ಸೆಪ್ಟೆಂಬರ್ 5ರಂದು ಕೃತರ್ಥ ಪ್ರೊಡಕ್ಷನ್ ನಿರ್ಮಾಣದ ನೂತನ ಚಲನಚಿತ್ರ ಕುಡ್ಲ ನಮ್ದು ಊರು ರಾಜ್ಯಾದ್ಯಂತ ಬಿಡುಗಡೆ
ಕೃತರ್ಥ ಪ್ರೊಡಕ್ಷನ್ ನಿರ್ಮಾಣದ ನೂತನ ಚಲನಚಿತ್ರ ಕುಡ್ಲ ನಮ್ದು ಊರು ಇದೇ ಸೆಪ್ಟೆಂಬರ್ 5ರಂದು ರಾಜ್ಯಾದ್ಯಂತ ಬಿಡುಗಡೆಯಾಗಲಿದೆ. ಮೊದಲ ಹಂತದಲ್ಲಿ ರಾಜ್ಯದ 70 ಥಿಯೇಟರ್ ಗಳಲ್ಲಿ ಸಿನಿಮಾ ಬಿಡುಗಡೆಯಾಗಲಿದೆ. ಚಿತ್ರದ ಪ್ರೇಮಿಯರ್ ಶೋ ಈಗಾಗಲೇ ಎರಡು ಕಡೆ ನಡೆದಿದ್ದು ಜನರ ಪ್ರತಿಕ್ರಿಯೆ ಚೆನ್ನಾಗಿದೆ. ಜನರ ಪ್ರತಿಕ್ರಿಯೆ ಕಂಡು ನಮಗೂ ಭರವಸೆ ಬಂದಿದೆ. ಕನ್ನಡ ಚಿತ್ರರಂಗದಲ್ಲಿ ಹೊಸ ಮೈಲುಗಲ್ಲು ಮೂಡಿಸಿದೆ ಎಂಬುದು ಪ್ರೇಕ್ಷಕರ ಅಭಿಪ್ರಾಯಗಳಿಂದ ತಿಳಿದುಬಂದಿದೆ.


ಈ ಚಿತ್ರದಲ್ಲಿ ಮನುಷ್ಯನ ಜೀವನದ ಮೂರು ಹಂತಗಳು ಹಾಗೂ ಪರಶುರಾಮ ಸೃಷ್ಟಿಯ ತುಳುನಾಡಿನ ಬಗ್ಗೆ… ಈ ಹಾದಿಯಲ್ಲಿ ಏನೆಲ್ಲ ಸವಾಲುಗಳು ಬರುತ್ತದೆ ಎಂಬುದು ಈ ಚಿತ್ರದಲ್ಲಿ ವಿಭಿನ್ನ ರೀತಿಯಲ್ಲಿ ತೋರಿಸುವ ಪ್ರಯತ್ನವನ್ನು ಮಾಡಿದ್ದಾರೆ. ಚಿತ್ರದಲ್ಲಿ ಸಾಕಷ್ಟು ಟ್ವಿಸ್ಟ್ ಗಳಿದ್ದು ಪ್ರೇಕ್ಷಕರಿಗೆ ಕೊನೆಯವರೆಗೂ ಕುತೂಹಲವನ್ನಿರಿಸಿಕೊಂಡು ಮುಂದುವರಿಯುತ್ತದೆ. ಚಿತ್ರವನ್ನು ಕೃತರ್ಥ ಪ್ರೊಡಕ್ಷನ್ ನಿರ್ಮಿಸಿದೆ. ಅಂಕಿತ ಪದ್ಮ, ಚಿತ್ರ ಗೌಡ, ನರೇಂದ್ರ ಜೈನ ಚಿತ್ರದ ಸಹ ನಿರ್ಮಾಪಕರಾಗಿದ್ದಾರೆ. ನಾಯಕ ನಟರುಗಳಾಗಿ ಅಲೋಕ್ ಏ.ಕೆ., ಸ್ವರಾಜ್ ಶೆಟ್ಟಿ, ಲಂಚು ಲಾಲ್ ಕೆ.ಎಸ್. ನಟಿಸಿದ್ದಾರೆ. ನಾಯಕ ನಟಿಯರುಗಳಾಗಿ ಅನಿಕಾ ಶೆಟ್ಟಿ, ಶ್ರೇಯಾ ಶೆಟ್ಟಿ, ನಯನ ಸಾಲಿಯನ್ ರವರು ಅಭಿನಯಿಸಿರುತ್ತಾರೆ.

ತಾರಾಗಣದಲ್ಲಿ ಪ್ರಕಾಶ್ ತುಮಿ ನಾಡು, ದಿಲೀಪ್ ಕಾರ್ಕಳ, ಪ್ರಜ್ವಲ್ ಪ್ರಶಾಂತ್, ಮಂಜು ಸುವರ್ಣ, ಮತ್ತಿತರು ಇದ್ದಾರೆ. ಈ ಚಿತ್ರದ ನಿರ್ದೇಶನವನ್ನು ದುರ್ಗಾ ಪ್ರಸಾದ್ ಆರ್.ಕೆ. (ಅಲೋಕ್), ನಿರ್ವಹಿಸಿದ್ದಾರೆ. ಕ್ಯಾಮೆರಾ ಮ್ಯಾನ್ ಮಯೂರ್ ಶೆಟ್ಟಿ ನಿರ್ವಹಿಸಿದ್ದು. ನಿಶ್ಚಿತ್ ಪೂಜಾರಿ ಸಂಕಲನ ಮಾಡಿದ್ದಾರೆ. ನಿತಿನ್ ಶಿವರಾಂ ಸಂಗೀತ ನಿರ್ದೇಶನದಲ್ಲಿ ಹಾಡುಗಳು ತುಂಬಾ ಚೆನ್ನಾಗಿ ಮೂಡಿ ಬಂದಿದೆ. ಚಿತ್ರದ ಹಿನ್ನೆಲೆ ಸಂಗೀತವು ಶ್ರೀ ಸಸ್ತಾ ಹಾಗೂ ಅಂಜನ್ ಪೂಜಾರಿಯವರು ಅದ್ಭುತವಾಗಿ ನಿರ್ಮಿಸಿದ್ದಾರೆ. ಚಿತ್ರದ ಹಾಡುಗಳು ಈಗಾಗಲೇ ಸಾಮಾಜಿಕ ಜಾಲತಾಣಗಳಲ್ಲಿ ಸೆನ್ಸೆಶನ್ ಮೂಡಿಸಿದೆ ಎಂದು ಕುಡ್ಲ ನಮ್ದು ಊರು ಚಲನಚಿತ್ರದ ನಿರ್ದೇಶಕರು ಹಾಗೂ ನಾಯಕ ನಟರಾಗಿರುವ ದುರ್ಗಾ ಪ್ರಸಾದ್ ಆರ್.ಕೆ. (ಅಲೋಕ್), ರವರು ಹೇಳಿದರು. ಪತ್ರಿಕಾಗೋಷ್ಠಿಯಲ್ಲಿ ಸಹಾಯಕ ನಿರ್ದೇಶಕರಾಗಿರುವ ಯತೀಶ್ ಕದ್ರ, ಗೀತಾಂಜಲಿ ಸುವರ್ಣ, ಸುರೇಶ್ ಪಿ.ಬಿ. ವಕೀಲರು ಮೂಡುಬಿದಿರೆ ಮತ್ತು ಮಯೂರ್ ಆರ್. ಶೆಟ್ಟಿ ಡಿ.ಓ.ಪಿ. ಉಪಸ್ಥಿತರಿದ್ದರು.




