ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲಾ ಜಮೀಯ್ಯತುಲ್ ಫಲಾಹ್ ವಾರ್ಷಿಕ ಮಹಾಸಭೆ
ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲಾ ಜಮೀಯ್ಯತುಲ್ ಫಲಾಹ್ ನ ವಾರ್ಷಿಕ ಮಹಾಸಭೆಯು ಕಂಕನಾಡಿಯಲ್ಲಿರುವ ಜಮೀಯ್ಯತುಲ್ ಫಲಾಹ್ ಸಭಾಭವನದಲ್ಲಿ ಸೆಪ್ಟೆಂಬರ್ 28 ರಂದು ಭಾನುವಾರ ನಡೆಯಿತು. ಸಂಸ್ಥೆಯ ಅಧ್ಯಕ್ಷ ಸಾಹುಲ್ ಹಮೀದ್ ಕೆ.ಕೆ. ಅದ್ಯಕ್ಷತೆ ವಹಿಸಿದ್ದರು. ಅನಿವಾಸಿ ಘಟಕದ ಪ್ರತಿನಿಧಿ ಪರ್ವೇಝ್ ಅಲಿ (ರಿಯಾದ್) ಸಭೆಯನ್ನುದ್ದೇಶಿಸಿ ಮಾತನಾಡಿದರು. ಮೊಹಿದಿನ್ ಅಹ್ಮದ್ ಸಾಹೇಬ್ (ಜಿದ್ದಾ), ಅನ್ವರ್ ಗೂಡಿನಬಳಿ (ಜುಬೈಲ್), ಮುಹಮ್ಮದ್ ರಫೀಕ್ (ಜುಬೈಲ್), ಜಿಲ್ಲಾ ಸಮಿತಿ ಸಂಘಟನಾ ಕಾರ್ಯದರ್ಶಿ ಅಬೂಬಕ್ಕರ್ ಜೆ.ಎನ್., ಪತ್ರಿಕಾ ಕಾರ್ಯದರ್ಶಿ ಮನ್ಸೂರ್ ಇಬ್ರಾಹಿಂ ಉಪಸ್ಥಿತರಿದ್ದರು.

ಜಮೀಯ್ಯತುಲ್ ಫಲಾಹ್ ಬಂಟ್ವಾಳ ಘಟಕಾದ್ಯಕ್ಷ ರಶೀದ್ ವಿಟ್ಲ, ಬೆಳ್ತಂಗಡಿ ಘಟಕಾದ್ಯಕ್ಷ ಶೇಖುಂಞಿ, ಕಾರ್ಕಳ ಘಟಕಾದ್ಯಕ್ಷ ಸೈಯದ್ ಅಬ್ಬಾಸ್, ಕುಂದಾಪುರ ಘಟಕದ ಕಾರ್ಯದರ್ಶಿ ಅಬ್ದುಲ್ ಸಲಾಂ ಚಿತ್ತೂರು, ಮಂಗಳೂರು ತಾಲೂಕು ಘಟಕದ ಕಾರ್ಯದರ್ಶಿ ಅಬ್ದುಲ್ ವಹಾಬ್, ಮಂಗಳೂರು ನಗರ ಘಟಕಾದ್ಯಕ್ಷ ಬಶೀರ್ ಅಹ್ಮದ್, ಮೂಡುಬಿದಿರೆ ಘಟಕಾದ್ಯಕ್ಷ ಅಬ್ದುಲ್ ರವೂಫ್, ಪುತ್ತೂರು ಘಟಕಾದ್ಯಕ್ಷ ಪಿ.ಪಿ. ಹಸೈನಾರ್, ಸುಳ್ಯ ಘಟಕಾದ್ಯಕ್ಷ ಮೂಸಾ ಕುಂಞಿ, ಉಡುಪಿ ಘಟಕಾದ್ಯಕ್ಷ ಖತೀಬ್ ಅಬ್ದುಲ್ ರಶೀದ್, ಕಾಪು ಘಟಕಾದ್ಯಕ್ಷ ಶಭೀ ಅಹ್ಮದ್ ಖಾಝಿ, ಬ್ರಹ್ಮಾವರ ಘಟಕಾದ್ಯಕ್ಷ ಇಬ್ರಾಹಿಂ ಸಾಹೇಬ್, ಬೈಂದೂರು ಘಟಕಾದ್ಯಕ್ಷ ಮುಹಮ್ಮದ್ ಸಿದ್ದೀಕ್ ಅನಿಸಿಕೆ ವ್ಯಕ್ತಪಡಿಸಿದರು.



ಜೊತೆ ಕಾರ್ಯದರ್ಶಿ ಅಬ್ಬೋನು ಮದ್ದಡ್ಕ ಸಂಸ್ಥೆಯ 2024-25 ನೇ ಸಾಲಿನ ವಾರ್ಷಿಕ ವರದಿ ವಾಚಿಸಿದರು. ಕೋಶಾಧಿಕಾರಿ ಕೆ.ಎಂ. ಸಿದ್ದೀಕ್ ಪುತ್ತೂರು ವಾರ್ಷಿಕ ಲೆಕ್ಕಪತ್ರ ಮಂಡಿಸಿದರು. ಪ್ರಧಾನ ಕಾರ್ಯದರ್ಶಿ ಶೇಖ್ ಅಬ್ದುಲ್ ಗಫೂರ್ ವಂದಿಸಿದರು.
ಇದೇ ವೇಳೆ ಸಂಸ್ಥೆಯ ಜಿಲ್ಲಾಧ್ಯಕ್ಷ ಕೆ.ಕೆ. ಸಾಹುಲ್ ಹಮೀದ್, ಕಾರ್ಯದರ್ಶಿ ಶೇಖ್ ಅಬ್ದುಲ್ ಗಫೂರ್, ಕೋಶಾಧಿಕಾರಿ ಕೆ.ಎಂ. ಸಿದ್ದೀಕ್ ಪುತ್ತೂರು, ಬಂಟ್ವಾಳ ಘಟಕಾದ್ಯಕ್ಷ ರಶೀದ್ ವಿಟ್ಲ, ಪ್ರಮುಖರಾದ ಎಂ.ಎಚ್. ಇಕ್ಬಾಲ್ ಮೆಲ್ಕಾರ್, ಹಾಜಿ ಮುಹಮ್ಮದ್ ಹನೀಫ್ ಗೋಳ್ತಮಜಲು, ಹಾಜಿ ಮುಹಮ್ಮದ್ ರಫೀಕ್ ಆಲಡ್ಕ, ಶಭೀ ಅಹ್ಮದ್ ಖಾಝಿ, ಶೇಖ್ ನೂರುದ್ದೀನ್, ಆದಂ ಬ್ಯಾರಿ, ಪಿ. ಮಹಮ್ಮದ್ ಪಾಣೆಮಂಗಳೂರು, ಜಮಾಲುದ್ದೀನ್ ವಿಟ್ಲ, ಬಿ. ಮುಹಮ್ಮದ್ ತುಂಬೆ, ಮೂಸಾ ಕುಂಞಿ ಸುಳ್ಯ ಅವರನ್ನು ಸನ್ಮಾನಿಸಲಾಯಿತು. ಹಕೀಂ ಕಲಾಯಿ, ಆಶಿಕ್ ಕುಕ್ಕಾಜೆ ಅವರನ್ನು ಗೌರವಿಸಲಾಯಿತು. ಉಪಾಧ್ಯಕ್ಷ ಅಶ್ಫಾಕ್ ಅಹ್ಮದ್ ಸ್ವಾಗತಿಸಿ, ಬಂಟ್ವಾಳ ಘಟಕದ ಪತ್ರಿಕಾ ಕಾರ್ಯದರ್ಶಿ ಆಶಿಕ್ ಕುಕ್ಕಾಜೆ ಕಿರಾಅತ್ ಪಠಿಸಿದರು. ಪ್ರಧಾನ ಕಾರ್ಯದರ್ಶಿ ಹಕೀಂ ಕಲಾಯಿ ಕಾರ್ಯಕ್ರಮ ನಿರೂಪಿಸಿದರು, ಕೋಶಾಧಿಕಾರಿ ಲತೀಫ್ ನೇರಳಕಟ್ಟೆ ಸಹಕರಿಸಿದರು.





