ಸೌಹಾರ್ದ ಸಾಹಿತ್ಯ ವೇದಿಕೆ ವತಿಯಿಂದ ವಿಶಿಷ್ಟ ಕವಿಗೋಷ್ಠಿ
ಸೌಹಾರ್ದ ಸಾಹಿತ್ಯ ವೇದಿಕೆ, ಹುಬ್ಬಳ್ಳಿ ಇದರ ಮಂಗಳೂರು ಘಟಕ ವತಿಯಿಂದ “ಕನ್ನಡವೇ ಸತ್ಯ ಕನ್ನಡವೇ ನಿತ್ಯ” ಸ್ವರಚಿತ ಕವನ ವಾಚನ ಹಾಗೂ ಸಾರಾಂಶ ಎಂಬ ವಿಶಿಷ್ಟ ಕವಿತಾ ಗೋಷ್ಠಿ ಯು ಸಾಂಗವಾಗಿ ಅಕ್ಟೋಬರ್ 25ರ ಇಳಿಹಗಲು ಮೂರು ಗಂಟೆಗೆ ಸಂಪನ್ನವಾಯಿತು.







ಇಂದಿರಾ ಪ್ರಿಯದರ್ಶಿನಿ ಪಾರ್ಕ್, ಆಯುಷ್ ಆಸ್ಪತ್ರೆ ಹತ್ತಿರ ಲಾಲ್ ಭಾಗ್, ಪಬ್ಬಾಸ್ ಎದುರು ಮಂಗಳೂರು. ಇಲ್ಲಿ ನಡೆದ ಈ ಗೋಷ್ಠಿಯಲ್ಲಿ ಉಮೇಶ್ ಕಾರಂತ್, ಸುಲೋಚನ ನವೀನ, ಡಾ. ಸುರೇಶ್ ನೆಗಳಗುಳಿ, ರೇಖಾ ಸುದೇಶ್ ರಾವ್, ಅಶ್ವಿಜ ಶ್ರೀಧರ್, ಅರುಣಾ ನಾಗರಾಜ, ಪರಿಮಳ ಮಹೇಶ್, ಕಸ್ತೂರಿ ಜಯರಾಂ, ಗಿರೀಶ್ ಪೆರಿಯಡ್ಕ, ಆಕೃತಿ ಭಟ್, ವಿನ್ಯಾಸ, ಡಾ| ಪ್ರತಿಭಾ ಸಾಲಿಯಾನ್, ಅನಿತಾ ಶೆಣೈ, ಆರ್. ಎಂ. ಗೊಗೇರಿ ಸಹಿತ ಹಲವರು ಪರಸ್ಪರ ಇತರರ ಕವನ ವಾಚನ ಮಾಡಿದರು ಮತ್ತು ಸದ್ರಿ ಕವಿಗಳು ಅದರ ಭಾವ ವಿಶ್ಲೇಷಣೆ ಮಾಡಿದರು. ಮೋಹನ್ ಅತ್ತಾವರ ಉಪಸ್ಥಿತರಿದ್ದರು. ಗೊಗೆರಿಯವರ ತೀರ್ಥರೂಪರು ಬರೆದಿದ್ದ ಕವನವನ್ನು ವಾಚಿಸಿದ್ದು ವಿಶೇಷವಾಗಿತ್ತು. ಸರ್ವರಿಗೂ ಹಾರ್ದಿಕ ಸ್ವಾಗತ ಮಾಡಿದ ಆರ್.ಎಂ. ಗೋಗೇರಿಯವರು ಪೂರ್ಣ ನಿರ್ವಹಣೆ ಮಾಡಿದರು. ಅನಿತಾ ಶೆಣೈಯವರು ಸಹಕರಿಸಿದ್ದರು.





