ಭಟ್ಕಳದಲ್ಲಿ ಅಕ್ರಮ ಇಸ್ಪೀಟ್ ಜೂಜಾಟ – 8 ಜನರನ್ನು ಬಂಧಿಸಿದ ಪೊಲೀಸರು
ಭಟ್ಕಳ ತಾಲೂಕಿನ ಗೊರಟೆ ಗ್ರಾಮದಲ್ಲಿರುವ ಹೈಸ್ಕೂಲ್ ಆವರಣದಲ್ಲಿ ಅಕ್ರಮವಾಗಿ ಅಂದರ್–ಬಾಹರ್ ಇಸ್ಪೀಟ್ ಜೂಜಾಟ ನಡೆಯುತ್ತಿರುವ ಬಗ್ಗೆ ಮಾಹಿತಿ ಮೇರೆಗೆ ಭಟ್ಕಳ ಗ್ರಾಮೀಣ ಪೊಲೀಸ್ ಠಾಣೆಯ ಪಿಎಐ ಮಂಜುನಾಥ ಅಂಗಾರೆಡ್ಡಿ ನೇತೃತ್ವದಲ್ಲಿ ದಾಳಿ ನಡೆಸಲಾಯಿತು. ಈ ದಾಳಿಯಲ್ಲಿ ಒಟ್ಟು 8 ಮಂದಿ ಆರೋಪಿತರನ್ನು ವಶಕ್ಕೆ ಪಡೆದು, ರೂಪಾಯಿ 1,02,910/- ಮೌಲ್ಯದ ನಗದು ಹಾಗೂ ಜೂಜಾಟಕ್ಕೆ ಬಳಸಿದ ಸಾಮಗ್ರಿಗಳನ್ನು ವಶಪಡಿಸಿಕೊಳ್ಳಲಾಗಿದೆ.

ಬಂಧಿತ ಆರೋಪಿಗಳ ವಿವರ:
ಚಂದ್ರಕಾಂತ ದೇವಯ್ಯ ಮೊಗೇರ (35), ಮೀನುಗಾರ, ಗೊರಟೆ, ಭಟ್ಕಳ, ವೆಂಕಟ್ರಮಣ ನಾರಾಯಣ ಮೊಗೇರ (35), ಮೀನುಗಾರ, ಗೊರಟೆ, ಭಟ್ಕಳ, ಶ್ರೀಧರ ಶಂಕರ ಮೊಗೇರ (52), ಮೀನುಗಾರ, ಗೊರಟೆ, ಭಟ್ಕಳ, ಜಗದೀಶ ಮಾದೇವ ಮೊಗೇರ (35), ಮೀನುಗಾರ, ಗೊರಟೆ, ಭಟ್ಕಳ, ಅಂಗರಾಜ ಹನುಮಂತ ಮೊಗೇರ (49), ಮೀನುಗಾರ, ಗೊರಟೆ, ಭಟ್ಕಳ, ನಾಗಪ್ಪ ಬೊಬ್ಬರಿಯ ಬೇಡುಮನೆ (51), ಮೀನುಗಾರ, ಗೊರಟೆ, ಭಟ್ಕಳ, ವೆಂಕಟ್ರಮಣ ನಾರಾಯಣ ಮೊಗೇರ (45), ಮೀನುಗಾರ, ಗೊರಟೆ, ಭಟ್ಕಳ, ನಾರಾಯಣ ಗಣಪತಿ ಮೊಗೇರ (40), ಮೀನುಗಾರ, ಗೊರಟೆ, ಭಟ್ಕಳ.


ಈ ಪ್ರಕರಣದ ಕುರಿತು ಕಲಂ 87 ಕೆ.ಪಿ. ಆ್ಯಕ್ಟ್ ಅಡಿಯಲ್ಲಿ ಕೇಸು ದಾಖಲಿಸಿದ್ದು, ಮುಂದಿನ ತನಿಖೆ ಭಟ್ಕಳ ಗ್ರಾಮೀಣ ಪೊಲೀಸ್ ಠಾಣೆಯವರು ನಡೆಸುತ್ತಿದ್ದಾರೆ. ಪೊಲೀಸರು ಸಾರ್ವಜನಿಕರಿಗೆ ಮನವಿ ಮಾಡಿದ್ದು ಅಕ್ರಮ ಜೂಜಾಟ ಹಾಗೂ ಕಾನೂನು ಬಾಹಿರ ಚಟುವಟಿಕೆಗಳ ಬಗ್ಗೆ ತಕ್ಷಣ ಪೊಲೀಸರಿಗೆ ಮಾಹಿತಿ ನೀಡಲು ಕೋರಿದ್ದಾರೆ.




