ಪರವಾನಿಗೆ ಇಲ್ಲದೇ ಅಕ್ರಮವಾಗಿ ಜಾನುವಾರು ಸಾಗಾಟ ಮಾಡುತ್ತಿದ್ದ ವಾಹನ ವಶ
ಭಟ್ಕಳ ಗ್ರಾಮೀಣ ಠಾಣಾ ಪೊಲೀಸರ ಕ್ಷಿಪ್ರ ಕಾರ್ಯಾಚರಣೆ

ಕರ್ನಾಟಕ ಜಾನುವಾರು ಹತ್ಯೆ ತಡೆ ಮತ್ತು ಸಂರಕ್ಷಣಾ ಕಾಯಿದೆ-2020, ಪ್ರಾಣಿಗಳ ಮೇಲಿನ ಕ್ರೌರ್ಯ ತಡೆ ಕಾಯಿದೆ-1960 ಹಾಗೂ ಬಿ.ಎನ್.ಎಸ್. ಕಲಂ ಅಡಿಯಲ್ಲಿ ಭಟ್ಕಳ ಗ್ರಾಮೀಣ ಪೊಲೀಸ್ ಠಾಣೆಯವರು ಜಾನುವಾರುಗಳ ಅಕ್ರಮ ಸಾಗಾಣಿಕೆಯನ್ನು ಪತ್ತೆಹಚ್ಚಿದ್ದಾರೆ.
ಸೆಪ್ಟೆಂಬರ್ 5 ರಂದು ಶುಕ್ರವಾರ ಬೆಳಗಿನ ಸುಮಾರು 6.30 ಗಂಟೆಯ ಸಮಯದಲ್ಲಿ ಭಟ್ಕಳ ತಾಲೂಕಿನ ಹನೀಫಾಬಾದ್ ಎನ್.ಎಚ್. 66 ರಸ್ತೆಯ ಪಿ.ಬಿ. ಇಬ್ರಾಹಿಂ ಪೆಟ್ರೋಲ್ ಬಂಕ್ ಎದುರು, ಅಶೋಕ್ ಲೈಲೆಂಡ್ ಕಂಟೇನರ್ (ನಂ. ಟಿ.ಎಸ್.-12/ಯು.ಸಿ 6464)ನಲ್ಲಿ ಸುಮಾರು ₹7 ಲಕ್ಷ ಮೌಲ್ಯದ 10 ಜಾನುವಾರುಗಳನ್ನು ಕಟ್ಟಿಹಾಕಿ, ನೀರು-ಹುಲ್ಲು ನೀಡದೆ, ವಧೆ ಮಾಡುವ ಉದ್ದೇಶದಿಂದ ಪರವಾನಿಗೆಯಿಲ್ಲದೆ ಸಾಗಿಸುತ್ತಿರುವ ವೇಳೆ ಪೊಲೀಸರು ದಾಳಿ ನಡೆಸಿದರು.

ವಶಪಡಿಸಿಕೊಂಡ ವಸ್ತುಗಳು:
ಅಶೋಕ್ ಲೈಲೆಂಡ್ ಕಂಟೇನರ್ – ಅಂದಾಜು ಮೌಲ್ಯ ₹25 ಲಕ್ಷ, 10 ಜಾನುವಾರುಗಳು – ಅಂದಾಜು ಮೌಲ್ಯ ₹7 ಲಕ್ಷ,
ಆರೋಪಿ ವಿವರಗಳು:
ಆಸಿಪ್ (26), ಶಾಹಪುರ, ಮುಜಫ್ಫರನಗರ, ಉತ್ತರ ಪ್ರದೇಶ, ಶಾಹುಲ್ ಹಮೀದ ಕೆ., ಮೂಲ ತೆಲಂಗಾಣ, ಹೈದ್ರಾಬಾದ್, ಹಾಲಿ ವಾಸ: ಬೇಲಾ, ಕಾಸರಗೋಡು (ವಾಹನದ ಮಾಲೀಕ)


ಫಿರ್ಯಾದಿದಾರರು:
ಅಬುಬಕರ್ ಗಂಗಾವಳಿ (44), ಮದೀನಾ ಕಾಲೋನಿ, ಭಟ್ಕಳ, ಹಮೀದ (54), ಕಾಸರಗೋಡು, ಕೇರಳ.
ಘಟನೆಯ ಬಗ್ಗೆ ಭಟ್ಕಳ ಗ್ರಾಮೀಣ ಠಾಣೆಯ ಪೊಲೀಸ್ ನಿರೀಕ್ಷಕ ಮಂಜುನಾಥ ಲಿಂಗಾರೆಡ್ಡಿ ಹಾಗೂ ತಂಡ ದಾಳಿ ನಡೆಸಿ ಆರೋಪಿಗಳನ್ನು ವಾಹನ ಸಮೇತ ಬಂಧಿಸಿದರು. ಪ್ರಕರಣವನ್ನು ದಾಖಲಿಸಿ ಮುಂದಿನ ತನಿಖೆಯನ್ನು ಉಪನಿರೀಕ್ಷಕ ನಾರಾಯಣ ನಾಯ್ಕ ಮುನ್ನಡೆಸುತ್ತಿದ್ದಾರೆ.




