ಪಾಲ್ದನೆ ಸಂತ ಮದರ್ ತೆರೆಜಾ ಚರ್ಚ್ ನಲ್ಲಿ ಸ್ತ್ರೀ ಆಯೋಗದ ಸಂಘಟನೆಯ ಉದ್ಘಾಟನೆ
ಸ್ಥಾಪಕ ಅಧ್ಯಕ್ಷೆಯಾಗಿ ಶೀಲಾ ಡಿಸೋಜ ಮತ್ತು ಕಾರ್ಯದರ್ಶಿಯಾಗಿ ವೆಲೆಂಟಿನಾ ರೊಡ್ರಿಗಸ್ ಆಯ್ಕೆ

ಮಂಗಳೂರು ಧರ್ಮಕ್ಷೇತ್ರಕ್ಕೆ ಒಳಪಟ್ಟ ಪಾಲ್ದನೆ ಸಂತ ಮದರ್ ತೆರೆಸಾ ಚರ್ಚ್ ನಲ್ಲಿ ಸ್ತ್ರೀ ಆಯೋಗದ ಸಂಘಟನೆಯ ಉದ್ಘಾಟನೆಯು ಸೆಪ್ಟೆಂಬರ್ 13ರಂದು ಶನಿವಾರ ಚರ್ಚ್ ಸಭಾಂಗಣದಲ್ಲಿ ನೆರವೇರಿತು. ಉದ್ಘಾಟನಾ ಸಮಾರಂಭದಲ್ಲಿ ಚರ್ಚ್ ಧರ್ಮಗುರು ವಂದನೀಯ ಫಾದರ್ ರಿಚ್ಚರ್ಡ್ ಅಲೋಸಿಯಸ್ ಕುವೆಲ್ಲೊರವರು ಭಾಗವಹಿಸಿ ಬಳಿಕ ಮಾತನಾಡಿ, ನೂತನವಾಗಿ ಉದ್ಘಾಟನೆಗೊಂಡ ಸ್ತ್ರೀ ಆಯೋಗದ ನೂತನ ಅಧ್ಯಕ್ಷ, ಪದಾಧಿಕಾರಿಗಳಿಗೆ ಹಾಗೂ ಘಟಕಕ್ಕೆ ಶುಭ ಹಾರೈಸಿದರು.



ನೂತನ ಘಟಕದ ಸ್ಥಾಪಕ ಅಧ್ಯಕ್ಷರಾಗಿ ಶೀಲಾ ಡಿಸೋಜ, ಕಾರ್ಯದರ್ಶಿಯಾಗಿ ವೆಲೆಂಟಿನಾ ರೊಡ್ರಿಗಸ್, ಖಜಾಂಚಿಯಾಗಿ ಲಿಝೀ ಫೆರ್ನಾಂಡಿಸ್, ಕಾರ್ಯಕಾರಿ ಸಮಿತಿ ಸದಸ್ಯರಾಗಿ ಪ್ರೆಸಿಲ್ಲಾ ಫೆರ್ನಾಂಡಿಸ್, ಶಾಂತಿ ಮೊಂತೇರೊ, ಶೋಭಾ ಸಿಕ್ವೇರಾ, ಜೂಲಿಯಾನಾ ಫೆರ್ನಾಂಡಿಸ್ ರವರು ಸರ್ವಾನುಮತದಿಂದ ಆಯ್ಕೆಯಾಗಿದ್ದಾರೆ.




ಈ ಸಂದರ್ಭದಲ್ಲಿ ಚರ್ಚ್ ಪಾಲನಾ ಸಮಿತಿಯ ಉಪಾಧ್ಯಕ್ಷ ಎಲಿಯಾಸ್ ಫೆರ್ನಾಂಡಿಸ್, ಕಾರ್ಯದರ್ಶಿ ಆಸ್ಟಿನ್ ಮೊಂತೇರೊ, ಸರ್ವ ಆಯೋಗಗಳ ಸಂಚಾಲಕಿ ಜೋಸ್ಲಿನ್ ಲೋಬೊ, ಸ್ತ್ರೀ ಆಯೋಗದ ಕೇಂದ್ರೀಯ ಸಮಿತಿಯ ಪ್ರತಿನಿಧಿಗಳಾಗಿ ಕಾರ್ಯದರ್ಶಿ ಅನಿತಾ ಫ್ರ್ಯಾಂಕ್ ಮತ್ತು ಕಾರ್ಯಕಾರಿ ಸಮಿತಿ ಸದಸ್ಯೆ ಉಷಾ ಫೆರ್ನಾಂಡಿಸ್ ರವರು ಉಪಸ್ಥಿತರಿದ್ದರು.




