ಕಥೊಲಿಕ್ ಸಭಾ ದಕ್ಷಿಣ ವಲಯದ ವತಿಯಿಂದ ಅಜೀವ ಸದಸ್ಯರ ಸಹಮಿಲನ
ದಕ್ಷಿಣ ವಲಯದ ಶ್ರೇಷ್ಠ ಗುರು ಫಾದರ್ ಸಿಪ್ರಿಯನ್ ಪಿಂಟೋರವರಿಂದ ಕಾರ್ಯಕ್ರಮದ ಉದ್ಘಾಟನೆ

ಕಥೊಲಿಕ್ ಸಭಾ ಮಂಗಳೂರು ಪ್ರದೇಶ (ರಿ.), ಸಂತ ಜೋಸೆಫ್ ವಾಜ್, ಮಂಗಳೂರು ದಕ್ಷಿಣ ವಲಯದ ವತಿಯಿಂದ ಅಜೀವ ಸದಸ್ಯರ ಸಹಮಿಲನವು ಸಂತ ಸೆಬಾಸ್ಟಿಯನ್ ಚರ್ಚ್ ಪೆರ್ಮನ್ನೂರ್ ಇದರ ಆಡಿಟೋರಿಯಂನಲ್ಲಿ ಸೆಪ್ಟೆಂಬರ್ 21ರಂದು ಭಾನುವಾರ ನಡೆಯಿತು. ಕಥೊಲಿಕ್ ಸಭಾ ದಕ್ಷಿಣ ವಲಯದ ಆದ್ಯಾತ್ಮಿಕ ನಿರ್ದೇಶಕರು ಹಾಗೂ ಮಂಗಳೂರು ದಕ್ಷಿಣ ವಲಯದ ಶ್ರೇಷ್ಠ ಗುರು ಅತೀ ವಂದನೀಯ ಫಾದರ್ ಸಿಪ್ರಿಯನ್ ಪಿಂಟೊ ಕಾರ್ಯಕ್ರಮವನ್ನು ಉದ್ಘಾಟಿಸಿ, ಕಥೊಲಿಕ್ ಸಭಾ ಒಂದು ಒಳ್ಳೆಯ ಸಂಘಟನೆ. ಎಲ್ಲಾ ಚರ್ಚುಗಳಲ್ಲಿ ಒಳ್ಳೆಯ ಕಾರ್ಯಕ್ರಮಗಳನ್ನು ಈ ಸಂಘಟನೆ ಹಮ್ಮಿಕೊಳ್ಳುತದೆ. ಯಾವುದೇ ಸಮಸ್ಯೆಗಳಾಗಲೀ, ಯಾವುದೇ ಅಭಿವೃದ್ಧಿ ಕಾರ್ಯಗಳಾಗಲೀ ಈ ಸಂಘಟನೆಯು ಮಾಡುತ್ತದೆ. ಎಲ್ಲರೂ ಒಗ್ಗಟಾದರೆ ಮಾತ್ರ ಒಳ್ಳೆಯ ಕಾರ್ಯಕ್ರಮಗಳು ಮಾಡಲು ಸಾಧ್ಯವಿದೆ ಎಂದು ಶುಭ ಹಾರೈಸಿದರು.







ಅಖಿಲ ಭಾರತ ಕ್ರಿಶ್ಚಿಯನ್ ಒಕ್ಕೂಟದ ರಾಜ್ಯಧ್ಯಕ್ಷರಾದ ಆಲ್ವಿನ್ ಡಿಸೋಜ ಪಾನೀರ್ ರವರು ಪ್ರಾಸ್ತವಿಕ ಮಾತುಗಳನ್ನಾಡಿದರು. ಕಥೊಲಿಕ್ ಸಭಾ ದಕ್ಷಿಣ ವಲಯದ ಅಧ್ಯಕ್ಷ ಡೊಲ್ಪಿ ಡಿಸೋಜ ಸ್ವಾಗತಿಸಿದರು. ದಕ್ಷಿಣ ವಲಯದ ಚರ್ಚ್ ಗಳ ಸ್ಥಾಪಕ ಅಧ್ಯಕ್ಷರಿಗೆ ಸನ್ಮಾನ ಮಾಡಿದ ಕಥೊಲಿಕ್ ಸಭಾ ಮಂಗ್ಳುರ್ ಪ್ರದೇಶ್ (ರಿ.) ಇದರ ಕೇಂದ್ರೀಯ ಅಧ್ಯಕ್ಷ ಸಂತೋಷ್ ಡಿಸೋಜ ಬಜ್ಪೆ ಇವರು ಕಾರ್ಯಕ್ರಮದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು. ದಕ್ಷಿಣ ವಲಯದ ಚರ್ಚ್ ಗಳ ಉತ್ತಮ ಕೃಷಿಕರಿಗೆ ಸನ್ಮಾನಿಸಿದ ಕಥೊಲಿಕ್ ಸಭಾ ಕೇಂದ್ರೀಯ ಮಾಜಿ ಅಧ್ಯಕ್ಷ ಹಾಗೂ ಸಾರ್ವಜನಿಕ ಸಂಪರ್ಕ ಅಧಿಕಾರಿ ಪಾವ್ಲ್ ರೋಲ್ಫಿ ಡಿಕೋಸ್ತರವರು ಕಥೊಲಿಕ್ ಸಭಾದ ಧ್ಯೇಯ ಉದ್ಧೇಶಗಳ ಬಗ್ಗೆ ಸಂಘಟನೆ ಬೆಳೆದು ಬಂದ ಹಾದಿ ಬಗ್ಗೆ ಮಾಹಿತಿ ನೀಡುತ್ತಾ ಸೇವಾ ಕಾರ್ಯಗಳನ್ನು ನಡೆಸಲು ಪ್ರೇರಣೆ ನೀಡುವಂತಹ ಮಾತುಗಳನ್ನಾಡಿದರು.

ರಾಜ್ಯ ಮಟ್ಟದಲ್ಲಿ ಹಾಗೂ ರಾಷ್ಟ್ರಮಟ್ಟದಲ್ಲಿ ಪದಕಗಳನ್ನು ಪಡೆದ ಪ್ರತಿಭಾನಿತ್ವ ಸಾಧಕರನ್ನು ಸನ್ಮಾನ ಮಾಡಿದ ಪ್ರಖ್ಯಾತ ವಕೀಲರಾದ ಪ್ರವೀಣ್ ಪಿಂಟೊರವರು ಕಾನೂನಿನ ಬಗ್ಗೆ ಮಾಹಿತಿ ನೀಡಿದರು. ದಕ್ಷಿಣ ವಲಯದ ಎಲ್ಲಾ ಚರ್ಚ್ ಗಳ ಸದಸ್ಯರು ಈ ಕಾರ್ಯಕ್ರಮದಲ್ಲಿ ಹಾಜರಿದ್ದರು. ಕಾರ್ಯದರ್ಶಿ ಟ್ರೆಸ್ಸಿ ರೊಡ್ರಿಗಸ್ ವಂದಿಸಿದರು. ಕಾರ್ಯಕ್ರಮದ ಸಂಚಾಲಕ ಡೇನಿಯಲ್ ಡಿಸಿಲ್ವಾ ಅಮ್ಮೆಂಬಳ ವೇದಿಕೆಯಲ್ಲಿದ್ದು ಸಹಕರಿಸಿದರು. ಖಜಾಂಚಿ ಫೆಲಿಕ್ಸ್ ಡಿಸೋಜ ಹಾಗೂ ಲವೀನಾ ಗ್ರೆಟ್ಟಾ ಡಿಸೋಜ ಕಾರ್ಯಕ್ರಮ ನಿರೂಪಿಸಿದರು.




