ಕಥೊಲಿಕ್ ಸಭಾ ಬೆಳ್ಳೂರು ಘಟಕಕ್ಕೆ ನೂತನ ಅಧ್ಯಕ್ಷರಾಗಿ ಮೋಂತು ಫೆರ್ನಾಂಡಿಸ್ ಮತ್ತು ಕಾರ್ಯದರ್ಶಿಯಾಗಿ ಜೆಸಿಂತಾ ಮೊಂತೇರೊ ಸರ್ವಾನುಮತದಿಂದ ಆಯ್ಕೆ
ನೂತನ ಧರ್ಮಗುರುಗಳಾಗಿ ಅಧಿಕಾರ ಸ್ವೀಕರಿಸಿದ ಕೇವಲ 50 ದಿನಗಳಲ್ಲಿಯೇ ನಡೆದ ಚುನಾವಣೆ


ಚುನಾವಣೆಯನ್ನು ನಡೆಸಿದ ಫಾದರ್ ಮೈಕಲ್ ಮಸ್ಕರೇನ್ಹಸ್ ರವರಿಗೆ ವ್ಯಾಪಕ ಅಭಿನಂದನೆ

ಕಥೊಲಿಕ್ ಸಭಾ ಮಂಗ್ಳುರ್ ಪ್ರದೇಶ್ (ರಿ.) ಬೆಳ್ಳೂರು ಘಟಕದ 2025-26ನೇ ಸಾಲಿನ ಮಾರ್ಚ್ ತಿಂಗಳಿನಲ್ಲಿ ನಡೆಯುವ ವಾರ್ಷಿಕ ಚುನಾವಣೆಯು ಬೆಳ್ಳೂರು ಚರ್ಚ್ ನಲ್ಲಿ ಜುಲಾಯ್ 13ರಂದು ಆದಿತ್ಯವಾರ ನಡೆಯಿತು. ಚರ್ಚ್ ಪಾಲನಾ ಸಮಿತಿಯ ಉಪಾಧ್ಯಕ್ಷರಾಗಿ ತನ್ನ ನಿಷ್ಠಾವಂತ ಸೇವೆ ಸಲ್ಲಿಸಿ ಭಕ್ತಾಧಿಗಳ ಮನಸ್ಸುಗಳನ್ನು ಗೆದ್ದ ಮೋಂತು ಮರಿಯಾನ್ ಫೆರ್ನಾಂಡಿಸ್ ನೂತನ ಅಧ್ಯಕ್ಷರಾಗಿ ಮತ್ತು ಜೆಸಿಂತಾ ಮೊಂತೇರೊ ಕಾರ್ಯದರ್ಶಿಯಾಗಿ ಸರ್ವಾನುಮತದಿಂದ ಆಯ್ಕೆಯಾದರು.


ಮಂಗಳೂರು ಧರ್ಮಕ್ಷೇತ್ರದ ಧರ್ಮಾಧ್ಯಕ್ಷರಾದ ಅತೀ ವಂದನೀಯ ಡಾ. ಪೀಟರ್ ಪಾವ್ಲ್ ಸಲ್ಡಾನ್ಹಾರವರ ಆದೇಶದಂತೆ ಬೆಳ್ಳೂರು ಚರ್ಚ್ ಗೆ 2025 ಮೇ 23ರಂದು ಶುಕ್ರವಾರ ನೂತನ ಧರ್ಮಗುರುಗಳಾಗಿ ಅಧಿಕಾರ ಸ್ವೀಕರಿಸಿದ ವಂದನೀಯ ಫಾದರ್ ಮೈಕಲ್ ಮಸ್ಕರೇನ್ಹಸ್ ರವರು ಅಧಿಕಾರ ಸ್ವೀಕರಿಸಿ ಕೇವಲ 50 ದಿನಗಳಲ್ಲಿಯೇ ಕಥೊಲಿಕ್ ಸಭಾ ಘಟಕದ ಚುನಾವಣೆಯನ್ನು ನಡೆಸಿ ಬೆಳ್ಳೂರು ಚರ್ಚ್ ಭಕ್ತಾಧಿಗಳ ಮನಸ್ಸುಗಳನ್ನು ಗೆದ್ದು ವ್ಯಾಪಕ ಅಭಿನಂದನೆಗೆ ಪಾತ್ರರಾಗಿದ್ದಾರೆ. ಇಂತಹ ಧರ್ಮಗುರುಗಳು ಪ್ರತಿಯೊಂದು ಚರ್ಚ್ ಗಳಲ್ಲಿ ಇದ್ದರೆ, ಚರ್ಚ್ ಗಳಲ್ಲಿ ಯಾವುದೇ ಸಮಸ್ಯೆಗಳು ಉದ್ಬವಿಸುವುದಿಲ್ಲ ಎಂದು ಭಕ್ತಾಧಿಗಳು ಮಾತನಾಡುತ್ತಿದ್ದಾರೆ.

ಬೆಳ್ಳೂರು ಚರ್ಚ್ ನಲ್ಲಿ ಕಥೊಲಿಕ್ ಸಭಾ ಸಂಘಟನೆಯು ಒಂದು ಬಲಿಷ್ಠ ಸಂಘಟನೆಯಾಗಿದ್ದು ಹಿಂದು, ಮುಸ್ಲಿಂ ಮತ್ತು ಕ್ರಿಶ್ಚಿಯನ್ ಎಂಬ ಬೇಧ ಭಾವವಿಲ್ಲದೆ ಜನರ ಸಂಕಷ್ಟಗಳಿಗೆ ಸದಾ ಸ್ಪಂದಿಸಿ ಸೇವೆಯನ್ನು ನೀಡುತ್ತಾ ಬಂದಿರುವ ಜನಮೆಚ್ಚಿದ ಸಂಘಟನೆಯಾಗಿದೆ. ಬೆಳ್ಳೂರು ಚರ್ಚ್ ಅಭಿವೃದ್ಧಿಯ ಪಥದಲ್ಲಿ ಸಾಗಲು ಕಥೊಲಿಕ್ ಸಭಾ ಸಂಘಟನೆಯು ದಿಟ್ಟ ಹೆಜ್ಜೆಯನ್ನು ಇಡುತ್ತಾ ಬಂದಿದೆ. ಚರ್ಚ್ ನಲ್ಲಿ ಆಗುವ ಯಾವುದೇ ಕಾರ್ಯಕ್ರಮಗಳಿಗೆ ಸದಾ ಒಮ್ಮನಸ್ಸಿನಿಂದ ಸಹಕಾರವನ್ನು ನೀಡಿ ಜನರ ಮನಸ್ಸುಗಳನ್ನು ಗೆದ್ದಿದೆ.

2025-26ನೇ ಸಾಲಿಗೆ ನೂತನ ಪದಾಧಿಕಾರಿಗಳಾಗಿ ಮೋಂತು ಮರಿಯಾನ್ ಫೆರ್ನಾಂಡಿಸ್ – ಅಧ್ಯಕ್ಷ, ಗೋಡ್ ಫ್ರಿ ಫೆರ್ನಾಂಡಿಸ್ – ಉಪಾಧ್ಯಕ್ಷ, ಜೆಸಿಂತಾ ಮೊಂತೇರೊ – ಕಾರ್ಯದರ್ಶಿ, ಕೆವಿನ್ ಲೋಬೊ – ಸಹಕಾರ್ಯದರ್ಶಿ, ವಾಲ್ಟರ್ ಫೆರ್ನಾಂಡಿಸ್ – ಖಜಾಂಚಿ, ವಿಶಾಲ್ ಫೆರ್ನಾಂಡಿಸ್ – ಆಮ್ಚೊ ಸಂದೇಶ್ ಪ್ರತಿನಿಧಿ, ಮೊಲಿ ಟೆಲ್ಲಿಸ್ – ಸ್ತ್ರೀ ಹಿತ ಸಂಚಾಲಕಿ, ವಿನಯ್ ರೂಪಸ್ ಪಿಂಟೋ – ರಾಜಕೀಯ ಸಂಚಾಲಕ, ಆಂಬ್ರೋಸ್ ಪಿರೇರಾ – ಸಮುದಾಯ ಅಭಿವೃದ್ಧಿ ಸಂಚಾಲಕ, ಅವಿಲ್ ಕ್ರಾಸ್ತಾ – ಯುವ ಹಿತ ಸಂಚಾಲಕರಾಗಿ ಆಯ್ಕೆಯಾಗಿರುತ್ತಾರೆ. ವಿಜಯ್ ರವಿ ಫೆರ್ನಾಂಡಿಸ್ ನಿಕಟ ಪೂರ್ವ ಅಧ್ಯಕ್ಷರಾಗಿರುತ್ತಾರೆ.

ಕಥೊಲಿಕ್ ಸಭಾ ಮಂಗ್ಳುರ್ ಪ್ರದೇಶ್ (ರಿ.) ಇದರ ಕೇಂದ್ರೀಯ ಮಾಜಿ ಪಾವ್ಲ್ ರಾಲ್ಫಿ ಡಿಕೋಸ್ತ ಚುನಾವಣಾ ಅಧಿಕಾರಿಯಾಗಿ ಮತ್ತು ಪ್ರಸ್ತುತ ಪ್ರಥಮ ಉಪಾಧ್ಯಕ್ಷ ಲೋರೆನ್ಸ್ ಡಿಸೋಜ ಚುನಾವಣಾ ವೀಕ್ಷಕರಾಗಿದ್ದರು. ಆಯ್ಕೆಗೊಂಡ ಎಲ್ಲಾ ಪದಾಧಿಕಾರಿಗಳನ್ನು ಬೆಳ್ಳೂರು ಚರ್ಚ್ ಧರ್ಮಗುರು ವಂದನೀಯ ಫಾದರ್ ಮೈಕಲ್ ಮಸ್ಕರೇನ್ಹಸ್, ಕೇಂದ್ರೀಯ ಅಧ್ಯಕ್ಷ ಸಂತೋಷ್ ಡಿಸೋಜ ಬಜ್ಪೆ, ದ್ವಿತೀಯ ಉಪಾಧ್ಯಕ್ಷ ಲಿಯೋ ರೊಡ್ರಿಗಸ್, ಪ್ರಧಾನ ಕಾರ್ಯದರ್ಶಿ ವಿಲ್ಮಾ ಮೊಂತೇರೊ, ಸಹ ಕಾರ್ಯದರ್ಶಿ ಆಲ್ವಿನ್ ರೊಡ್ರಿಗಸ್, ಖಜಾಂಚಿ ಫ್ರಾನ್ಸಿಸ್ ಮೊಂತೇರೊ, ಸಹ ಖಜಾಂಚಿ ಲವೀನಾ ಗ್ರೆಟ್ಟಾ ಡಿಸೋಜ, ನಿಕಟ ಪೂರ್ವ ಅಧ್ಯಕ್ಷ ಆಲ್ವಿನ್ ಡಿಸೋಜ ಪಾನೀರ್, ಮಾಜಿ ಅಧ್ಯಕ್ಷರಾದ ಪೀಟರ್ ಜೆರಿ ರೊಡ್ರಿಗಸ್, ಸ್ಟ್ಯಾನಿ ಲೋಬೊ, ಬಂಟ್ವಾಳ ವಲಯ ಅಧ್ಯಕ್ಷ ಜೋನ್ ಲಸ್ರಾದೊ ಹಾಗೂ ಬೆಳ್ಳೂರು ಘಟಕದ ಎಲ್ಲಾ ಸದಸ್ಯರು ನೂತನ ಪದಾಧಿಕಾರಿಗಳಿಗೆ ಶುಭ ಹಾರೈಸಿದರು.




