November 11, 2025
Karavali Suddi | Bilingual Kannada/English Weekly Newspaper | ಕರಾವಳಿ ಸುದ್ದಿ - ಅರವಿನತ್ತ ನಮ್ಮ ಚಿತ್ತ
Follow Us
News

ಕಟ್ಟಡ ನಿರ್ಮಾಣಕ್ಕೆ ಲೈಸೆನ್ಸ್ ಕಡ್ಡಾಯ – ತಪ್ಪಿದ್ದಲ್ಲಿ ಸೌಲಭ್ಯವಿಲ್ಲ – ಮಹಾನಗರಪಾಲಿಕೆ

ಮಂಗಳೂರು ಮಹಾನಗರಪಾಲಿಕೆ ವ್ಯಾಪ್ತಿಯಲ್ಲಿ ಯಾವುದೇ ರೀತಿಯ ಕಟ್ಟಡ ನಿರ್ಮಾಣ ಕಾಮಗಾರಿಯನ್ನು ಪ್ರಾರಂಭಿಸುವ ಮುನ್ನ ಕೆ.ಎಂ.ಸಿ. ಕಾಯ್ದೆಯಡಿ ಕಡ್ಡಾಯವಾಗಿ ಕಟ್ಟಡ ನಿರ್ಮಾಣ ಪರವಾನಿಗೆ ಪಡೆಯಬೇಕಾಗಿರುತ್ತದೆ. ಕಟ್ಟಡ ಪರವಾನಿಗೆಯನ್ನು ಪಡೆದ ನಂತರ ಅನುಮೋದಿತ ನಕ್ಷೆಯನ್ವಯ ಕಟ್ಟಡ ನಿರ್ಮಿಸಿ ಕಟ್ಟಡ ಪ್ರವೇಶ ಪತ್ರ ಪಡೆದ ನಂತರ ಕಟ್ಟಡವನ್ನು ಉಪಯೋಗಿಸಬೇಕಾಗಿರುತ್ತದೆ.

ಸುಪ್ರೀಂ ಕೋರ್ಟ್ ಆದೇಶದಂತೆ ಕಟ್ಟಡ ಪ್ರವೇಶ ಪತ್ರ ಪಡೆಯದ ಕಟ್ಟಡಗಳಿಗೆ ಯಾವುದೇ ರೀತಿಯ ಸೇವಾ ಸಂಪರ್ಕಗಳಾದ (Service connections) ವಿದ್ಯುತ್ ಸಂಪರ್ಕ, ನೀರು ಸರಬರಾಜು, ಒಳಚರಂಡಿ ಸಂಪರ್ಕ, ಟ್ರೇಡ್ ಲೈಸೆನ್ಸ್ ನೀಡಬಾರದು ಎಂದು ತಿಳಿಸಲಾಗಿದೆ. ಆದ್ದರಿಂದ ನಗರಪಾಲಿಕೆ ವ್ಯಾಪ್ತಿಯಲ್ಲಿ ಯಾವುದೇ ರೀತಿಯ ಕಟ್ಟಡವನ್ನು ನಿರ್ಮಿಸುವ ಮೊದಲು ಕಡ್ಡಾಯವಾಗಿ ಕಟ್ಟಡ ಪರವಾನಿಗೆಯನ್ನು ಪಡೆದು ಅನುಮೋದಿತ ನಕ್ಷೆಯನ್ವಯ ಕಟ್ಟಡ ನಿರ್ಮಿಸಬೇಕು. ತಪ್ಪಿದಲ್ಲಿ ಯಾವುದೇ ರೀತಿಯ ಸೇವಾ ಸಂಪರ್ಕಗಳನ್ನು ನೀಡಲಾಗುವುದಿಲ್ಲ ಹಾಗೂ ಅನಧಿಕೃತ ಕಟ್ಟಡ ನಿರ್ಮಾಣದ ವಿರುದ್ಧ ಕೆ.ಎಂ.ಸಿ. ಕಾಯ್ದೆಯಡಿ ಕ್ರಮವಹಿಸಲಾಗುತ್ತದೆ ಎಂದು ಮಂಗಳೂರು ಮಹಾನಗರಪಾಲಿಕೆ ಆಯುಕ್ತರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

You may also like

News

ಮಹಿಳಾ ವೈಭವ – 2026: ಮಂಗಳೂರಿನಲ್ಲಿ ರಾಜ್ಯ ಮಟ್ಟದ ಮಹಿಳಾ ಸಮ್ಮೇಳನ

ಮಹಿಳಾ ಸಬಲೀಕರಣಕ್ಕೆ ಸುವರ್ಣ ಅಧ್ಯಾಯ – ಚಂಚಲ ತೇಜೋಮಯ ಮಂಗಳೂರು ತಾಲೂಕು ಮಹಿಳಾ ಮಂಡಲಗಳ ಒಕ್ಕೂಟವು 2026ರ ಜನವರಿ 31 ಮತ್ತು ಫೆಬ್ರವರಿ 1ರಂದು ಮಂಗಳೂರಿನ ಪುರಭವನದಲ್ಲಿ
News

2026 ಜನವರಿ 16 ರಿಂದ  25 ವರೆಗೆ ಕಾಜೂರು ಮಖಾಂ ಉರೂಸ್  

ಗೌರವಾಧ್ಯಕ್ಷ ಸಯ್ಯಿದ್ ಕೆ.ಎಸ್. ಆಟ್ಟಕೋಯ ತಂಙಳ್ ಕುಂಬೋಳ್ ಇವರಿಂದ ದಿನಾಂಕ ಘೋಷಣೆ ಹಾಗೂ ಪೋಸ್ಟರ್ ಬಿಡುಗಡೆ ದಕ್ಷಿಣ ಭಾರತದ ಅಜ್ಮೀರ್ ಎಂದೇ ಪ್ರಸಿದ್ಧಿ ಪಡೆದಿರುವ ಇತಿಹಾಸ ಪ್ರಸಿದ್ಧ

You cannot copy content of this page