ಮಂಗಳೂರು ಧರ್ಮಕ್ಷೇತ್ರದ ಸಿಟಿ ವಲಯದ 8ನೇ ತರಗತಿಯ ಮಕ್ಕಳಿಗೆ ಶಿಸ್ತು, ಆತ್ಮವಿಶ್ವಾಸದ ಪಾಠ
ಮಕ್ಕಳ ಜೀವನ ಮೌಲ್ಯ ಬೆಳೆಸುವ ‘ಜೀವನ್ ದಿಶಾ’ ಶಿಬಿರ


ಮಂಗಳೂರು ಧರ್ಮಕ್ಷೇತ್ರದ ಸಿಟಿ ವಲಯಕ್ಕೆ ಸೇರಿರುವ 12 ಚರ್ಚ್‌ಗಳ 8ನೇ ತರಗತಿಯ ಕ್ರೈಸ್ತ ಶಿಕ್ಷಣದ ಮಕ್ಕಳಿಗಾಗಿ ಒಂದು ದಿನದ ‘ಜೀವನ್ ದಿಶಾ’ ಶಿಬಿರವು ವಾಮಂಜೂರಿನ ಸೈಂಟ್ ಜೋಸೆಫ್ ಇಂಜಿನಿಯರಿಂಗ್ ಕಾಲೇಜಿನ ಸಭಾಂಗಣದಲ್ಲಿ ಭವ್ಯವಾಗಿ ನಡೆಯಿತು.











ವಾಮಂಜೂರು ಚರ್ಚ್‌ನ ಸಹಾಯಕ ಧರ್ಮಗುರು ವಂದನೀಯ ಫಾದರ್ ಜೀವನ್ ಶೈಲೇಶ್ ಲೋಬೊ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದ ಅವರು ಮಕ್ಕಳ ಭವಿಷ್ಯ ಜೀವನದ ದೃಷ್ಟಿಯಿಂದ ಶಿಸ್ತು, ಆತ್ಮವಿಶ್ವಾಸ, ಜವಾಬ್ದಾರಿತನ ಹಾಗೂ ಸಮಾಜಸೇವಾ ಮನೋಭಾವ ಇವುಗಳನ್ನು ಅಳವಡಿಸಿಕೊಳ್ಳುವುದು ಅತ್ಯಂತ ಮುಖ್ಯವೆಂದು ತಿಳಿಸಿದರು. ಮಕ್ಕಳು ಈಗಿನಿಂದಲೇ ತಮ್ಮಲ್ಲಿರುವ ಪ್ರತಿಭೆಗಳನ್ನು ಬೆಳೆಸಿಕೊಂಡು ಉತ್ತಮ ನಾಗರಿಕರಾಗಬೇಕು ಎಂದು ಅವರು ಸಲಹೆ ನೀಡಿದರು.












ಶಿಬಿರದಲ್ಲಿ ವಿದ್ಯಾರ್ಥಿಗಳಿಗೆ ಜೀವನ ಮೌಲ್ಯ, ನೈತಿಕತೆ, ಆತ್ಮೀಯತೆ, ಸಾಮಾಜಿಕ ಜವಾಬ್ದಾರಿ ಮುಂತಾದ ವಿಷಯಗಳ ಕುರಿತು ತಿಳಿಸಲಾಯಿತು. ಇದಲ್ಲದೇ ಆಟ, ಗುಂಪು ಚಟುವಟಿಕೆಗಳು ಹಾಗೂ ಚರ್ಚೆಗಳ ಮೂಲಕ ಮಕ್ಕಳಲ್ಲಿ ಆತ್ಮವಿಶ್ವಾಸ ವೃದ್ಧಿ ಹಾಗೂ ನಾಯಕತ್ವ ಗುಣವನ್ನು ಬೆಳೆಸುವ ಉದ್ದೇಶ ಈ ಶಿಬಿರದಲ್ಲಿ ಇತ್ತು.






ಶಿಬಿರದ ಸಮಾರೋಪ ಸಮಾರಂಭದಲ್ಲಿ ವಾಮಂಜೂರು ಚರ್ಚ್‌ನ ಪ್ರಧಾನ ಧರ್ಮಗುರು ಹಾಗೂ ಸಿಟಿ ವಲಯದ ಶ್ರೇಷ್ಠ ಗುರು ಅತೀ ವಂದನೀಯ ಫಾದರ್ ಜೇಮ್ಸ್ ಡಿಸೋಜರವರು ಉಪಸ್ಥಿತರಿದ್ದರು. ಈ ಸಂದರ್ಭದಲ್ಲಿ 12 ಚರ್ಚ್‌ಗಳ ಕ್ರೈಸ್ತ ಶಿಕ್ಷಣ ಸಂಯೋಜಕರೂ ಭಾಗವಹಿಸಿ ಮಕ್ಕಳಿಗೆ ಹಾರೈಕೆ ಸಲ್ಲಿಸಿದರು.






