95 ವರ್ಷದ ಮೇರಿ ಕ್ರಿಸ್ತಿನ್ ಪಿರೇರಾ ವಿಧಿವಶ
ಫಾದರ್ ಗ್ರೆಗರಿ ಪಿರೇರಾ ಹಾಗೂ ಭಗಿನಿ ಸಂದ್ಯಾ BS ಇವರ ತಾಯಿ ಮತ್ತು ಫಾದರ್ ಜೋನ್ಸನ್ ಪಿರೇರಾರವರ ಅಜ್ಜಿ

ಅಕ್ಟೋಬರ್ 2ರಂದು ಸಂಜೆ 4:00 ಗಂಟೆಗೆ ಒಮ್ಜೂರ್ ಚರ್ಚ್ ನಲ್ಲಿ ಅಂತ್ಯಕ್ರಿಯೆ

ಮಂಗಳೂರು ಧರ್ಮಕ್ಷೇತ್ರದ ಮರಿಯಾಶ್ರಮ್ ತಲಪಾಡಿ ಚರ್ಚ್ ನ ಧರ್ಮಗುರು ವಂದನೀಯ ಫಾದರ್ ಗ್ರೆಗರಿ ಪಿರೇರಾ ಹಾಗೂ ಬೆಥನಿ ವಿದ್ಯಾ ಸಂಸ್ಥೆಯ ಕಾರ್ಯದರ್ಶಿ ಭಗಿನಿ ಸಂದ್ಯಾ BS ಇವರ ತಾಯಿ ಮತ್ತು ಸುರತ್ಕಲ್ ಚರ್ಚ್ ನ ಸಹಾಯಕ ಧರ್ಮಗುರು ವಂದನೀಯ ಫಾದರ್ ಜೋನ್ಸನ್ ಪಿರೇರಾರವರ ಅಜ್ಜಿ 95 ವರ್ಷ ಪ್ರಾಯದ ಮೇರಿ ಕ್ರಿಸ್ತಿನ್ ಪಿರೇರಾ ಇಂದು ಸೆಪ್ಟೆಂಬರ್ 30ರಂದು ಮಂಗಳವಾರ ಮಧ್ಯಾಹ್ನ 1 ಗಂಟೆಗೆ ಸ್ವರ್ಗಸ್ಥರಾದರು.
ಮೇರಮಜಲು ಒಮ್ಜೂರಿನ ದಿವಂಗತ ಜಾಕೋಬ್ ಪಿರೇರಾರವರ ಪತ್ನಿಯಾಗಿರುವ ಮೇರಿ ಕ್ರಿಸ್ತಿನ್ ಪಿರೇರಾರವರು ವಂದನೀಯ ಫಾದರ್ ಗ್ರೆಗರಿ ಪಿರೇರಾರವರ ಸಹಿತ ಐದು ಪುತ್ರರು, ಆರು ಪುತ್ರಿಯರು ಹಾಗೂ ಮೊಮ್ಮಕ್ಕಳನ್ನು ಅಗಲಿದ್ದಾರೆ.

ಮೇರಿ ಕ್ರಿಸ್ತಿನ್ ಪಿರೇರಾರವರು ತಮ್ಮ ಕುಟುಂಬದ ಭಾರವನ್ನು ಶ್ರಮಪಟ್ಟು ಹೊತ್ತುಕೊಂಡು, ಹನ್ನೊಂದು ಮಕ್ಕಳನ್ನು ಆಹಾರ, ಆರೈಕೆ ಮತ್ತು ಶಿಕ್ಷಣದ ಅಗತ್ಯಗಳಿಗೆ ಹಗಲು ರಾತ್ರಿ ಪರಿಶ್ರಮದಿಂದ ಬೆಳೆಸಿದವರು. ಅವರು ತಮ್ಮ ಮಕ್ಕಳಿಗೆ ಕಥೊಲಿಕ್ ಧರ್ಮದ ಮೌಲ್ಯಗಳು ಹಾಗೂ ನಂಬಿಕೆಯನ್ನು ತಾಳ್ಮೆಯಿಂದ ಮತ್ತು ದಿನನಿತ್ಯದ ಜೀವನದ ಮೂಲಕ ಬೋಧಿಸಿ, ಅವರ ಆಧ್ಯಾತ್ಮಿಕ ಬೆಳವಣಿಗೆಗೆ ಬಹುಮುಖ್ಯವಾದ ಹಾದಿ ತೋರಿಸಿದವರು. ಅವರ ತ್ಯಾಗಮಯ ಜೀವನ ಹಾಗೂ ಕುಟುಂಬಕ್ಕಾಗಿನ ನಿಸ್ವಾರ್ಥ ಸೇವೆ ಸ್ಮರಣೀಯವಾಗಿದ್ದು ಸಮಾಜಕ್ಕೆ ಮಾದರಿಯಾಗಿದೆ.
ಅವರ ಅಗಲಿಕೆಯಿಂದ ಕುಟುಂಬ ಮತ್ತು ಕ್ರೈಸ್ತ ಸಮುದಾಯದಲ್ಲಿ ಅಪಾರ ದುಃಖವಾಗಿದೆ. ಹನ್ನೊಂದು ಮಕ್ಕಳಿಗೆ ಜೀವನದ ದಾರಿ ತೋರಿಸಿದ ಅವರ ತ್ಯಾಗಮಯ ಜೀವನ ಎಲ್ಲರಿಗೂ ಪ್ರೇರಣೆಯಾಗಿದೆ. ಮನೆಯ ಮಕ್ಕಳಿಗೆ ಶಿಕ್ಷಣ ನೀಡಿ ಅವರು ಕಾಮಧೇನುನಂತೆ ಸಮಾಜಕ್ಕೆ ಕೊಡುಗೆ ನೀಡಿದ ತಾಯಿಯ ಶ್ರಮ ಮರೆಯಲಾಗದು. ಫಾದರ್ ಗ್ರೆಗರಿ, ಭಗಿನಿ ಸಂದ್ಯಾ ಹಾಗೂ ಫಾದರ್ ಜೋನ್ಸನ್ ಮತ್ತು ಕುಟುಂಬಸ್ಥರಿಗೆ ಹೃದಯಪೂರ್ವಕ ಸಂತಾಪವನ್ನು ಒಮ್ಜೂರ್ ಧರ್ಮಕೇಂದ್ರದ ಭಕ್ತಾಧಿಗಳು ಸಲ್ಲಿಸಿದ್ದಾರೆ.

ಅವರ ಅಂತ್ಯಕ್ರಿಯೆಯು ಅಕ್ಟೋಬರ್ 2ರಂದು ಗುರುವಾರ ಸಂಜೆ 4 ಗಂಟೆಗೆ ಮಂಗಳೂರು ಧರ್ಮಕ್ಷೇತ್ರಕ್ಕೆ ಒಳಪಟ್ಟ ಪವಿತ್ರ ಕುಟುಂಬಕ್ಕೆ ಸಮರ್ಪಿತ ಮೇರಮಜಲ್ ಒಮ್ಜೂರು ಚರ್ಚ್ ನಲ್ಲಿ ನೆರವೇರಲಿದೆ ಎಂದು ಕುಟುಂಬದ ಸದಸ್ಯರು ತಿಳಿಸಿದ್ದಾರೆ.
ಮೇರಿ ಕ್ರಿಸ್ತಿನ್ ಪಿರೇರಾರವರ ನಿಧನಕ್ಕೆ MLC ಐವನ್ ಡಿಸೋಜ, AICU ರಾಜಾಧಕ್ಷ ಆಲ್ವಿನ್ ಡಿಸೋಜ ಪಾನೀರ್, ಕರ್ನಾಟಕ ರಾಜ್ಯ ವಾಯುಮಾಲಿನ್ಯ ನಿಯಂತ್ರಣ ಮಂಡಳಿ ಸದಸ್ಯ ಹಾಗೂ ಉದ್ಯಮಿ ಪಿಯುಸ್ ಎಲ್. ರೊಡ್ರಿಗಸ್ ಬಂಟ್ವಾಳ, MCC ಬ್ಯಾಂಕ್ ಅಧ್ಯಕ್ಷ ಅನಿಲ್ ಲೋಬೊ, ಕಥೊಲಿಕ್ ಸಭಾ ಮಂಗುರ್ ಪ್ರದೇಶ್ (ರಿ.) ಇದರ ಕೇಂದ್ರೀಯ ಅಧ್ಯಕ್ಷ ಸಂತೋಷ್ ಡಿಸೋಜ ಬಜ್ಪೆ, ಸಾರ್ವಜನಿಕ ಸಂಪರ್ಕ ಅಧಿಕಾರಿ ಪಾವ್ಲ್ ರೋಲ್ಫಿ ಡಿಕೋಸ್ತ, ಪ್ರಧಾನ ಕಾರ್ಯದರ್ಶಿ ವಿಲ್ಮಾ ಮೊಂತೇರೊ, ಖಜಾಂಚಿ ಫ್ರಾನ್ಸಿಸ್ ಮೊಂತೇರೊ, ಮಾಜಿ ಅಧ್ಯಕ್ಷ ಸ್ಟ್ಯಾನಿ ಲೋಬೊ ಬಂಟ್ವಾಳ ಸಹಿತ ಹಲವಾರು ಗಣ್ಯರು ಸಂತಾಪ ವ್ಯಕ್ತಪಡಿಸಿದ್ದಾರೆ. ದೇವರು ದಿವಂಗತ ಮೇರಿ ಕ್ರಿಸ್ತಿನ್ ಪಿರೇರಾರವರ ಆತ್ಮಕ್ಕೆ ಶಾಶ್ವತ ವಿಶ್ರಾಂತಿ ನೀಡಲಿ ಎಂದು ಪ್ರಾರ್ಥಿಸಿದ್ದಾರೆ.




