ತಲವಾರು ತೋರಿಸಿ ಬೆದರಿಕೆ – ಪ್ರಕರಣ ದಾಖಲು
ಪ್ರಸ್ತುತ ಬಂಟ್ವಾಳದಲ್ಲಿ ವಾಸಿಸುವ ಆದರೆ ಮೂಲತಃ ಹಾಸನದ 45 ವರ್ಷ ಪ್ರಾಯದ ರಾಜು ಎಂಬಾತನು ಜುಲಾಯ್ 14ರಂದು ಮಧ್ಯಾಹ್ನ ಸಾರ್ವಜನಿಕರಿಗೆ ತಲವಾರು ತೋರಿಸಿ, ಬೆದರಿಸುತ್ತಿರುವುದರಿಂದ ಪುತ್ತೂರಿನ ಬೊಳುವಾರು ಎಂಬಲ್ಲಿ ಸಾರ್ವಜನಿಕರ ಸಹಾಯದಿಂದ ಪೊಲೀಸರು ಹಿಡಿದಿದ್ದಾರೆ.



ಪ್ರಸ್ತುತ ಆರೋಪಿತನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ. ಘಟನೆಯ ಬಗ್ಗೆ ಪುತ್ತೂರು ನಗರ ಪೊಲೀಸ್ ಠಾಣೆಯಲ್ಲಿ ಅ.ಕ್ರ: 59/2025, ಕಲಂ: 25(1B)(b) Indian Arms Act ಹಾಗೂ 110 ಬಿ.ಎನ್.ಎಸ್. ರಂತೆ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ. ಮುಂದಿನ ಕಾನೂನು ಕ್ರಮ ಕೈಗೊಳ್ಳಲಾಗುವುದು.




