8 ತಿಂಗಳಲ್ಲಿ ಕಾಡಾದ ಮಲ್ಲಿಕಟ್ಟೆ ಪಾರ್ಕ್ – ಮಹಾನಗರ ಪಾಲಿಕೆಯ ನಿರ್ಲಕ್ಷ್ಯಕ್ಕೆ ಜನರ ಆಕ್ರೋಶ”
ಮಂಗಳೂರು ನಗರಾಭಿವೃದ್ಧಿ ಪ್ರಾಧಿಕಾರ ಹಾಗೂ ಮಂಗಳೂರು ಮಹಾನಗರ ಪಾಲಿಕೆ ವತಿಯಿಂದ ಲಕ್ಷಾಂತರ ಜನರ ತೆರಿಗೆ ಹಣ ಖರ್ಚು ಮಾಡಿ ಭರ್ಜರಿಯಾಗಿ ಉದ್ಘಾಟನೆಗೊಂಡ 34ನೇ ವಾರ್ಡ್ ಮಲ್ಲಿಕಟ್ಟೆ ಪಾರ್ಕ್, ಕೇವಲ 8 ತಿಂಗಳಲ್ಲೇ ಕಾಡಿನಂತೆ ಬದಲಾಗಿದೆ.



ಪಾರ್ಕ್‌ನೊಳಗೆ ಎಲ್ಲೆಡೆ ಕಸಕಡ್ಡಿ, ಗಿಡಕಂಡಿಗಳು ತುಂಬಿ, ಮಕ್ಕಳ ಆಟೋಪಕರಣಗಳು ನಿರ್ಲಕ್ಷ್ಯದಿಂದ ಜೀರ್ಣಾವಸ್ಥೆಗೆ ತಲುಪಿವೆ. ಇದರಿಂದ ಪಾರ್ಕ್‌ಗೆ ಬರುವ ಮಕ್ಕಳು, ಹಿರಿಯರು ಹಾಗೂ ಮಹಿಳೆಯರಿಗೆ ಸುರಕ್ಷತೆ ಸಂಬಂಧಿತ ಭಯ ಉಂಟಾಗಿದೆ. ಸೆಕ್ಸೋಫೋನ್ ವಾದಕ ಕದ್ರಿ ಗೋಪಾಲ ನಾಥ್ ಹೆಸರು ಇಟ್ಟಿದ್ದಾರೆ. ಅವರ ಮಗ ಪಾರ್ಕ್ ನಿರ್ವಹಣೆ ಬಗೆ ಕಾಳಜಿ ಇಡಬೇಕಿತ್ತು. ಸ್ಥಳೀಯರು ಆಕ್ರೋಶ ವ್ಯಕ್ತಪಡಿಸುತ್ತಾ, ಜನರ ದುಡ್ಡು ಹಾಳು ಮಾಡಿದರೆ ಆಗುವ ಕಷ್ಟ ನಷ್ಟಗಳನ್ನು ಆಡಳಿತ ಯಂತ್ರ ಗಮನಿಸಬೇಕೆಂದು ಒತ್ತಾಯಿಸಿದ್ದಾರೆ. ತೆರಿಗೆ ಹಣವನ್ನು ಸರಿಯಾದ ನಿರ್ವಹಣೆಗೆ ಬಳಸದೆ, ಯೋಜನೆಗಳು ಮಧ್ಯದಲ್ಲೇ ಹಾಳಾಗುವುದು ಜನರ ಪರಿಶ್ರಮದ ಸಂಪತ್ತಿನ ಅವಮಾನ ಎಂದು ನಾಗರಿಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.




ಮಹಾನಗರ ಪಾಲಿಕೆಗೆ ಈ ಪಾರ್ಕ್‌ನ ನಿರ್ವಹಣೆಗೆ ಇಚ್ಛಾಶಕ್ತಿ ಇಲ್ಲದಿರುವುದೇ ಇಂದಿನ ದುಸ್ಥಿತಿಗೆ ಕಾರಣ ಎಂದು ಸ್ಥಳೀಯರು ಆರೋಪಿಸಿದ್ದಾರೆ. ಜನರ ತೆರಿಗೆಯಿಂದ ನಿರ್ಮಿತವಾದ ಈ ಪಾರ್ಕ್‌ಗೆ ಇಂತಹ ಸ್ಥಿತಿ ಬಂದುದರಿಂದ, ಇದನ್ನು ಮಹಾನಗರ ಪಾಲಿಕೆಯೇ ತನ್ನ ದುಡ್ಡಿನಿಂದ ಸರಿಪಡಿಸಬೇಕು ಎಂದು ಆಗ್ರಹ ವ್ಯಕ್ತವಾಗಿದೆ. ಪಾರ್ಕ್‌ನ ನಿರ್ಲಕ್ಷ್ಯದಿಂದ ಅಲ್ಲಿ ದುರ್ನಾತಿ, ಅಸುರಕ್ಷಿತ ಪರಿಸ್ಥಿತಿ ಹಾಗೂ ಆರೋಗ್ಯ ಸಮಸ್ಯೆಗಳು ಉಂಟಾಗುವ ಆತಂಕ ಸ್ಥಳೀಯರಲ್ಲಿ ಹೆಚ್ಚಾಗಿದೆ. ತಕ್ಷಣ ಸ್ವಚ್ಛತೆ, ಕಡ್ಡಿ ಕಟಾವು ಹಾಗೂ ಪಾರ್ಕ್‌ನ ನಿರ್ವಹಣೆಗೆ ಸಂಬಂಧಿಸಿದ ಕ್ರಮಗಳನ್ನು ಕೈಗೊಳ್ಳಬೇಕು ಎಂದು ನಾಗರಿಕರು ಆಗ್ರಹಿಸಿದ್ದಾರೆ.




