೈಮಾನ್ ಹಾಜಿ ಕನ್ಯಾನ, ಹ್ಯಾಪಿ ಸ್ಟಾರ್ ಗ್ರೂಪ್ ಇವರ ವತಿಯಿಂದ ಸಾಮೂಹಿಕ ವಿವಾಹ
ಕೆ.ಪಿ. ಸುಲೈಮಾನ್ ಹಾಜಿ ಕನ್ಯಾನ (ಅಬುದಾಬಿ), ಹ್ಯಾಪಿ ಸ್ಟಾರ್ ಗ್ರೂಪ್ ಇವರ ವತಿಯಿಂದ ಜುಲಾಯ್ 13ರಂದು ಆದಿತ್ಯವಾರ ಮಂಗಳೂರಿನ ಫಾದರ್ ಮುಲ್ಲರ್ ಕನ್ವೆನ್ಷನ್ ಸೆಂಟರ್ ಹಾಲ್ ನಲ್ಲಿ ನಡೆಯಲಿರುವ ಕೆ.ಪಿ. ಸುಲೈಮಾನ್ ಹಾಜಿ ಕನ್ಯಾನರವರ ಸುಪುತ್ರ ಫೈಝಲ್ ರವರ ಮದುವೆಯ ಪ್ರಯುಕ್ತ ಆರು ಜೋಡಿಗಳ ಸಾಮೂಹಿಕ ವಿವಾಹ ಸಮಾರಂಭವು ಜುಲಾಯ್ 10ರಂದು ಗುರುವಾರ ನೇರಳಕಟ್ಟೆ ಜನಪ್ರಿಯ ಗಾರ್ಡನ್ ನಲ್ಲಿ ನಡೆಯಿತು.


ಕೆ.ಪಿ. ಸುಲೈಮಾನ್ ಹಾಜಿ ಕನ್ಯಾನ ಅವರ ನೇತೃತ್ವದಲ್ಲಿ ನಡೆದ ನಿಖಾಹ್ ಕಾರ್ಯಕ್ರಮದಲ್ಲಿ ಸುರಿಬೈಲ್ ದಾರುಲ್ ಅಶ್ ಅರಿಯಾ ಮೆನೇಜರ್ ಮಹಮ್ಮದಾಲಿ ಸಖಾಫಿ ಖುತುಬಾ ನೆರವೇರಿಸಿದರು. ದುವಾಃ ನೆರವೇರಿಸಿದ ಬಹುಃ ಸೈಯ್ಯದ್ ಅಬ್ದುರಹ್ಮಾನ್ ಮಸ್ ಊದ್ ಅಲ್ ಬುಖಾರಿ ಕೂರತ್ ತಂಙಳ್ ರವರು ಕೆ.ಪಿ. ಸುಲೈಮಾನ್ ಹಾಜಿ ಕನ್ಯಾನರವರ ಈ ಪುಣ್ಯ ಕಾರ್ಯಕ್ರಮದ ಬಗ್ಗೆ ವ್ಯಾಪಕ ಮೆಚ್ಚುಗೆ ವ್ಯಕ್ತಪಡಿಸಿದರು.



ಕಡಂಬು ಜುಮಾ ಮಸೀದಿಯ ಖತೀಬ್ ಅಬ್ದುರ್ರಹ್ಮಾನ್ ಸಅದಿ ಉಪಸ್ಥಿತರಿದ್ದರು. ವಿವಿಧ ಮಸೀದಿಗಳ ಉಸ್ತಾದರು ನಿಖಾಹ್ ನೇರವೇರಿಸಿ ಕೊಟ್ಟರು. ಕೊಡಂಗಾಯಿ ಕಡಂಬುವಿನ ರಹಮತ್ ಅವರು ಸಾಲೆತ್ತೂರು ತಿರುಮಜೆಯ ಶರೀಫ್ ರೊಂದಿಗೆ, ಕೆದಿಲ ಬೀಟಿಗೆಯ ಫಾತಿಮತ್ ಫರ್ಝಾನರವರು ಚಿಕ್ಕಮಗಳೂರು ಟಿಪ್ಪು ನಗರದ ಇಮ್ರಾನ್ ಜೊತೆಗೆ, ಇಳಂತಿಲ ಅಂಡೆತ್ತಡ್ಕದ ಫಾತಿಮಾ ಸುಳ್ಯ ಜಟ್ಟಿಪಳ್ಳದ ಅಬ್ದುಲ್ ರಮ್ಸಾದ್ ಎಂಬ ವರನೊಂದಿಗೆ, ಮಿತ್ತಬಾಗಿಲು ಪೇರಾಡಿಯ ಸಂಬ್ರೀನಾ ಬೆಳ್ತಂಗಡಿ ನೆರಿಯದ ಆರಿಫ್ ಜೊತೆಗೆ, ಪೆರುವಾಯಿ ಮುಚ್ಚಿರಪದವಿನ ಫಾತಿಮತ್ ಶಹನಾಝ್ ಪಾವೂರು ಅಕ್ಕರ ನಗರದ ಮುಹಮ್ಮದ್ ಹರ್ಶದ್ ಜೊತೆಗೆ, ವಿಟ್ಲ ಕಡಂಬುವಿನ ರಂಸೀನಾ ಎಂಬಾಕೆಯು ವಿಟ್ಲ ಮೇಗಿನಪೇಟೆಯ ಇಲ್ಯಾಸ್ ಎಂಬ ವರನೊಂದಿಗೆ ದಾಂಪತ್ಯ ಜೀವನಕ್ಕೆ ಕಾಲಿಟ್ಟರು.


ಕೆ.ಪಿ. ಸುಲೈಮಾನ್ ಹಾಜಿ ಕನ್ಯಾನರವರ ಸುಪುತ್ರ ಫೈಝಲ್, ಪ್ರಮುಖರಾದ ಬಿ. ಮಹಮ್ಮದ್ ಕುಂಞಿ ವಿಟ್ಲ, ಅಝೀಝ್ ಬೈಕಂಪಾಡಿ, ಬಿ.ಎ. ಶಕೂರ್ ಹಾಜಿ ಕಲ್ಲೇಗ, ಆಶ್ರಫ್ ಕಡಂಬು, ಉಬೈದುಲ್ಲಾ ಕಡಂಬು, ಜಬ್ಬಾರ್ ಪೆರ್ನೆ, ಶಕೀಲ್ ಉಡುಪಿ, ಇಮ್ತಿಯಾಝ್ ಬಂಟ್ವಾಳ, ಉಮ್ಮರ್ ಕನ್ಯಾನ, ಟಿ.ಎಚ್.ಎಂ.ಎ. ಹಮೀದ್ ಉಕ್ಕುಡ, ಹನೀಫ್ ಹಾಜಿ ಉದಯ ಕಲ್ಲೇಗ, ಎಂ.ಎಸ್. ಮುಹಮ್ಮದ್, ಬಶೀರ್ ಹಾಜಿ ಕಬಕ, ಇಬ್ರಾಹಿಂ ಬಾವ, ಮುಹಮ್ಮದ್ ಇಕ್ಬಾಲ್, ವಿ.ಎ. ರಶೀದ್ ವಿಟ್ಲ, ಶಾಫಿ ಕಡಂಬು, ನಿಸಾರ್ ಕಡಂಬು, ನಶ್ವಿ ಕಡಂಬು ಹಾಗೂ ವಿ.ಕೆ. ಇಸ್ಮಾಯಿಲ್ ಹಾಜಿ ಬದ್ರಿಯಾ ಮೊದಲಾದವರು ಉಪಸ್ಥಿತರಿದ್ದರು. ಹಮೀದ್ ಗೋಳ್ತಮಜಲು ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು.




